HomePage_Banner
HomePage_Banner
HomePage_Banner

ಅಕ್ಷರ ದಾಸೋಹದ ಹಾಲಿನಹುಡಿ, ಎಣ್ಣೆಯನ್ನು ಮರಳಿಸುವಂತೆ ಶಿಕ್ಷಣ ಇಲಾಖೆಗೆ ಸರಕಾರದ ಆದೇಶ

Puttur_Advt_NewsUnder_1
Puttur_Advt_NewsUnder_1
  • ಶಾಲೆಗಳಿಂದ ಸಂಗ್ರಹ ಕಾರ್ಯ ಆರಂಭ- ಪೋಷಕರಿಂದ ತೀವ್ರ ವಿರೋಧ

ಪುತ್ತೂರು: ಸರಕಾರಿ ಶಾಲೆಗಳಲ್ಲಿ ಉಳಿದಿರುವ ಅಕ್ಷರದಾಸೋಹದ ಹಾಲಿನ ಹುಡಿ ಮತ್ತು ಅಡುಗೆ ಎಣ್ಣೆಯನ್ನು ಸಂಗ್ರಹಿಸಿ ಬರಪೀಡಿತ ಬಳ್ಳಾರಿ ಹಾಗೂ ಕೋಲಾರ ಜಿಲ್ಲೆಗೆ ಕಳುಹಿಸುವಂತೆ ಸರಕಾರದಿಂದ ಶಿಕ್ಷಣ ಇಲಾಖೆಗೆ ಸುತ್ತೋಲೆ ಹೊರಡಿಸಲಾಗಿದೆ. ಆಹಾರ ಪದಾರ್ಥಗಳನ್ನು ಶಾಲೆಗಳಿಂದ ಸಂಗ್ರಹಿಸುತ್ತಿರುವ ಕ್ರಮಕ್ಕೆ ಪೋಷಕರಿಂದ ತೀವ್ರ ವಿರೋಧವೂ ವ್ಯಕ್ತವಾಗುತ್ತಿದೆ.


ಸರಕಾರ ಯಾಕೆ ಸಂಗ್ರಹ ಮಾಡುತ್ತಿದೆ
ಕರ್ನಾಟಕದ ಕೋಲಾರ ಮತ್ತು ಬಳ್ಳಾರಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಸರಕಾರ ಘೋಷಣೆ ಮಾಡಿದೆ. ಈ ಎರಡೂ ಜಿಲ್ಲೆಗಳ ಶಾಲೆಗಳಲ್ಲಿರುವ ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ವಿತರಣೆ ಮಾಡುವ ಉದ್ದೇಶದಿಂದ ರಾಜ್ಯದ ಇತರೆ ಜಿಲ್ಲೆಗಳಿಂದ ಸರಕಾರಿ ಶಾಲೆಗಳಿಗೆ ಅಕ್ಷದಾಸೋಹದಡಿ ವಿತರಣೆ ಮಾಡಿ ಉಳಿಕೆಯಾದ ಹಾಲಿನ ಹುಡಿ ಮತ್ತು ಅಡುಗೆ ಎಣ್ಣೆಯನ್ನು ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ. ಕಳೆದ ಮಾರ್ಚ್ ತಿಂಗಳಲ್ಲೇ ಶಾಲೆ ಮುಚ್ಚಲಾಗಿದೆ. ಆ ಬಳಿಕ ಶಾಲೆಗಳಲ್ಲಿ ಅಕ್ಷರದಾಸೋಹ ನಿಂತು ಹೋಗಿದೆ. ಎಪ್ರಿಲ್ ತಿಂಗಳ ವರೆಗೆ ಶಾಲೆಗಳಿಗೆ ಆಹಾರ ಧಾನ್ಯ ಸೇರಿದಂತೆ ಎಲ್ಲಾ ಪದಾರ್ಥಗಳನ್ನು ವಿತರಣೆ ಮಾಡಲಾಗಿದೆ. ಇವುಗಳ ಪ್ಯಕಿ ಬಹುತೇಕ ಶಾಲೆಗಳಲ್ಲಿ ಹಾಲಿನ ಹುಡಿ ಮತ್ತು ಎಣ್ಣೆ ಬಳಕೆಯಾಗಿರಲಿಲ್ಲ.

