HomePage_Banner
HomePage_Banner
HomePage_Banner
Breaking News

ಮೆಸ್ಕಾಂ ಜೆಇ ತನಿಯ ನಾಯ್ಕ ನಾಳೆ (ಜೂ.30) ಸೇವಾ ನಿವೃತ್ತಿ

Puttur_Advt_NewsUnder_1
Puttur_Advt_NewsUnder_1
ಪುತ್ತೂರು: ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ (ಮೆಸ್ಕಾಂ) ಪುತ್ತೂರು ವಿಭಾಗದಲ್ಲಿ ಕಿರಿಯ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ತನಿಯ ನಾಯ್ಕ ಎಚ್. ರವರು ಜೂ.30ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.
ಇವರು ೮ ಮಾರ್ಚ್ ೧೯೮೬ರಲ್ಲಿ ಅಂದಿನ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯಲ್ಲಿ ಹುಬ್ಬಳ್ಳಿ ವೃತ್ತ ದ ಶಿರಸಿ ವಿಭಾಗದ ಭಟ್ಕಳ ಶಾಖೆಯಲ್ಲಿ ಸೇವೆಯನ್ನು ಪ್ರಾರಂಭಿಸಿದ್ದರು. ೧೯೯೨ರಲ್ಲಿ ಕುಂದಾಪುರ ಉಪ ವಿಭಾಗದ ಸಿದ್ಧಾಪುರ ಶಾಖೆಗೆ ವರ್ಗಾವಣೆಗೊಂಡರು. ಅಲ್ಲಿಂದ ೧೯೯೪ರಲ್ಲಿ ಬೆಳ್ತಂಗಡಿ ಉಪ ವಿಭಾಗಕ್ಕೆ ವರ್ಗಾವಣೆಗೊಂಡು ೩೩/೧೧ಕೆ.ವಿ. ಬೆಳ್ತಂಗಡಿ ವಿದ್ಯುತ್ ಉಪ ಕೇಂದ್ರ ದಲ್ಲಿ ೯ವರ್ಷಗಳ ಕಾಲ ಅಪರೇಟರ್ ಆಗಿ ಸೇವೆ ಸಲ್ಲಿಸಿದ್ದಾರೆ. ೨೦೦೩ರಲ್ಲಿ ಕಿರಿಯ ಇಂಜಿನಿಯರ್ ಆಗಿ ಭಡ್ತಿ ಹೊಂದಿ ಪುತ್ತೂರು ಉಪ ವಿಭಾಗದ ಕುಂಬ್ರ ಶಾಖೆಗೆ ಶಾಖಾಧಿಕಾರಿಯಾಗಿ ನಿಯುಕ್ತಿಗೊಂಡಿದ್ದು, ಅಲ್ಲಿಂದ ೨೦೧೨ರಲ್ಲಿ ಹೊಸದಾಗಿ ಪ್ರಾರಂಭಗೊಂಡ ಈಶ್ವರಮಂಗಲ ಶಾಖೆಗೆ ವರ್ಗಾವಣೆಗೊಂಡು ಸೇವೆ ಸಲ್ಲಿಸಿದ್ದಾರೆ. ೨೦೧೮ರಿಂದ ೩೩/೧೧ಕೆ.ವಿ. ಕ್ಯಾಂಪ್ಕೋ ವಿದ್ಯುತ್ ಉಪಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 
೩೪ ನೆಕ್ಕಿಲಾಡಿ ಗ್ರಾಮದ ಹಲಂಗೂರು ಕೃಷ್ಣ ನಾಯ್ಕ ಮತ್ತು ಕಮಲ ದಂಪತಿಯ ಪುತ್ರರಾದ ಇವರು ಪತ್ನಿ ಇಂದಿರಾ, ಪುತ್ರಿ ಬೆಂಗಳೂರಿನಲ್ಲಿ ಎಫ್ ಐಎಸ್ ಕಂಪೆನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಶ್ರೇಯಾ ಮತ್ತು ಪುತ್ರ ಬೆಂಗಳೂರಿನಲ್ಲಿ ಲುಮಿಕ್ಸ್ ಕಂಪೆನಿಯ ಉದ್ಯೋಗಿ ಅಕ್ಷಯ್ ಜೊತೆ ವಾಸ್ತವ್ಯವಿದ್ದಾರೆ.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.