Home_Page_Advt
Home_Page_Advt
Home_Page_Advt

ಗಗನಕ್ಕೇರಿದ ಕಚ್ಚಾ ತೈಲ ಬೆಲೆ ಇಳಿಸಿ | ಕಡಬ ಕಾಂಗ್ರೆಸ್ ವತಿಯಿಂದ ರಾಷ್ಟ್ರಪತಿಯವರಿಗೆ ಮನವಿ

Puttur_Advt_NewsUnder_1
Puttur_Advt_NewsUnder_1

ಕಡಬ: ಅಂತರಾಷ್ಟೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಕುಸಿದಿದ್ದು, ದೇಶಾದ್ಯಂತ ಪೆಟ್ರೋಲ್, ಡಿಸೆಲ್, ಬೆಲೆ ವಿಪರೀತ ಗಗನಕ್ಕೇರಿದ್ದು ಬಡ ಸಾಮಾನ್ಯ ಜನರ ಜೀವನಕ್ಕೆ ಬಹಳ ತೊಂದರೆಯಾಗಿದೆ ಎಂದು ಆರೋಪಿಸಿರುವ ಕಡಬ ಬ್ಲಾಕ್ ಕಾಂಗ್ರೆಸ್ ಜೂ.೨೯ರಂದು ಕಡಬ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಿದ್ದಾರೆ.


