Home_Page_Advt
Home_Page_Advt
Home_Page_Advt

ಪುತ್ತೂರಿನಲ್ಲಿ ಎರಡು ಕೊರೋನಾ ಪ್ರಕರಣ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಕಸ ಸಂಗ್ರಹ ಹೊರಗುತ್ತಿಗೆ ವಾಹನದಲ್ಲಿ ಚಾಲಕನಾಗಿರುವ ಗ್ರಾಮೀಣ ಭಾಗದ ವ್ಯಕ್ತಿ ಮತ್ತು ನಗರಸಭಾ ಯುವತಿಯೊಬ್ಬರಿಗೆ ಕೊರೋನಾ ದೃಢಪಟ್ಟ ಬಗ್ಗೆ ಜೂ.29ರಂದು ವರದಿಯಾಗಿದೆ.
ಪುತ್ತೂರು ನಗರಸಭೆಯ ಕಸ ಸಂಗ್ರಹ ಹೊರಗುತ್ತಿಗೆ ವಾಹನದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ೫೧ ವರ್ಷ ವಯಸ್ಸಿನ ಬೆಟ್ಟಂಪಾಡಿ ನಿವಾಸಿ ವ್ಯಕ್ತಿಯೊಬ್ಬರು ಮತ್ತು ನಗರಸಭಾ ವ್ಯಾಪ್ತಿಯ ತೆಂಕಿಲದಲ್ಲಿ ಓರ್ವ ಯುವತಿಗೆ ಕೊರೋನಾ ದೃಢ ಪಟ್ಟಿದೆ. ನಗರಸಭಾ ಕಸ ಸಂಗ್ರಹದ ವಾಹನ ಚಾಲಕ ಬೆಟ್ಟಂಪಾಡಿ ನಿವಾಸಿಯಾಗಿದ್ದು, ಆತ ಲಾರಿಯಲ್ಲಿ ಮನೆ ಮನೆ ಕಸ ಸಂಗ್ರಹಕ್ಕಾಗಿ ತೆರಳುತ್ತಿದ್ದು, ಎರಡು ದಿನದ ಹಿಂದೆ ಚಾಲಕ ಸೇರಿದಂತೆ ಇಬ್ಬರು ಪೌರಕಾರ್ಮಿಕರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಪೈಕಿ ಚಾಲಕನಿಗೆ ಕೊರೋನಾ ದೃಢಪಟ್ಟ ಕುರಿತು ವರದಿ ಬಂದಿದ್ದು ಉಳಿದ ಇಬ್ಬರು ಪೌರ ಕಾರ್ಮಿಕರ ವರದಿ ನೆಗೆಟಿವ್ ಬಂದಿದೆ.


ತೆಂಕಿಲ ಓರ್ವ ಯುವತಿಯು ಸರಕಾರಿ ಆಸ್ಪತ್ರೆಯಲ್ಲಿ ಗಂಟಲು ದ್ರವ ಪರೀಕ್ಷೆ ನಡೆಸಿದ್ದರು. ಇವರಿಬ್ಬರ ವರದಿಯಲ್ಲಿ ಕೊರೋನಾ ದೃಢ ವರದಿ ಬಂದಿದೆ. ಇದೀಗ ಇಬ್ಬರನ್ನು ಮಂಗಳೂರು ವೆನ್‌ಲಾಕ್ ಕೊವೀಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಬೆಟ್ಟಂಪಾಡಿಯ ಚಾಲಕನ ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಅದೇ ರೀತಿ ನಗರಸಭಾ ವ್ಯಾಪ್ತಿಯಲ್ಲಿ ಕೊರೋನಾ ಪತ್ತೆಯಾದ ಯುವತಿಯ ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.