Breaking News

ಶ್ರೀಕ್ಷೇತ್ರ ಧ. ಗ್ರಾ. ಯೋಜನೆಯ ಪಡುವನ್ನೂರು ಚಿಗುರು ಪ್ರಗತಿಬಂಧು ತಂಡ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

ಈಶ್ವರಮಂಗಲ: ಕರ್ನೂರು ಕಾರ್ಯಕ್ಷೇತ್ರದ ಪಡುವನ್ನೂರು ಕುತ್ಯಾಳ ಶ್ರೀ ಮಹಾವಿಷ್ಣು ದೇವಸ್ಥಾನದ ಸಭಾಭವನದಲ್ಲಿ ಇತ್ತೀಚೆಗೆ ನಡೆದ ಶ್ರೀಕ್ಷೇತ್ರ ಧ.ಗ್ರಾ. ಯೋಜನೆಯ ಸಹಭಾಗಿತ್ವದ ಚಿಗುರು ಪ್ರಗತಿಬಂಧು ತಂಡವನ್ನು ಈಶ್ವರಮಂಗಲ ಒಕ್ಕೂಟದ ಅಧ್ಯಕ್ಷರಾದ ಶಂಕರ ಮುಖಾರಿಯವರ ಅಧ್ಯಕ್ಷತೆಯಲ್ಲಿ ಸ್ಥಳೀಯರಾದ ರಾಮ ಮೇನಾಲರವರು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಶ್ರೀ ಮಹಾವಿಷ್ಣು ದೇವಸ್ಥಾನದ ಪ್ರಧಾನ ಅರ್ಚಕರಾದ ವಿಶ್ವನಾಥ ಭಟ್‌ರವರು ಆಗಮಿಸಿ ಶುಭ ಹಾರೈಕೆ ಮಾಡಿ ತಂಡಕ್ಕೆ ದಾಖಲಾತಿಯನ್ನು ಹಸ್ತಾಂತರಿಸಿದರು.


ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಸುಂದರ ಜಿ.ರವರು ತಂಡದ ದಾಖಲಾತಿ ನಿರ್ವಹಣೆ, ತಂಡದ ನಿಯಮಾವಳಿಗಳು ಮತ್ತು ಶಿಸ್ತಿನ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದರು. ನೂತನ ತಂಡದ ಪದಾಧಿಕಾರಿಗಳಾಗಿ ಕುಸುಮ(ಪ್ರಬಂದಕರು), ಕು. ವಿಜಯಶ್ರೀ ಕೆ. (ಸಂಯೋಜಕರು), ಅಶ್ವಿನಿ (ಕೋಶಾಧಿಕಾರಿ) ಸದಸ್ಯರಾಗಿ ಸರೋಜಿನಿ ಮತ್ತು ಕಮಲರವರನ್ನು ಆಯ್ಕೆ ಮಾಡಲಾಯಿತು. ತಂಡದ ವತಿಯಿಂದ ಎಲ್ಲರಿಗೂ ಸಿಹಿತಿಂಡಿ ವಿತರಿಸಿದರು. ಸ್ಥಳೀಯರಾದ ರತ್ನಾವತಿ ಎಲ್ಲರಿಗೂ ಪಾನೀಯದ ವ್ಯವಸ್ಥೆ ಮಾಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.