HomePage_Banner
HomePage_Banner
HomePage_Banner
HomePage_Banner

ರೋಟರಿ ಸೆಂಟ್ರಲ್ ಪ್ರಾಯೋಜಕತ್ವದ ರೋಟರಿ ಎಲೈಟ್ ಆಸ್ತಿತ್ವಕ್ಕೆ | ಅಧ್ಯಕ್ಷ: ರೆ|ವಿಜಯ ಹಾರ್ವಿನ್, ಕಾರ್ಯದರ್ಶಿ: ಶ್ರೇಯಸ್ ಆನಂದ್, ಕೋಶಾಧಿಕಾರಿ: ನವೀನ್ ಕುಮಾರ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಜಿಲ್ಲೆ ೩೧೮೧, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಪ್ರಾಯೋಜಕತ್ವದ ನೂತನ ರೋಟರಿ ಕ್ಲಬ್ ರೋಟರಿ ಪುತ್ತೂರು ಎಲೈಟ್(ಸನದು ನಂ:೯೧೦೪೭) ಇದರ ಸನದು ಪ್ರದಾನ ಕಾರ್ಯಕ್ರಮ ಜೂ.30 ರಂದು ನೆಹರುನಗರ ಸುದಾನ ವಸತಿಯುತ ಶಾಲೆಯ ಎಡ್ವರ್ಡ್ ಕಾನ್ಫರೆನ್ಸ್ ಸಭಾಂಗಣದಲ್ಲಿ ನಡೆಯಲಿದೆ.


ರೋಟರಿ ಕ್ಲಬ್ ಪುತ್ತೂರು, ರೋಟರಿ ಕ್ಲಬ್ ಪುತ್ತೂರು ಈಸ್ಟ್, ರೋಟರಿ ಕ್ಲಬ್ ಪುತ್ತೂರು ಸಿಟಿ, ರೋಟರಿ ಕ್ಲಬ್ ಪುತ್ತೂರು ಯುವ, ರೋಟರಿ ಕ್ಲಬ್ ಪುತ್ತೂರು ಸ್ವರ್ಣ, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಈ ಆರು ರೋಟರಿ ಕ್ಲಬ್‌ಗಳು ಪುತ್ತೂರಿನಲ್ಲಿ ಈಗಾಗಲೇ ಸಮಾಜಮುಖಿ ಸೇವೆಗಳನ್ನು ನೀಡುತ್ತಿದ್ದು, ಇದೀಗ ಏಳನೇ ಕ್ಲಬ್ ಆಗಿ ರೋಟರಿ ಪುತ್ತೂರು ಎಲೈಟ್ ಕಾರ್ಯ ನಿರ್ವಹಿಸಲಿದೆ. ನೂತನ ಕ್ಲಬ್ ಎನಿಸಿದ ರೋಟರಿ ಪುತ್ತೂರು ಎಲೈಟ್ ಇದರ ಪ್ರಥಮ ಅಧ್ಯಕ್ಷರಾಗಿ ಸುದಾನ ವಸತಿಯುತ ಶಾಲೆಯ ಸಂಚಾಲಕರಾದ ರೆ|ವಿಜಯ ಹಾರ್ವಿನ್‌ರವರು ಆಯ್ಕೆಯಾಗಿದ್ದಾರೆ. ನೂತನ ಕಾರ್ಯದರ್ಶಿಯಾಗಿ ಬೊಳ್ವಾರು ಮೆಗಾ ಗ್ಲಾಸ್‌ನ ಶ್ರೇಯಸ್ ಆನಂದ್‌ರವರು ಕೋಶಾಧಿಕಾರಿಯಾಗಿ ನವೀನ್ ಕುಮಾರ್ ಹನ್ಸ್‌ರವರು ಆಯ್ಕೆಯಾಗಿದ್ದಾರೆ.

