HomePage_Banner
HomePage_Banner
HomePage_Banner
HomePage_Banner
HomePage_Banner

ಸ್ವರ್ಣ ಶಿಲ್ಪಿ ವಾಳ್ತಾಜೆ ಗಣಪತಿ ಆಚಾರ್ಯ ನಿಧನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಹಾರಾಡಿ ನೇತಾಜೆ ರಸ್ತೆ ನಿವಾಸಿ ವಾಳ್ತಾಜೆ ಕುಟುಂಬದ ಗಣಪತಿ ಆಚಾರ್ಯ(89ವ)ರವರು ಜೂ.27ರಂದು ನಿಧನರಾದರು.  ಸ್ವರ್ಣ ಶಿಲ್ಪಿಯಾಗಿದ್ದ ಅವರು ಹಾರಾಡಿಯಲ್ಲಿರುವ ತನ್ನ ಪುತ್ರನ ಜೊತೆಗಿದ್ದರು. ಆರ್.ಎಸ್.ಎಸ್. ಸ್ವಯಂ ಸೇವಕರಾಗಿ, ಜನಸಂಘ ಕಾಲದಲ್ಲಿ ಸಂಘಟನೆಯಲ್ಲಿ ಗುರುತಿಸಿಕೊಂಡ ಅವರು ವಿಶ್ವಕರ್ಮ ಸಮಾಜದ ಏಳಿಗೆಗಾಗಿ ಶ್ರಮಿಸಿದ್ದರು.

ಮೃತರು ಪತ್ನಿ ಪ್ರೇಮ, ಪುತ್ರರಾದ ಸ್ವರ್ಣೋದ್ಯಮಿಗಳಾದ ಪ್ರದೀಪ್ ಕುಮಾರ್ ಆಚಾರ್ಯ, ಪ್ರಕಾಶ್ ಆಚಾರ್ಯ, ವಿದೇಶದಲ್ಲಿರುವ ಪ್ರಮೋದ್ ಅಚಾರ್ಯ, ಪುತ್ರಿ ಉಷಾ ಕುಮಾರಸ್ವಾಮಿ ಆಚಾರ್ಯ, ಅಳಿಯ, ಸೊಸೆಯಂದಿರು, ಮೊಮ್ಮಕ್ಕಳು, ಓರ್ವ ಸಹೋದರ, ಬಂದು ಮಿತ್ರರನ್ನು ಅಗಲಿದ್ದಾರೆ. ಶಾಸಕ ಸಂಜೀವ ಮಠಂದೂರು, ನಗರಸಭಾ ಸ್ಥಳೀಯ ಸದಸ್ಯೆ ಪ್ರೇಮಲತಾ ನಂದಿಲ, ಬಿಜೆಪಿ ನಗರ ಮಂಡಲದ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ರಾಮ್‌ದಾಸ್ ಹಾರಾಡಿ, ಬಿಜೆಪಿ ಪ್ರಮುಖರಾದ ಅಶೋಕ್ ಹಾರಾಡಿ, ರಾಧಾಕೃಷ್ಣ ಗೌಡ ನಂದಿಲ, ಮಾಜಿ ಪುರಸಭಾ ಸದಸ್ಯೆ ಜ್ಯೋತಿ ಆರ್ ನಾಯಕ್, ವಿಶ್ವಕರ್ಮ ಸಮಾಜ ಬಾಂಧವರು, ಸ್ಥಳೀಯರು ಮೃತರ ಮನೆಗೆ ಬಂದು ಸಂತಾಪ ಸೂಚಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.