HomePage_Banner
HomePage_Banner
HomePage_Banner

ಇಂಧನ ಬೆಲೆ ಏರಿಕೆ ಖಂಡಿಸಿ ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆ | ಕೊರೋನಾ ಪ್ರಕರಣದಂತೆ ಇಂಧನ ಬೆಲೆ ಏರಿಕೆ-ಮಹಮ್ಮದ್ ಬಡಗನ್ನೂರು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ದೇಶದಲ್ಲಿ ಕೊರೋನಾ ಪ್ರಕರಣ ದಿನೇ ದಿನೇ ಏರಿಯಾಗುತ್ತಿರುವ ರೀತಿಯಲ್ಲೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ. ಕಳೆದ ೨೬ ದಿನಗಳಲ್ಲಿ ಪೆಟ್ರೋಲ್ ಬೆಲೆಯಲ್ಲಿ ನಯಾ ಪೈಸೆ ಕಡಿಮೆಯಾಗದೇ ಬೆಲೆ ಏರಿಕೆಯಾಗುತ್ತಲೇ ಸಾಗುತ್ತಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಆರೋಪಿಸಿದರು.
ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಬೆಲೆ ಏರಿಕೆ ವಿರೋಧಿಸಿ ಜೂ.೨೯ರಂದು ಪುತ್ತೂರು ಹಾಗೂ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಿಲ್ಲೇ ಮೈದಾನದ ಬಳಿಯಿರುವ ಅಮರ್ ಜವಾನ್ ಜ್ಯೋತಿ ಬಳಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಮಾನವನ ಮನುಷ್ಯತ್ವ ಹಾಗೂ ಆರ್ಥಿಕ ಪುನಶ್ಚೇತನಕ್ಕೆ ಕೇಂದ್ರ ಸರಕಾರ ಕೊಡಲಿಯೇಟು ನೀಡುತ್ತಿದೆ. ೬೦ ವರ್ಷದ ದೀರ್ಘ ಇತಿಹಾಸದ ಕಾಂಗ್ರೆಸ್ ಆಡಳಿತದಲ್ಲಿ ಪೆಟ್ರೋಲ್‌ಗೆ ಹೆಚ್ಚೆಂದರೆ ೬೦ ರೂಪಾಯಿಯಾಗಿದೆ. ಆದರೆ ವರ್ಷದ ಮೋದಿ ಆಡಳಿತದಲ್ಲಿ ಪೆಟ್ರೋಲ್ ಬೆಲೆ ೯೦ ರೂಪಾಯಿ ಸನಿಹಕ್ಕೆ ಬಂದಿದ್ದು ಪ್ರತಿಭಟೆನೆ ಅನಿವಾರ್ಯತೆಯಿದೆ. ಬಡವರು, ರಿಕ್ಷಾ ಚಾಲಕರು, ಕಾರ್ಮಿಕರ ಬದುಕು ಅದಪತವನ್ನು ಕಾಣುತ್ತಿದೆ. ೧೬೫ ದೇಶಗಳಿಗೆ ವಿದೇಶಿಯಾನ ಕೈಗೊಂಡಿದ್ದರೂ ಆದೇಶಗಳೆಲ್ಲಾ ವಿರೋಧಿಗಳಾಗಿದ್ದಾರೆ. ಚೀನಾದ ಜೊತೆಗೆ ನೇಪಾಳ, ಭೂತಾನ, ಶ್ರೀಲಂಕಾದಂತಹ ಸಣ್ಣ, ಸಣ್ಣ ರಾಷ್ಟ್ರಗಳೂ ದೇಶದ ಮೇಲೆ ದಂಡೆತ್ತಿ ಬರುತ್ತಿದ್ದು ಸುಮಾರು ಏಳೆಂಟು ರಾಷ್ಟ್ರಗಳು ವಿರೋಧಿಗಳಾಗುತ್ತಿದ್ದಾರೆ. ಕೋವಿಡ್ ನಿಯಂತ್ರಣದಲ್ಲಿ ಕೇಂದ್ರ ಸರಕಾರ ಎಡವಿದೆ. ಅಹದಾಬಾದ್‌ನಲ್ಲಿ ಅಮೇರಿಕಾ ಅಧ್ಯಕ್ಷ ಟ್ರಂಪ್ ಭೇಟಿ ಕಾರ್ಯಕ್ರಮ ನಡೆಸಿರುವುದಲ್ಲದೇ ಸಂಬಂಧಿಕರು, ಬಂಡವಾಳ ಶಾಹಿಗಳನ್ನು ದೇಶಕ್ಕೆ ಕರೆಸಿಕೊಳ್ಳುವುದಕ್ಕಾಗಿ ವಿಳಂಬ ಮಾಡಿರುವುದರಿಂದಾಗಿ ಕೊರೋನಾ ಸೋಂಕು ಇಂದು ಕೈಮೀರಿ ಹೋಗುತ್ತಿದೆ ಎಂದು ಆರೋಪಿಸಿದ ಅವರು ತಮ್ಮ ಸಿದ್ದಾಂತವನ್ನು ತಿದ್ದುಕೊಳ್ಳದಿದ್ದರೆ ದೇಶಕ್ಕೆ ಅಪಾಯವಿದೆ. ಗೂಡ್ಸೆಗೆ ಗುಡಿ ಕಟ್ಟುವ ಸಿದ್ದಾಂತ ಬಿಟ್ಟು ಜನರಿಗೆ ಬದುಕುವ ಅವಕಾಶ ನೀಡಿ ಎಂದು ಅವರು ಎಚ್ಚರಿಸಿದರು.
ಜೀವನ ನಿರ್ವಹಣೆಗೆ ರೂ.೧೦ಸಾವಿರ ನೀಡಲಿ- ಗಣೇಶ್ ಪೂಜಾರಿ:
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವ ಕುಮಾರ್ ಪದಗ್ರಹಣ ಕಾರ್ಯಕ್ರಮದ ಉಸ್ತುವಾರಿ ಗಣೇಶ್ ಪೂಜಾರಿ ಮಾತನಾಡಿ, ಕೊರೋನ ಲಾಕ್‌ಡೌನ್ ಸಂಕಷ್ಟದ ಜನತೆಗೆ ಇಂದನ ಬೆಲೆ ಏರಿಕೆಯ ಮೂಲಕ ಕೇಂದ್ರ ಸರಕಾರ ಹೊಡೆತ ನೀಡುತ್ತಿದೆ. ಕೇಂದ್ರ ಸರಕಾರ ಪೆಟ್ರೋಲ್ ಬೆಲೆ ೨೦೦ ರೂಪಾಯಿಗೆ ಏರಿಕೆ ಮಾಡಲಿ. ಆದರೆ ಬಡ ರೈತರು, ಕೂಲಿ ಕಾರ್ಮಿಕರು, ಆಟೋ, ಟ್ಯಾಕ್ಸಿ ಚಾಲಕರ ಜೀವನ ಸಂಕಷ್ಟದಲ್ಲಿರುವ ಪ್ರತಿಯೊಬ್ಬರ ಜೀವನ ನಿರ್ವಹಣೆಗೆ ೧೦ ಸಾವಿರ ರೂಪಾಯಿ ನೀಡುವಂತೆ ಆಗ್ರಹಿಸಿದರು. ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ೩೪೫ ರೂಪಾಯಿಯಾಗಿದ್ದ ಗ್ಯಾಸ್‌ನ ಬೆಲೆ ಇಂದು ೯೪೫ ರೂಪಾಯಿಗೆ ಏರಿಕೆಯಾಗಿದೆ. ಇಂದನ ಬೆಲೆ ಇಳಿಕೆ ಮಾಡಿ ಜನ ಸಾಮಾನ್ಯರನ್ನು ಬದುಕಲು ಬಿಡುವಂತೆ ಅವರು ಆಗ್ರಹಿಸಿದರು.

