Home_Page_Advt
Home_Page_Advt
Home_Page_Advt

ಪುತ್ತೂರನ್ನು ಕಾಡುತ್ತಿರುವ ಕೊರೋನಾ -ನಗರಭಾ ವ್ಯಾಪ್ತಿಯಲ್ಲಿ ಇನ್ನೊಂದು ಪ್ರಕರಣ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿಯ ಅಟ್ಟಹಾಸ ಮುಂದುವರಿದಿದ್ದು ಜೂ.೨೮ರಂದು ಪುತ್ತೂರು ಕೃಷ್ಣನಗರ ಮಹಿಳೆ ಸಹಿತ ಒಂದೇ ದಿನ ೯೭ ಮಂದಿಯಲ್ಲಿ ಸೋಂಕು ಪತ್ತೆಯಾಗಿರುವುದು ಮತ್ತು ಮೂರು ಮಂದಿ ಕೊರೋನಾಗೆ ಬಲಿಯಾಗಿರುವುದು ಜಿಲ್ಲೆಯ ಜನತೆಯನ್ನು ಜರ್ಝರಿತಗೊಳಿಸಿದೆ.
ಇಲ್ಲಿನ ಬೊಳುವಾರಿನಲ್ಲಿರುವ ಮಾಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಕೃಷ್ಣನಗರ ನಿವಾಸಿ ಮಹಿಳೆಯೊಬ್ಬರಿಗೆ ಕೊರೋನಾ ಸೋಂಕು ಇರುವುದು ಜೂ.೨೮ರಂದು ದೃಢಪಟ್ಟಿದೆ. ನಗರಸಭಾ ವ್ಯಾಪ್ತಿಯಲ್ಲಿ ಪತ್ತೆಯಾದ ಮೂರನೇ ಪ್ರಕರಣ ಇದಾಗಿದೆ.ಮಳಿಗೆಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಕೆಲಸ ಮಾಡುತ್ತಿರುವ ಸಿಬಂದಿಗಳನ್ನು ಸಾಮೂಹಿಕವಾಗಿ ಕೋವಿಡ್ ಪರೀಕ್ಷೆ ನಡೆಸುವ ಕುರಿತ ಸೂಚನೆಯಂತೆ ಸಿಬಂದಿಗಳನ್ನು ವಿಭಾಗೀಕರಿಸಿ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಪ್ರಾಥಮಿಕ ಪರೀಕ್ಷೆಯಲ್ಲೇ ಓರ್ವ ಮಹಿಳೆಗೆ ಹೋಮ್ ಕೊರಂಟೈನ್ ಮಾಡುವಂತೆ ಸೂಚಿಸಲಾಗಿತ್ತು. ಜೊತೆಗೆ ಅರೋಗ್ಯ ಸಹಾಯಕಿಯರು ಮತ್ತು ಆಶಾ ಕಾರ್ಯಕರ್ತರು ಆಗಾಗೆ ಮನೆಗಳಿಗೆ ಭೇಟಿ ನೀಡಿ ಆರೋಗ್ಯ ವಿಚಾರಣೆ ನಡೆಸುತ್ತಿದ್ದರು. ಇದೀಗ, ಹೋಂ ಕ್ವಾರಂಟೈನ್‌ನಲ್ಲಿದ್ದ ಮಹಿಳೆಗೆ ಕೊರೋನಾ ದೃಢಪಟ್ಟಿದೆ.ಆಕೆಯನ್ನು ಸಂಜೆ ಮಂಗಳೂರು ಕೋವಿಡ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.ಸಿಬಂದಿಗೆ ಸೋಂಕು ದೃಢಪಟ್ಟ ಬೆನ್ನಲ್ಲೇ ಮಧ್ಯಾಹ್ನದ ಬಳಿಕ ಮಾಲ್ ಬಂದ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.


ಗ್ರಾಹಕರು, ಸ್ಥಳೀಯರು ಆತಂಕದಲ್ಲಿ:
ಇದೀಗ ಸೋಂಕು ಪತ್ತೆಯಾಗಿರುವ ಮಹಿಳೆ ಕೆಲಸ ಮಾಡಿಕೊಂಡಿದ್ದ ಮಾಲ್‌ಗೆ ಪ್ರತಿನಿತ್ಯ ಸಾವಿರಾರು ಗ್ರಾಹಕರು ಬಂದು ವ್ಯವಹರಿಸುತ್ತಿದ್ದು ಇದೀಗ ಸಿಬಂದಿಗೆ ಸೋಂಕು ಪತ್ತೆಯಾಗಿರುವುದರಿಂದ ಅವರೆಲ್ಲರೂ ಸಹಜವಾಗಿ ಆತಂಕಕ್ಕೊಳಗಾಗುವಂತಾಗಿದೆ.ಮತ್ತೊಂದೆಡೆ ಮಳಿಗೆ ಬಳಿಯಲ್ಲೇ ಇರುವ ಹೊಟೇಲ್, ಇತರ ಮಳಿಗೆಗಳ ಸಿಬಂದಿಗಳು, ಗ್ರಾಹಕರೂ ಆತಂಕಕ್ಕೊಳಗಾಗಿದ್ದಾರೆ.
