ವಿಟ್ಲ: ಪುತ್ತೂರಿನ ತಾಲೂಕು ಪಂಚಾಯತ್ ವಾಣಿಜ್ಯ ಸಂಕೀರ್ಣದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಮಹಿಳಾ ಗ್ರಾಮೀಣ ಅಭಿವೃದ್ಧಿ ಸಹಕಾರಿ ಸಂಘದ ಮೂರನೇ ಶಾಖೆ ಈಶ್ವರ ಮಂಗಲದ ಹಿರಾ ಟವರ್ ನಲ್ಲಿ ಜೂ.29ರಂದು ಉದ್ಘಾಟನೆಗೊಂಡಿತು.
ಶಾಖೆಯನ್ನು ಕಾವು ವ್ಯವಸಾಯ ಸೇವಾಸಹಕಾರಿ ಸಂಘದ ಅಧ್ಯಕ್ಷರಾಗಿರುವ ನನ್ಯ ಅಚ್ಚುತ ಮೂಡೆತ್ತಾಯರವರು ಉದ್ಘಾಟಿಸಿದರು. ಭದ್ರತಾ ಕೊಠಡಿಯನ್ನು ಹಿರಾ ಟವರ್ಸ್ ನ ಮಾಲಕರಾದ ಪಿ.ಎ. ಅಬ್ದುಲ್ ಖಾದರ್ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಗ್ರಾಮೀಣಾ ಅಭಿವೃದ್ಧಿ ಸಹಕಾರಿ ಸಂಘದ ಅಧ್ಯಕ್ಷೆ ಪುಷ್ಪಲತಾ ಕೆ.ವಿ.ಯವರು ವಹಿಸಿದ್ದರು.
ನೆಟ್ಟಣಿಗೆ ಮುಡ್ನೂರು ಗ್ರಾ.ಪಂ ಅಧ್ಯಕ್ಷೆ ಶಂಕರಿ ಆರ್ ಭಂಡಾರಿ, ಉಪಾಧ್ಯಕ್ಷ ಶ್ರೀರಾಮ್ ಪಕ್ಕಳ, ಶ್ರೀ ಕ್ಷೇತ್ರ ಹನುಮಗಿರಿಯ ಧರ್ಮದರ್ಶಿ ಶಿವರಾಂ ಪಿ, ನಾರಾಯಣ ಪೂಜಾರಿ, ಗ್ರಾಮ ಪಂಚಾಯತ್ ಸದಸ್ಯ ರಮೇಶ್ ರೈ ಸಾಂತ್ಯ, ಅಬ್ದುಲ್ ಖಾದರ್ ನರಸಿನಡ್ಕ, ಹನಿ ಸ್ವೀಟ್ಸ್ನ ಮಾಲಕ ಅಬ್ದುಲ್ ರಹಿಮಾನ್, ಸಂದೀಪ್ ಕಾರಂತ, ಗುಡ್ಡಪ್ಪ ಗೌಡ, ಪಿಆರ್ಒ ಕೆ. ವಿಜಯ ಕುಮಾರ್, ಸಂಘದ ಉಪಾಧ್ಯಕ್ಷೆ ಅಮೃತಾ, ಸದಸ್ಯರಾದ ಶುಭಲಕ್ಷ್ಮಿ, ಬಿ.ಆರ್ ರಾಜೇಶ್ವರಿ, ಪ್ರಫುಲ್ಲಾ, ಶಕೀಲಾ, ಗೀತಾ ಎಂ, ರೇಷ್ಮಾ ಎಸ್., ನೀತಾ ಎನ್., ಜಾಹ್ನವಿ ಹಾಗೂ ವಿಮಲ ಎನ್.
ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪೂರ್ಣಿಮಾ ಎನ್, ಶಾಖಾ ಮುಖ್ಯಸ್ಥೆ ಕುಮಾರಿ ಪವಿತ್ರ ಮೊದಲಾದವರು ಉಪಸ್ಥಿತರಿದ್ದರು.