HomePage_Banner
HomePage_Banner
HomePage_Banner

ಮೆಸ್ಕಾಂ ದ್ವಿತೀಯ ದರ್ಜೆ ಮೆಕ್ಯಾನಿಕ್ ಕೃಷ್ಣ ಕೆ.ಎಸ್. ಜೂ. 30ರಂದು ನಿವೃತ್ತಿ

Puttur_Advt_NewsUnder_1
Puttur_Advt_NewsUnder_1
ಪುತ್ತೂರು: ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿಯ ಪುತ್ತೂರು ಎಲ್.ಟಿ. ರೇಟಿಂಗ್ ಉಪ ವಿಭಾಗದಲ್ಲಿ ಮೆಕ್ಯಾನಿಕ್ ದರ್ಜೆ-೨ ಆಗಿ ಕಾರ್ಯನಿರ್ವಹಿಸುತ್ತಿರುವ ಕೃಷ್ಣ ಕೆ.ಎಸ್.ರವರು ಜೂ. 30ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.
೧೯೮೧ರಲ್ಲಿ ಅಂದಿನ ಕ.ವಿ.ಮಂ. ಪುತ್ತೂರು ಉಪ ವಿಭಾಗದಲ್ಲಿ ಟಿ.ಟಿ.ಆರ್. ಸೇವೆಯನ್ನು ಪ್ರಾರಂಭಿಸಿದರು. ನಂತರ ೧೯೮೪ರಲ್ಲಿ ಸಹಾಯಕ ಮಾರ್ಗದಾಳು ಆಗಿ ಖಾಯಂಗೊಂಡು ಪುತ್ತೂರು ಉಪ ವಿಭಾಗದ ಕಾಮಗಾರಿ ಘಟಕದಲ್ಲಿ ಸೇವೆ ಸಲ್ಲಿಸಿ ೧೯೮೭ರಲ್ಲಿ ಉಳ್ಳಾಲ ಶಾಖೆಗೆ ವರ್ಗಾವಣೆಗೊಂಡಿದ್ದರು. ಅಲ್ಲಿಂದ ೧೯೯೪ರಲ್ಲಿ ವಿಟ್ಲ ಶಾಖೆಗೆ ವರ್ಗಾವಣೆಯಾಗಿದ್ದರು. ೧೯೯೬ರಲ್ಲಿ ಮಾರ್ಗದಾಳಾಗಿ ಪದೋನ್ನತಿ ಹೊಂದಿ ಪುತ್ತೂರು ಉಪ ವಿಭಾಗದ ಕಾರ್ಯ ಮತ್ರು ಪಾಲನಾ ಶಾಖೆ-೨ರಲ್ಲಿ ನಿಯುಕ್ತಿಗೊಂಡು ಸೇವೆ ಸಲ್ಲಿಸಿ, ೨೦೦೫ರಲ್ಲಿ ಮೆಕ್ಯಾನಿಕ್ ದರ್ಜೆ – ೨ಕ್ಕೆ ಭಡ್ತಿ ಹೊಂದಿದ್ದಾರೆ. ೧೯ವರ್ಷಗಳ ಕಾಲ ಈ ವಿಭಾಗದಲ್ಲಿ ಸೇವೆ ಸಲ್ಲಿಸಿದ ಇವರು ೨೦೧೫ರಲ್ಲಿ ಎಲ್.ಟಿ. ರೇಟಿಂಗ್ ಉಪ ವಿಭಾಗಕ್ಕೆ ವರ್ಗಾವಣೆಗೊಂಡಿದ್ದರು. ಇವರು ಒಟ್ಟು ೩೯ ವರ್ಷಗಳ ಕಾಲ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ .
ಸಂಘ ಸಂಸ್ಥೆಗಳಲ್ಲಿ ಸೇವೆ: ಕೃಷ್ಣ  ಕೆ.ಎಸ್.ರವರು ಕ.ವಿ.ಪ್ರ.ನಿ. ನೌಕರರ ಸಂಘದ ಸ್ಥಳೀಯ ಸಮಿತಿಯ ಕಾರ್ಯದರ್ಶಿಯಾಗಿ 6 ವರ್ಷಗಳ ಕಾಲ ಸೇವೆ ಸಲ್ಲಿಸಿ ಸಂಘದ ಬೆಳವಣಿಗೆಗೆ ಕಾರಣಕರ್ತರಾಗಿದ್ದಾರೆ. ಬನ್ನೂರು ಗ್ರಾಮದ ಕಂಜೂರು ಕೆ. ಸುಬ್ಬಣ್ಣಯ್ಯ ಮತ್ತು ಬುಡ್ಡಮ್ಮ ದಂಪತಿಯ ಮಗನಾದ ಇವರು ಪ್ರಸ್ತುತ ಪತ್ನಿ ಹೇಮಲತಾ ಹೆಚ್.ಆರ್. ಅವರೊಂದಿಗೆ ಕೆಮ್ಮಾಯಿಯಲ್ಲಿ ವಾಸ್ತವ್ಯ ಇದ್ದಾರೆ.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.