ಸ್ಥಳೀಯವಾಗಿ ವಿತರಿಸುವಂತೆ ಆಗ್ರಹ
ಶಾಲೆಗಳಲ್ಲಿ ಉಳಿದಿರುವ ಅಕ್ಷರದಾಸೋಹದ ಅಕ್ಕಿ, ಎಣ್ಣೆ ಹಾಗೂ ಹಾಲಿನ ಹುಡಿಯನ್ನು ಅದೇ ಶಾಲೆಯ ವಿದ್ಯಾರ್ಥಿಗಳಿಗೆ ಹಂಚುವಂತಿಲ್ಲ. ಸರಕಾರದ ಸುತ್ತೋಲೆಯ ಪ್ರಕಾರ ಬರಪೀಡಿತ ಎರಡು ಜಿಲ್ಲೆಗಳಿಗೆ ಅವುಗಳನ್ನು ಕಳುಹಿಸಬೇಕಿದೆ. ಕೊರೋನಾ ಲಾಕ್‌ಡೌನ್ ಪರಿಣಾಮದಿಂದ ಬಹುತೇಕ ಕಡೆಗಳಲ್ಲಿ ಬರದ ವಾತಾವರಣವೇ ನಿರ್ಮಾಣವಾಗಿದೆ. ಸರಕಾರ ಬರಪೀಡಿತ ಜಿಲ್ಲೆಗಳಿಗೆ ನೇರವಾಗಿ ಅಹಾರ ಧಾನ್ಯಗಳನ್ನು ಕಳುಹಿಸುವ ಬದಲು ಸರಕಾರಿ ಶಾಲೆಗಳಲ್ಲಿ ಉಳಿಕೆಯಾದ ಆಹಾರ ಪದಾರ್ಥಗಳನ್ನು ಯಾಕೆ ಕಳುಹಿಸಬೇಕು ಅದನ್ನು ಅಯಾ ವ್ಯಾಪ್ತಿಯ ಶಾಲೆಯ ಮಕ್ಕಳಿಗೆ ಪೌಷ್ಠಿಕ ಆಹಾರವಾಗಿ ವಿತರಣೆ ಮಾಡುವ ಬದಲು ಸರಕಾರ ತಾರತಮ್ಯ ಧೋರಣೆ ಅನುಸರಿಸುತ್ತಿದೆ ಎಂಬ ಆರೋಪವೂ ಪೋಷಕರಿಂದ ವ್ಯಕ್ತವಾಗಿದೆ.

ಅನುದಾನದ ಬಡ್ಡಿಯೂ ಸರಕಾರಕ್ಕೆ ಮರುಪಾವತಿ
ಸರಕಾರಿ ಶಾಲೆಗಳಿಗೆ ಸರಕಾರದಿಂದ ವಿವಿಧ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿದೆ. ಈ ಅನುದಾನ ಈಗಾಗಲೇ ಶಾಲೆಯ ಖಾತೆಗೆ ಜಮಾವಣೆಯಾಗಿದೆ. ಲಾಕ್‌ಡೌನ್ ಕಾರಣದಿಂದ ಬಹುತೇಕ ಶಾಲೆಗಳಲ್ಲಿ ಯಾವುದೇ ಕಾಮಗಾರಿ ನಡೆಯದ ಕಾರಣ ಅನುದಾನ ಖಾತೆಯಲ್ಲೇ ಉಳಿದಿದೆ. ಸರಕರದ ಹೊಸ ಸುತ್ತೋಲೆ ಪ್ರಕಾರ ಅನುದಾನದ ಬಡ್ಡಿ ಹಣವನ್ನು ಸಂಗ್ರಹಿಸಿ ಸರಕಾರಕ್ಕೆ ಮರುಪಾವತಿ ಮಾಡಬೇಕಿದೆ. ಇಷ್ಟು ವರ್ಷಗಳಲ್ಲಿ ಅನುದಾನದ ಬಡ್ಡಿ ಹಣವನ್ನು ಶಾಲೆಯ ಕಾಮಗಾರಿಗೆ ಬಳಕೆ ಮಾಡಲಾಗುತ್ತಿತ್ತು ಈ ಬಾರಿ ಸರಕಾರ ಹೊಸ ವ್ಯವಸ್ಥೆಯನ್ನು ಜಾರಿ ಮಾಡಿದೆ.