ಮನವಿ ಸಲ್ಲಿಕೆಗೆ ಮೊದಲು ಕಡಬ ತಹಸೀಲ್ದಾರ್ ಕಛೇರಿಯ ಎದುರುಗಡೆ ಕೆ.ಪಿ.ಸಿ.ಸಿ. ಸದಸ್ಯ ಡಾ| ರಘು ಮಾತನಾಡಿ, ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ ಕೊರೋನಾ ಮಹಾಮಾರಿ ರೋಗದ ಸಮಯದಲ್ಲಿ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಜನರಿಂದ ಹಣ ಲೂಟಿ ಹೊಡೆಯುತ್ತಿದ್ದು ಕೂಡಲೇ ಪೆಟ್ರೋಲ್ ಡಿಸೆಲ್ ಬೆಲೆಯನ್ನು ಇಳಿಸಿ ಜನರನ್ನು ಸಂಕಷ್ಟದಿಂದ ಪಾರು ಮಾಡಬೇಕೆಂದು ಆಗ್ರಹಿಸಿದರು. ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಕೈಕುರೆಯವರು ಮಾತನಾಡಿ, ಪೆಟ್ರೋಲ್ ಡಿಸೆಲ್ ಬೆಲೆ ಏರಿಕೆಯಿಂದ ಜನರ ಆರ್ಥಿಕ ವ್ಯವಸ್ಥೆ ಕುಸಿತಗೊಂಡಿದೆ. ಕಚ್ಚಾ ತೈಲ ಬೆಲೆ ಇಳಿಸದಿದ್ದರೆ ಮುಂದಿನ ದಿಗಳಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಅವರು ಹೇಳಿದರು. ಜಿ,ಪಂ.ಸದಸ್ಯ ಪಿ.ಪಿ.ವರ್ಗೀಸ್ ಅವರು ಮಾತನಾಡಿ, ಹಿಂದಿನ ಯು.ಪಿ.ಎ ಸರಕಾರ ಇರುವ ಸಮಯದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಾಗಿದ್ದರೂ ಅದನ್ನು ಸರಿದೂಗಿಸುವ ಕೆಲಸ ಮಾಡಲಾಗಿದೆ, ಆದರೆ ಮೋದಿ ನೇತೃತ್ವದ ಕೇಂದ್ರ ಸರಕಾರ ಯಾಕೆ ಆ ರೀತಿ ಮಾಡದೆ ಹೊರೆಯನ್ನು ಜನಸಾಮಾನ್ಯರ ಮೇಲೆ ಹಾಕಿದೆ ಎಂದು ಕಾಣುತ್ತಿಲ್ಲ, ಈ ಬೆಲೆ ಏರಿಕೆಯಿಂದಾಗಿ ಸಣ್ಣ-ಪುಟ್ಟ ಮೋಟಾರು ವಾಹನ ಹಾಗೂ ಬಾರೀ ಗಾತ್ರದ ವಾಹನಗಳ ಬಾಡಿಗೆ, ವಿಪರೀತವಾಗಿ ಏರಿಕೆ ಮಾಡಿರುವುದರಿಂದ ದಿನನಿತ್ಯ ಸಾಮಾಗ್ರಿಗಳಿಗೆ ಖರೀದಿ ಮಾಡಲು ಬಡವರು, ಕೂಲಿ ಕಾರ್ಮಿಕರು ತೊಂದರೆ ಅನುಭವಿಸುವಂತಾಗಿದೆ, ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರಿ ಮೊತ್ತದ ಬೆಲೆ ಏರಿಕೆಯಾಗಿದ್ದು, ಇದನ್ನು ತಕ್ಷಣವೇ ಕೆಳಗಿಳಿಸಿ ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸಬೇಕೆಂದು ಅವರು ಆಗ್ರಹಿಸಿದರು. ಈ ಸಂದರ್ಭದಲ್ಲಿ ತಾ.ಪಂ.ಸದಸ್ಯ ಫಝಲ್ ಕೋಡಿಂಬಾಳ, ಕಾಂಗ್ರೆಸ್ ಮುಖಂಡರಾದ ಬಾಲಕೃಷ್ಣ ಬಳ್ಳೇರಿ, ಶೀನಪ್ಪ ಗೌಡ ಬೈತಡ್ಕ, ರಾಯ್ ಅಬ್ರಹಾಂ, ಕೆ.ಪಿ.ಸಿಸಿ ಕಿಶಾನ್ ಘಟಕದ ಯತೀಶ್ ಬಾನಡ್ಕ, ಸೆಬೆಸ್ಟನ್ ಶಿರಾಡಿ, ಭವಾನಿಶಂಕರ ಗೌಡ, ವಿಶ್ವನಾಥ, ಕಾಂಗ್ರೆಸ್ ಪ್ರಮುಖರಾದ ಸತೀಶ್ ಕೆಡೆಂಜಿ, ಎಚ್.ಕೆ.ಇಲ್ಯಾಸ್, ಕಡಬ ಗ್ರಾ.ಪಂ. ಸದಸ್ಯರಾದ ಹನೀಫ್ ಕೆ.ಎಂ. ಅಶ್ರಫ್ ಶೇಡಿಗುಂಡಿ, ನೀಲಾವತಿ ಶಿವರಾಮ, ಶರೀಫ್ ಎ.ಎಸ್. ಶಾಲಿನಿ ಸತೀಶ್ ನಾಕ್, ಸತೀಶ್ ನಾಕ್. ಕೆ.ಜೆ.ತೋಮಸ್, ತೋಮಸ್ ಇಡೆಯಾಳ ಮೊದಲಾದವರು ಉಪಸ್ಥಿತರಿದ್ದರು.

ಪ್ರತಿಭಟನೆ ರದ್ದು-ಮನವಿಗೆ ಸೀಮಿತ: ಕಚ್ಚಾ ತೈಲ ಬೆಲೆ ಏರಿಕೆ ವಿರುದ್ದ ಕಡಬ ಬ್ಲಾಕ್ ಕಾಂಗ್ರೆಸ್ ಮೆರವಣಿಗೆ ನಡೆಸಿ ಪ್ರತಿಭಟನೆಗೆ ಸಿದ್ದತೆ ನಡೆಸಿತ್ತಾದರೂ, ಕೊರೋನಾ ಹಿನ್ನಲೆಯಲ್ಲಿ ೧೪೪ ಸೆಕ್ಷನ್ ಹಾಕಿರುವುದರಿಂದ ಪ್ರತಿಭಟನೆಯನ್ನು ರದ್ದುಗೊಳಿಸಿ, ಕೇವಲ ಮನವಿ ನೀಡುವುದಕ್ಕೆ ಸೀಮಿತಗೊಳಿಸಲಾಗಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.