ಕೇಂದ್ರ ಸರಕಾರದಿಂದ ವ್ಯವಸ್ಥಿತ ಹಗಲು ದರೋಡೆ-ಎಂ.ಬಿ ವೀಶ್ವನಾಥ ರೈ
ಕೆಪಿಸಿಸಿ ಸದಸ್ಯ ಎಂ.ಬಿ ವಿಶ್ವನಾಥ ರೈ ಮಾತನಾಡಿ, ಕೇಂದ್ರ ಸರಕಾರ ಇಂಧನ ಬೆಲೆ ಇಳಿಕೆ ಮಾಡುವ ಸ್ಥಿತಿಯಲ್ಲಿಲ್ಲ. ಅದು ಒಂದು ರೀತಿಯ ವ್ಯವಸ್ಥಿತ ಹಗಲು ದರೋಡೆಯಾಗಿದೆ. ದೇಶ ಅಧಃಪತನದತನದ ಅಂಚಿನಲ್ಲಿದ್ದು ಭಾರತ ಸ್ವಾತಂತ್ರ್ಯ ಪೂರ್ವದ ಸ್ಥಿತಿಗೆ ಸಾಗುತ್ತಿದೆ. ಎಲ್ಲ ರೀತಿಯಲ್ಲೂ ಆಡಳಿತ ನಡೆಸಲು ವಿಫಲವಾಗಿದೆ. ಮೋದಿ ಎಂಬ ಹೆಸರಿನಲ್ಲಿ ಡ್ರಗ್‌ಗೆ ಜನರನ್ನು ಬಲಿಯಾಗಿಸುತ್ತಿದ್ದಾರೆ. ಗಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ ಚೀನಾದ ೪೦ ಮಂದಿ ಸೈನಿಕರು ಬಲಿಯಾಗಿರುವುದಾಗಿ ತಿಳಿಸಿದ್ದರೂ ಅದಕ್ಕೆ ಪೂರಕ ದಾಖಲೆಗಳಿಲ್ಲ. ಕೇವಲ ಕಟ್ಟು ಕಥೆ ಮಾತ್ರ. ಚೀನಾದ ಉತ್ಪನ್ನಗಳನ್ನು ದೇಶದಲ್ಲಿ ನಿಷೇಧಿಸುವುದು ಸಾಧ್ಯವೇ ಎಂದು ಪ್ರಶ್ನಿಸಿದ ಅವರು ಗುಜರಾತಿನಲ್ಲಿ ನಿರ್ಮಾಣವಾದ ಸರ್ದಾರ್ ವಲ್ಲಭ ಬಾಯ್ ಪಟೇಲ್ ಪ್ರತಿಮೆ ಚೀನಾದ ಆಮದಿಸಿದ ಕಂಚಿನಿಂದ ನಿರ್ಮಾಣವಾಗಿದೆ ಮೊದಲು ಅದನ್ನು ನಿಷೇಧಿಸಲಿ ಎಂದು ಸವಾಲು ಹಾಕಿದರು. ಕಾಂಗ್ರೆಸ್ ಪಕ್ಷವೆಂದರೆ ಭಯ-ದುರ್ಗಾಪ್ರಸಾಸ್ ರೈ:
ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ ಮಾತನಾಡಿ, ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯವರಿಗೆ ಕಾಂಗ್ರೆಸ್ ಬಗ್ಗೆ ಭಯವಿದೆ. ಅದಕ್ಕಾಗಿ ನೆಹರು ಹಾಗೂ ರಾಹುಲ್ ಗಾಂಧಿಯವರ ಮೇಲೆ ಬೊಟ್ಟು ಮಾಡಿ ಮಾತನಾಡುತ್ತಿದ್ದಾರೆ. ಕೇಂದ್ರ ಸರಕಾರದ ದುರಾಡಳಿತದಿಂದಾಗಿ ಪ್ರಖ್ಯಾತ ಸೈಕಲ್ ಕಂಪನಿ ಅಟ್ಲಾಸ್ ಬಂದ್ ಆಗಿದ್ದು ಸುಮಾರು ೫೦ಸಾವಿರ ಮಂದಿ ಉದ್ಯೋಗ ಕಳೆದುಕೊಂಡಿರುತ್ತಾರೆ. ಬಿಜೆಪಿ ನೇತರತ್ವದ ಕೇಂದ್ರ ಸರಕಾರ ಸುಳ್ಳು ಮಾಹಿತಿ ನೀಡುವ ಮೂಲಕ ಜನರ ಭಾವನೆಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಅವರಿಗೆ ದೇಶದ ಅಭಿವೃದ್ಧಿಯ ಬಗ್ಗೆ ಚಿಂತನೆಯಿಲ್ಲ. ಮುಂದಿನ ಚುನಾವಣೆಯಲ್ಲಿ ಗೆಲ್ಲುವುದೇ ಚಿಂತೆ. ರಾಜ್ಯದಲ್ಲಿ ಬಿಜೆಪಿಯ ೨೫ ಮಂದಿ ಸಂಸದರಿದ್ದರೂ ಕೇಂದ್ರದಿಂದ ರಾಜ್ಯಕ್ಕೆ ಎಷ್ಟು ಅನುದಾನ ಕೊಟ್ಟಿದ್ದಾರೆ ಎಂಬುದನ್ನು ಪ್ರಶ್ನಿಸುತ್ತಿಲ್ಲ ಎಂದು ಆರೋಪಿಸಿದರು.

ಆನೆ ನಡೆದದ್ದೇ ದಾರಿ ಎನ್ನುವ ರೀತಿಯ ವರ್ತನೆ-ಮುರಳೀಧರ ರೈ:
ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುರಳಿಧರ ರೈ ಮಠಂತಬೆಟ್ಟು ಮಾತನಾಡಿ, ಉದ್ಯಮಗಳಿಗೆ ಪ್ರೋತ್ಸಾಹ, ಕಾರ್ಖಾನೆಗಳ ಬೆಳವಣಿಗೆಗೆ ಸಹಕಾರ ನೀಡಿ ದೇಶದ ಅಭಿವೃದ್ಧಿ ಮಾಡಬೇಕಾದ ಕೇಂದ್ರ ಸರಕಾರಕ್ಕೆ ಇಂಧನ ಬೆಲೆ ಏರಿಕೆ ಮಾಡುವ ಮೂಲಕ ಅದರ ಆದಾಯದಲ್ಲಿ ದೇಶ ನಡೆಸುವಂತ ಅನಿವಾರ್ಯತೆಯಿದೆ ಎಂದು ವ್ಯಂಗ್ಯವಾಡಿದರು. ಕೊರೋನಾ ಲಾಕ್‌ಡೌನ್‌ನಿಂದ ಮೊದಲೇ ಬಾಡಿಗೆಯಿಲ್ಲದೆ ಕಂಗೆಟ್ಟಿದ್ದ ಆಟೋ, ಟ್ಯಾಕ್ಷಿ ಚಾಲಕರಿಗೆ ಬೆಲೆ ಏರಿಕೆ ಮೂಲಕ ದೊಡ್ಡ ಹೊಡೆತ ನೀಡುತ್ತಿದೆ. ಬಡ, ಕೂಲಿ ಕಾರ್ಮಿಕರ ಬದುಕು ದುಸ್ಥರವಾಗಿದ್ದರೂ ಕೇಂದ್ರ ಸರಕಾರ ಆನೆ ನಡೆದದ್ದೇ ದಾರಿ ಎನ್ನುವ ರೀತಿಯಲ್ಲಿ ವರ್ತಿಸುತ್ತಿದೆ ಎಂದು ಆರೋಪಿಸಿದರು.