ಉಳಿದಂತೆ ಕ್ಲಬ್ ಸರ್ವಿಸ್ ನಿರ್ದೇಶಕರಾಗಿ ಪ್ರೇಮಾನಂದ ಡಿ, ಕಮ್ಯೂನಿಟಿ ಸರ್ವಿಸ್‌ನ ನಿರ್ದೇಶಕರಾಗಿ ಅಬ್ದುಲ್ ರಝಾಕ್ ಕಬಕಕಾರ‍್ಸ್, ಇಂಟರ್‌ನ್ಯಾಷನಲ್ ಸರ್ವಿಸ್ ನಿರ್ದೇಶಕರಾಗಿ ಮತ್ತು ಬುಲೆಟಿನ್ ಎಡಿಟರ್ ಆಗಿ ಡಾ|ಪೀಟರ್ ವಿಲ್ಸನ್ ಪ್ರಭಾಕರ್, ಯೂತ್ ಸರ್ವಿಸ್ ನಿರ್ದೇಶಕರಾಗಿ ಪತ್ರಕರ್ತ ಮೌನೇಶ್ ವಿಶ್ವಕರ್ಮ, ಪೋಲಿಯೋ ಚೇರ್‌ಮ್ಯಾನ್ ಆಗಿ ಡಾ|ವಿಖ್ಯಾತ್ ನಾರಾಯಣ್, ಟಿಆರ್‌ಎಫ್ ಚೇರ್‌ಮ್ಯಾನ್ ಆಗಿ ಪ್ರದೀಪ್ ರಾವ್ ಎಂ.ಎ, ಮೆಂಬರ್‌ಶಿಪ್ ಚೇರ್‌ಮ್ಯಾನ್ ಆಗಿ ಸಿಲ್ವಿಯಾ ಡಿ’ಸೋಜ, ಟೀಚ್ ಚೇರ್‌ಮ್ಯಾನ್ ಆಗಿ ಲವೀನಾ ಹನ್ಸ್, ವಿನ್ಸ್ ಚೇರ್‌ಮ್ಯಾನ್ ಆಗಿ ಬಾಲು ನಾಕ್ ಬಿ, ವೆಬ್ ಚೇರ್‌ಮ್ಯಾನ್ ಆಗಿ ರಂಜಿತ್ ರೂಯಲ್ ಮಥಾಯಸ್, ಡಿಸ್ಟ್ರಿಕ್ಟ್ ಪ್ರಾಜೆಕ್ಟ್ ಚೇರ್‌ಮ್ಯಾನ್ ಆಗಿ ಡಾ.ಸಂದೀಪ್ ನಾಯಕ್, ಸಾರ್ಜಂಟ್ ಎಟ್ ಆರ್ಮ್ಸ್ ಆಗಿ ಸಿ.ಎಂ ಜೋನ್ಸನ್, ನಿಯೋಜಿತ ಅಧ್ಯಕ್ಷ(ಉಪಾಧ್ಯಕ್ಷ)ರಾಗಿ ಮನ್ಸೂರ್ ಬಿ.ರವರು ಆಯ್ಕೆಯಾಗಿದ್ದಾರೆ.

ಜೂ.30 ರಂದು ಸನದು ಪ್ರದಾನ:
ಜಿಲ್ಲೆ ೩೧೮೧ ಇದರ ಜಿಲ್ಲಾ ಗವರ್ನರ್ ಜೋಸೆಫ್ ಮ್ಯಾಥ್ಯೂರವರು ನೂತನ ಕ್ಲಬ್‌ನ ಸನದು ಪ್ರದಾನ ಕಾರ್ಯಕ್ರಮವನ್ನು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲೆ ೩೧೮೧ ಇದರ ನಿಯೋಜಿತ ಜಿಲ್ಲಾ ಗವರ್ನರ್ ರಂಗನಾಥ್ ಭಟ್, ೨೦೧೯-೨೦ರ ವಲಯ ಐದರ ಅಸಿಸ್ಟೆಂಟ್ ಗವರ್ನರ್ ಡಾ.ಕೇಶವ್ ಪಿ.ಕೆ, ೨೦೨೦-೨೧ರ ಅಸಿಸ್ಟೆಂಟ್ ಗವರ್ನರ್‌ಗಳಾದ ಸಚ್ಚಿದಾನಂದ ಡಿ ಮತ್ತು ರತ್ನಾಕರ್ ರೈ, ವಲಯ ಐದರ ವಲಯ ಸೇನಾನಿ ಸುರೇಶ್ ಎಂರವರು ಭಾಗವಹಿಸಲಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.