ಸರಕಾರದ ಬಳಿ ಹಣ ಇಲ್ಲವೇ?
ಶಾಲೆಯಲ್ಲಿ ಉಳಿದಿರುವ ಹಾಲಿನ ಹುಡಿ ಮತ್ತು ಎಣ್ಣೆಯನ್ನು ಸಂಗ್ರಹಿಸುವುದರ ಜೊತೆಗೆ ಅನುದಾನದ ಬಡ್ಡಿ ಹಣವನ್ನು ಸರಕಾರಕ್ಕೆ ಮರುಪಾವತಿ ಮಾಡುವ ಸುತ್ತೋಲೆಯನ್ನು ಶಿಕ್ಷಣ ಇಲಾಖೆಗೆ ಕಳುಹಿಸಲಾಗಿದ್ದು ಸರಕಾರಕ್ಕೆ ಇದನ್ನು ಸಂಗ್ರಹಿಸುವ ಅಗತ್ಯತೆ ಇತ್ತೇ? ಹಾಗಾದರೆ ಸರಕಾರದ ಬಳಿಕ ಹಣ ಇಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕರದ್ದು. ಬಳ್ಳಾರಿ ಮತ್ತು ಕೋಲಾರ ಜಿಲ್ಲೆ ಬರಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಿದ ಸರಕಾರ ಅಲ್ಲಿಗೆ ಹೆಚ್ಚು ಅನುದಾನವನ್ನು ನೀಡಿ ಅಲ್ಲಿನ ಜನತೆಗೆ ನೆರವು ನೀಡಬಹುದಿತ್ತಲ್ಲವೇ ಎಂಬ ಪ್ರಶ್ನೆಯೂ ಸಾರ್ವಜನಿಕ ವಲಯದಲ್ಲಿ ಉದ್ಭವವಾಗಿದೆ.

ಸರಕಾರದ ಸುತ್ತೋಲೆಯಂತೆ ನಾವು ಪ್ರತೀ ಶಾಲೆಯಿಂದ ಹಾಲಿನಹುಡಿ ಮತ್ತು ಎಣ್ಣೆಯನ್ನು ಸಂಗ್ರಹಿಸುವ ಕಾರ್ಯವನ್ನು ಮಾಡುತ್ತಿದ್ದೇವೆ. ಸಂಗ್ರಹವಾದ ಹಾಲು ಮತ್ತು ಎಣ್ಣೆಯನ್ನು ಬಳ್ಳಾರಿ ಹಾಗೂ ಕೋಲಾರಕ್ಕೆ ಕಳುಹಿಸಿ ಕೊಡಲಾಗುತ್ತದೆ. -ಮಲ್ಲೇಶ್. ಡಿಡಿಪಿಐ, ಮಂಗಳೂರು

ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಸರಕಾರದ ಸುತ್ತೋಲೆಯನ್ನು ತರಿಸಿ ಪರಿಶೀಲನೆ ಮಾಡುತ್ತೇನೆ. – ಸಂಜೀವ ಮಠಂದೂರು , ಶಾಸಕರು ಪುತ್ತೂರು

ಮಕ್ಕಳಿಗೆ ಕೊಡುವ ಉದ್ದೇಶದಿಂದ ಸರಕಾರ ಹಾಲಿನ ಹುಡಿ ಮತ್ತು ಎಣ್ಣೆಯನ್ನು ಶಾಲೆಗೆ ಕಳುಹಿಸಿದೆ. ಆದರೆ ರಜೆಯ ಕಾರಣಕ್ಕೆ ಅದರ ಬಳಕೆಯಾಗಿಲ್ಲ. ಶಾಲೆಗಳಿಗೆ ರಜೆ ಇರುವ ಕಾರಣ ಶಾಲೆಯ ಮಕ್ಕಳಿಗೆ ಅದನ್ನು ವಿತರಣೆ ಮಾಡಬೇಕಿತ್ತು. ವಾಪಸ್ ಕಳಿಸುವುದರಲ್ಲಿ ನ್ಯಾಯವಿಲ್ಲ. ಜನಪ್ರತಿನಿಧಿಗಳು ಈ ವಿಚಾರವನ್ನು ಸರಕಾರದ ಗಮನಕ್ಕೆ ತಂದು ಮಕ್ಕಳಿಗೆ ವಿತರಣೆ ಮಾಡುವಲ್ಲಿ ಕ್ರಮಕೈಗೊಳ್ಳಬೇಕಿದೆ. – ಮಹಮ್ಮದ್ ಬಡಗನ್ನೂರು, ಗೌರವಾಧ್ಯಕ್ಷರು ಬಡಗನ್ನೂರು ಹಿಪ್ರಾ ಶಾಲಾ ಎಸ್‌ಡಿಎಂಸಿ
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.