HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಪುತ್ತೂರಿನಲ್ಲಿ ಆಶ್ರಯ ಟ್ಯೂಷನ್ ಸೆಂಟರ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ವಿದ್ಯಾರ್ಥಿಗಳಿಗೆ ಕಷ್ಟದ ವಿಷಯಗಳಾದ ಗಣಿತ, ವಿಜ್ಞಾನಗಳಿಗೆ ತರಬೇತಿ ನೀಡುವ ಆಶ್ರಯ ಕೋಚಿಂಗ್ ಸೆಂಟರ್ ಜೂ.29ರಂದು ಬಸ್ ನಿಲ್ದಾಣದ ಬಳಿಯಿರುವ ಮುಳಿಯ ನೆಸ್ಟ್ ಕಟ್ಟಡದ ಎರಡನೇ ಮಹಡಿಯ, ಸ್ವಂತ ಕೊಠಡಿಯಲ್ಲಿ ಗಣಪತಿ ಹೋಮ ಹಾಗೂ ಸರಸ್ವತಿ ಪೂಜೆಯೊಂದಿಗೆ ಸರಳ ರೀತಿಯಲ್ಲಿ ಶುಭಾರಂಭಗೊಂಡಿತು.


ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯಾಗಿ ಕಳೆದ 10 ವರ್ಷಗಳ ಸುