Breaking News

ನಗರಸಭಾ ವ್ಯಾಪ್ತಿಯ ಪ್ರಥಮ ಕೊರೋನಾ ಸೋಂಕಿತ ವ್ಯಕ್ತಿ ಗುಣಮುಖ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನಗರಸಭೆ ವ್ಯಾಪ್ತಿಯಲ್ಲಿ ಪ್ರಥಮ ಕೊರೋನಾ ಪ್ರಕರಣ ಬೆಳಕಿಗೆ ಬಂದಿದ್ದ ನಗರಸಭಾ ಸದಸ್ಯೆಯ ಮಾವನಾದ ಚಿಕ್ಕಮುಡ್ನೂರು ನಿವಾಸಿಯೊಬ್ಬರು ಗುಣಮುಖರಾಗಿ ಮನೆಗೆ ಸೇರಿದಿದ್ದಾರೆ. ಜೂ.20ರಂದು ಅವರಿಗೆ ಕೊರೋನಾ ದೃಢಗೊಂಡ ಕುರಿತು ವರದಿ ಬಂದಿದ್ದು, ಇದೀಗ 7 ದಿನಗಳ ಬಳಿಕ ಅವರ ವರದಿಯಲ್ಲಿ ಕೊರೋನಾ ನೆಗೆಟಿವ್ ಆಗಿರುವ ಹಿನ್ನಲೆಯಲ್ಲಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದ್ದಾರೆ.

ಜ್ವರ, ಶೀತ, ಕೆಮ್ಮು ಭಾದೆಯಿಂದ ಪುತ್ತೂರು ಸರಕಾರಿ ಅಸ್ಪತ್ರೆಗೆ ಚಿಕಿತ್ಸೆಗೆಂದು ಜೂ. 18ರಂದು ಚಿಕ್ಕಮುಡ್ನೂರು ರಾಗಿದಕುಮೇರು ಸುಮಾರು 70 ರ ವಯೋಮಾನದವರೊಬ್ಬರ ಗಂಟಲು ದ್ರವ ಮಾದರಿ ಪರೀಕ್ಷೆಯ ವರದಿಯಲ್ಲಿ ಕೊರೋನಾ ದೃಢ ಎಂದು ವರದಿ ಬಂದಿತ್ತು. ಈ ನಡುವೆ ಅವರನ್ನು ಮಂಗಳೂರು ವೆನ್‌ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಯಿತು. ಇದರ ಬೆನ್ನಲ್ಲೆ ವ್ಯಕ್ತಿ ಸೊಸೆ ನಗರಸಭಾ ಸದಸ್ಯೆ ಮತ್ತು ಮನೆ ಮಂದಿಗೂ ಕೊರೋನಾ ಪರೀಕ್ಷೆ ಮಾಡಲಾಯಿತ್ತಾರೂ ಅವರೆಲ್ಲರ ವರದಿ ನೆಗೆಟಿವ್ ಬಂದ ಹಿನ್ನಲೆಯಲ್ಲಿ ಆಂತಕ ದೂರವಾಗಿತ್ತು.

ಇದೀಗ ಮಂಗಳೂರು ವೆನ್‌ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ವ್ಯಕ್ತಿಯ ಗಂಟಲು ದ್ರವ ಮಾದರಿಯನ್ನು 7 ದಿನಗಳ ಬಳಿಕ ಮತ್ತೊಮ್ಮೆ ಪರೀಕ್ಷೆ ಮಾಡಿದ ವೇಳೆ ವ್ಯಕ್ತಿಗೆ ನೆಗೆಟಿವ್ ವರದಿ ಬಂದಿದ್ದು, ವ್ಯಕ್ತಿ ಪೂರ್ಣ ಗುಣಮುಖರಾಗಿದ್ದಾರೆ. ಹಾಗಾಗಿ ಆಸ್ಪತ್ರೆಯಿಂದ ವ್ಯಕ್ತಿಯನ್ನು ಬಿಡುಗಡೆಗೊಳಿಸಿ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಪುತ್ತೂರು ನಗರಸಭೆ ವ್ಯಾಪ್ತಿಯ ಪ್ರಥಮ ಕೊರೋನಾ ಪ್ರಕರಣ ಇದಾಗಿದ್ದು ಎಲ್ಲರೂ ಆತಂಕದಲ್ಲಿದ್ದ ಇದೀಗ ವರದಿ ನೆಗಿಟಿವ್‌ ಬಂದ ಹಿನ್ನೆಲೆಯಲ್ಲಿ ಎಲ್ಲರ ಆತಂಕ ದೂರವಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.