ಒಂದೇ ದಿನ ೯೭ ಮಂದಿಗೆ ಸೋಂಕು:
ಕೃಷ್ಣನಗರ ನಿವಾಸಿ ಮಹಿಳೆ ಸೇರಿ ದ.ಕ.ಜಿಲ್ಲೆಯಲ್ಲಿ ಒಂದೇ ದಿನ ೯೭ ಮಂದಿಗೆ ಸೋಂಕು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ ೬೭೩ಕ್ಕೆ ಏರಿಕೆಯಾಗಿದೆ.ಜೂ.೨೮ರಂದು ಸೋಂಕು ಪತ್ತೆಯಾದವರ ಪೈಕಿ ೭೪ ಪುರುಷರು, ೨೨ ಮಹಿಳೆಯರು ಮತ್ತು ಓರ್ವ ೧೦ರ ಬಾಲಕನಾಗಿದ್ದಾರೆ.೨೧ ಮಂದಿಯಲ್ಲಿ ಶೀತ ಜ್ವರದ ಲಕ್ಷಣದೊಂದಿಗೆ ಸೋಂಕು ಕಾಣಿಸಿಕೊಂಡಿದೆ.ಉಸಿರಾಟ ಸಮಸ್ಯೆಯೊಂದಿಗೆ ೫ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದರೆ, ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ ೧೦ ಮಂದಿಗೆ ಸೋಂಕು ಹರಡಿದೆ.ಉಳಿದಂತೆ ವಿದೇಶದಿಂದ ಆಗಮಿಸಿ ಕ್ವಾರಂಟೈನ್‌ನಲ್ಲಿದ್ದ ೩೨ ಮಂದಿ,ಚೆನ್ನೈನಿಂದ ಆಗಮಿಸಿ ಕ್ವಾರಂಟೈನ್‌ನಲ್ಲಿದ್ದ ಇಬ್ಬರು ಮತ್ತು ಮುಂಬೈನಿಂದ ಆಗಮಿಸಿ ಕ್ವಾರಂಟೈನ್‌ನಲ್ಲಿದ್ದ ಒಬ್ಬರಿಗೆ ಸೋಂಕು ಪತ್ತೆಯಾಗಿದೆ.೨೮ ಮಂದಿಯ ಸೋಂಕಿನ ಮೂಲ ಪತ್ತೆಯಾಗಿಲ್ಲ.ಮೂಲ ಪತ್ತೆಯಾಗದೇ ಪಾಸಿಟಿವ್ ಕಾಣಿಸಿಕೊಳ್ಳುತ್ತಿರುವುದು ಸೋಂಕು ಸಮುದಾಯಕ್ಕೆ ಹಬ್ಬುತ್ತಿರುವ ಆತಂಕಕ್ಕೆ ಕಾರಣವಾಗಿದೆ.
೬ ಮಂದಿ ಬಿಡುಗಡೆ:
ಸೋಂಕಿತರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಲ್ಲಿನ ರಾಗಿದಕುಮೇರು ನಿವಾಸಿ ಸಹಿತ ಆರು ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಜೂ.೨೮ರಂದು ಬಿಡುಗಡೆ ಹೊಂದಿದ್ದಾರೆ.ಇದರಿಂದಾಗಿ ಒಟ್ಟು ೪೨೨ ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಂತಾಗಿದೆ.
೧೨೧೪೧ ನೆಗೆಟಿವ್, ೬೭೩ ಪಾಸಿಟಿವ್:
ಜಿಲ್ಲೆಯಲ್ಲಿ ಈ ತನಕ ಒಟ್ಟು ೧೩೯೨೪ ಮಂದಿಯ ಗಂಟಲು ದ್ರವವನ್ನು ಕೋವಿಡ್ ಪರೀಕ್ಷೆಗೆ ಕಳುಹಿಸಲಾಗಿತ್ತು.ಜೂ.೨೮ರಂದು ೩೭೭ ಮಂದಿಯ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ.ಈ ತನಕ ವರದಿ ಬಂದಿರುವ ೧೨೮೧೪ ಮಂದಿಯಲ್ಲಿ ೧೨೧೪೧ ಮಂದಿಗೆ ನೆಗೆಟಿವ್ ಹಾಗೂ ೬೭೩ ಮಂದಿಗೆ ಪಾಸಿಟಿವ್ ಪತ್ತೆಯಾಗಿದೆ.ಈ ದಿನ ವರದಿ ಬಂದಿರುವ ೧೭೮ ಪ್ರಕರಣಗಳಲ್ಲಿ ೯೭ ಪಾಸಿಟಿವ್ ಆಗಿದ್ದು ೮೧ ನೆಗೆಟಿವ್ ಆಗಿದೆ.೪೮೦ ಮಂದಿಯ ವರದಿಗಾಗಿ ಕಾಯಲಾಗುತ್ತಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.