ಯುವ ಕಾಂಗ್ರೆಸ್ ಅಧ್ಯಕ್ಷ ಯು.ಟಿ ತೌಸೀಪ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿಲ್ಮಾ ಗೊನ್ಸಾಲ್ವೀಸ್, ಸನಂ, ನರಿಮೊಗರು ಗ್ರಾ.ಪಂ ಅಧ್ಯಕ್ಷೆ ಚಂದ್ರಕಲಾ, ಯುವಕ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅರ್ಷದ್ ದರ್ಬೆ ಪಕ್ಷದ ಪ್ರಮುಖರಾದ ನ್ಯಾಯವಾದಿ ಭಾಸ್ಕರ ಕೋಡಿಂಬಾಳ, ರಾಮ ಮೇನಾಲ, ನವೀನ್ ರೈ ಚೆಲ್ಯಡ್ಕ, ಕೌಶಲ್ ಪ್ರಸಾದ್ ಶೆಟ್ಟಿ, ಅಮಲ ರಾಮಚಂದ್ರ, ಜೋಕಿಂ ಡಿ’ ಸೋಜ, ಇಸಾಖ್ ಸಾಲ್ಮರ, ರೋಷಣ್ ಬನ್ನೂರು, ಎಂ.ಪಿಅಬೂಬಕ್ಕರ್, ಸಂತೋಷ್ ಚಿಲ್ಮೆತ್ತಾರು ಸೇರಿದಂತೆ ಹಲವು ಮಂದಿ ಬಾಗವಹಿಸಿದ್ದರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ ಸ್ವಾಗತಿಸಿ, ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ ವಂದಿಸಿದರು. ನ್ಯಾಯವಾದಿ ತೀರ್ಥಪ್ರಸಾದ್ ಮುಂಗ್ಲಿಮನೆ ಮನವಿ ಪತ್ರ ಓದಿದರು. ಪ್ರತಿಭಟನಾ ಸಭೆಯ ಬಳಿಕ ಸಹಾಯಕ ಆಯುಕ್ತರ ಮೂಲಕ ರಾಷ್ಟ್ರಪತಿ ಹಾಗೂ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧಮೇಂದ್ರ ಪ್ರಧಾನ್‌ವರಿಗೆ ಮನವಿ ಸಲ್ಲಿಸಿದರು.

ಕರುಣೆಯೇ ಇಲ್ಲದ ಸರಕಾರ-ಮೋಹನ್ ಗೌಡ:
ಜಿಲ್ಲಾ ಕಿಸಾನ್ ಘಟಕದ ನಿಯೋಜಿತ ಅಧ್ಯಕ್ಷ ಮೋಹನ್ ಗೌಡ ಕಲ್ಮಂಜ ಮಾತನಾಡಿ, ಕೊರೋನಾ ಲಾಕ್‌ಡೌನ್‌ನಿಂದಾಗಿ ಜನರ ಬದುಕು ತತ್ತರಿಸಿ ಹೋಗಿದ್ದರೂ ಕೇಂದ್ರ ಸರಕಾರ ಇಂಧನ ಬೆಲೆ ಏರಿಕೆ ಮಾಡುತ್ತಿದೆ. ಅ ಮೂಲಕ ಎಲ್ಲಾ ರೀತಿಯ ಆವಶ್ಯಕ ದಿನ ಬಳಕೆಯ ಸಾಮಾಗ್ರಿಗಳ ಬೆಲೆ ಏರಿಕೆಗೆ ಕೇಂದ್ರ ಸರಕಾರ ಪರೋಕ್ಷ ಬೆಂಬಲ ನೀಡುತ್ತಿದ್ದು ಕೇಂದ್ರ ಸರಕಾರಕ್ಕೆ ಕರುಣೆಯೇ ಇಲ್ಲದಾಗಿದೆ. ಕೃಷಿಗೆ ನೀಡಲಾಗುವ ಉಚಿತ ವಿದ್ಯುತ್ ಕಡಿತ, ಭೂ ಮಸೂದೆ ಕಾಯಿದೆ ಹಿಂಪಡೆದು ಬಂಡವಾಳ ಶಾಹಿಗಳಿಗೆ ನೀಡುವುದು, ರಬ್ಬರ್ ಬೆಲೆ ಕುಸಿತ ಹಾಗೂ ವಿದೇಶದಿಂದ ಹಾಲು ಆಮದಿಸುವ ಮೂಲಕ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

1 Comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.