Home_Page_Advt
Home_Page_Advt
Home_Page_Advt

ಕುಂಬ್ರಕ್ಕೆ ಬಂದ ರಾಜಸ್ಥಾನದ ಕಾರ್ಮಿಕರು | ಕ್ವಾರಂಟೈನ್‌ನಲ್ಲಿರದೆ ಸಾರ್ವಜನಿಕ ಸ್ಥಳದಲ್ಲಿ ತಿರುಗಾಟ: ಸಾರ್ವಜನಿಕರಿಂದ ಇಲಾಖೆಗೆ ದೂರು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ರಾಜಸ್ಥಾನ ಮೂಲದ 9 ಮಂದಿ ಕಾರ್ಮಿಕರು ಜೂ. 27ರಂದು ರಾತ್ರಿ ಕುಂಬ್ರಕ್ಕೆ ಬಂದಿದ್ದು , ಕ್ವಾರಂಟೈನ್‌ಗೆ ತೆರಳದೆ ನೇರವಾಗಿ ಕುಂಬ್ರದಲ್ಲಿರುವ ಬಾಡಿಗೆ ಕೋಣೆಯಲ್ಲಿ ವಾಸ್ತವ್ಯ ಮಾಡುತ್ತಿದ್ದು ಇದನ್ನರಿತ ಸಾರ್ವಜನಿಕರು ಇಲಾಖೆಯ ಅಧಿಕಾರಿಗಳಿಗೆ, ಪೊಲೀಸರಿಗೆ ಮಹಿತಿ ನೀಡಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಕಾರ್ಮಿಕರನ್ನು ಕೋಣೆ ಬಿಟ್ಟು ತೆರಳದಂತೆ ಎಚ್ಚರಿಕೆ ನೀಡಿದ ಘಟನೆ ಜೂ. 28ರಂದು ಭಾನುವಾರ ನಡೆದಿದೆ.

ಕಳೆದ ಹಲವು ವರ್ಷಗಳಿಂದ ಕುಂಬ್ರದ ಕಟ್ಟಡವೊಂದರ ಬಾಡಿಗೆ ಕೋಣೆಯೊಂದರಲ್ಲಿ ವಾಸ್ತವ್ಯವಿದ್ದ 9 ಮಂದಿ ಕಾರ್ಮಿಕರು ಲಾಕ್‌ಡೌನ್ ಸಡಿಲಿಕೆ ವೇಳೆ ಊರಿಗೆ ತೆರಳಿದ್ದರು. ದೇಶಾದ್ಯಂತ ಲಾಕ್‌ಡೌನ್ ತೆರವುಗೊಂಡ ಕಾರಣಕ್ಕೆ ಕುಂಬ್ರಕ್ಕೆ ಬಂದಿದ್ದಾರೆ. ಒಂದೂವರೆ ತಿಂಗಳುಗಳ ಕಾಲ ರಾಜಸ್ಥಾನದಲ್ಲಿ ಇದ್ದು ಜೂ. 27ರಂದು ತಡ ರಾತ್ರಿ ಕುಂಬ್ರಕ್ಕೆ ಬಂದು ತಲುಪಿದ್ದರು. ಈ ಹಿಂದೆ ವಾಸ್ತವ್ಯ ಮಾಡುತ್ತಿದ್ದ ಬಾಡಿಗೆ ಕೋಣೆಯಲ್ಲೇ ವಾಸ್ತವ್ಯ ಮಾಡಿ ಜೂ. 28 ರಂದು ಬೆಳಿಗ್ಗೆ ಇವರ ಪೈಕಿ ೫ ಜನ ಕುಂಬ್ರ ಪೇಟೆ ಸುತ್ತಾಡಿದ್ದಾರೆ. ಇವರ ಕೈಯ್ಯಲ್ಲಿ ಸೀಲು ಇರುವುದನ್ನು ಕಂಡು ಅನುಮಾನಗೊಂಡ ಸಾರ್ವಜನಿಕರು ಇವರನ್ನು ಪ್ರಶ್ನಿಸಿದ್ದಾರೆ. ಆ ವೇಳೆ ನಾವು ಇಲ್ಲಿಯೇ ಈ ಮೊದಲು ಇದ್ದೆವು ಲಾಕ್‌ಡೌನ್ ಮುಗಿದ ಬಳಿಕ ಊರಿಗೆ ಹೋಗಿ ಅಲ್ಲಿಂದ ಪುನ ಬಂದಿದ್ದೇವೆ ಎಂದು ತಿಳಿಸಿದ್ದಾರೆ. ಕ್ವಾರಂಟೈನ್‌ಗೆ ಯಾಕೆ ಹೋಗಿಲ್ಲ ಎಂದು ಸಾರ್ವಜನಿಕರು ಪ್ರಶ್ನಿಸಿದಾಗ ನಮಗೆ ಗೊತ್ತಿಲ್ಲ ನಮ್ಮನ್ನು ಯರೂ ಕ್ವಾರಂಟೈನ್‌ಗೆ ತೆರಳಿ ಎಂದು ಹೇಳಿಲ್ಲ ಎಂದು ತಿಳಿಸಿದ್ದಾರೆ. ಇದರಿಂದ ಅನುಮಾನಗೊಂಡ ಸಾರ್ವಜನಿಕರು ಸಂಪ್ಯ ಗ್ರಾಮಾಂತರ ಪೊಲೀಸರಿಗೆ, ಆಶಾ ಕಾರ್ಯಕರ್ತೆಯರಿಗೆ, ಗ್ರಾಮದ ಆರೋಗ್ಯ ಕಾರ್ಯಕರ್ತೆ ಹಾಗೂ ಒಳಮೊಗ್ರು ಗ್ರಾಪಂ ಪಿಡಿಒಗೆ ಮಾಹಿತಿ ನೀಡಿದ್ದಾರೆ.

ಸಂಜೆ ವೇಳೆ ಸಂಪ್ಯ ಗ್ರಾಮಾಂತರ ಠಾಣೆ ಎಎಸ್‌ಐ ತಿಮ್ಮಯ್ಯ ನಾಯ್ಕ್ , ಆಶಾಕಾರ್ಯಕರ್ತೆ ಚಂದ್ರಾವತಿ ಸ್ಥಳಕ್ಕೆ ಭೇಟಿ ಕಾರ್ಮಿಕರನ್ನು ಬಾಡಿಗೆ ಕೋಣೆಯಿಂದ ಹೊರ ಬರದಂತೆ ಎಚ್ಚರಿಕೆ ನೀಡಿದ್ದಾರೆ. ಬಳಿಕ ಅವರನ್ನು 14 ದಿನಗಳ ಕಾಲ ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

About The Author

Related posts

1 Comment

  1. hasainarkuyyar

    ಅವರು ಸೀಲ್ ಡೌನ್ನಲ್ಲಿದ್ದು ಅವರಿಗೆ ದಿನನಿತ್ಯ ಬಳಕೆಯ ಯಾವುದೇ ಸಾಮಗ್ರಿಗಳ ವೈವಸ್ತೆಯನ್ನು ಮಾಡದಿರುವುದರಿಂದರಿಂದ ಅವರು ಹೊರಗೆ ಬಂದಿದ್ದೇವೆ ಎಂದು ಅಳಲು ತೋಡಿಕೊಂಡಿದ್ದಾರೆ

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.