Home_Page_Advt
Home_Page_Advt
Home_Page_Advt

ಹಿರೇಬಂಡಾಡಿ: 1 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗೆ ಚಾಲನೆ

Puttur_Advt_NewsUnder_1
Puttur_Advt_NewsUnder_1

ಹಿರೇಬಂಡಾಡಿ: ಹಿರೇಬಂಡಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 1 ಕೋಟಿ ರೂ.,ವೆಚ್ಚದಲ್ಲಿ ನಡೆಯುವ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕ ಸಂಜೀವ ಮಠಂದೂರುರವರು ಜೂ.29ರಂದು ಶಿಲಾನ್ಯಾಸ ನೆರವೇರಿಸಿದರು.

೧ ಕೋಟಿ ರೂ.,ಅನುದಾನದಲ್ಲಿ ಗ್ರಾಮ ಪಂಚಾಯತ್ ಭವನ, ಸ್ತ್ರೀಶಕ್ತಿ ಭವನ, ಸಂತೆ ಮಾರುಕಟ್ಟೆ, ದಾಸ್ತಾನು ಕೊಠಡಿ ಹಾಗೂ ವಾಣಿಜ್ಯ ಕೊಠಡಿಗಳ ನಿರ್ಮಾಣ ನಡೆಯಲಿದ್ದು ಇದರ ಕಾಮಗಾರಿಗೆ ಶಾಸಕ ಮಠಂದೂರುರವರು ಶಿಲಾನ್ಯಾಸ ನೆರವೇರಿಸಿ, ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿ ಎಂದು ಶುಭಹಾರೈಸಿದರು. ಜಿ.ಪಂ.ಸದಸ್ಯೆ ಶಯನಾ ಜಯನಂದ, ತಾ.ಪಂ.ಸದಸ್ಯ ಮುಕುಂದ ಗೌಡ ಬಜತ್ತೂರು, ಗ್ರಾ.ಪಂ.ಅಧ್ಯಕ್ಷ ಹಮ್ಮಬ್ಬ ಶೌಕತ್ ಆಲಿ, ಉಪಾಧ್ಯಕ್ಷೆ ಉಷಾಲಕ್ಷ್ಮೀಶ, ಸದಸ್ಯರಾದ ವಿಶ್ವನಾಥ ಕೆಮ್ಮಟೆ, ನಿತಿನ್ ತಾರಿತ್ತಾಡಿ, ಸದಾನಂದ ಶೆಟ್ಟಿ ಅಡೆಕ್ಕಾಲ್, ಸೋಮೇಶ್ ಕೇಪುಳ, ಚಂದ್ರಾವತಿ ನೆಹರುತೋಟ, ಮಂಜುಳಾ ಸರೋಳಿ, ಮಾಲತಿ ಹರಿನಾರಾಯಣ ಕೆಮ್ಮಾರ, ಪುಷ್ಪಾವತಿ ಶಾಂತಿತ್ತಡ್ಡ, ಮುದ್ದ ತಾಳಿಪಡ್ಪು, ಅಭಿವೃದ್ದಿ ಅಧಿಕಾರಿ ದಿನೇಶ್ ಶೆಟ್ಟಿ, ಕಾರ‍್ಯದರ್ಶಿ ಪರಮೇಶ್ವರ, ಉಪ್ಪಿನಂಗಡಿ ಸಿ.ಎ. ಬ್ಯಾಂಕ್ ನಿರ್ದೇಶಕ ದಯಾನಂದ ಸರೋಳಿ, ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ನಾರಾಯಣ ಕನ್ಯಾನ, ಹಿರೇಬಂಡಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರುಗಳು, ಸದಸ್ಯರುಗಳು, ಗ್ರಾ.ಪಂ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಶೌಕತ್ ಆಲಿ ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.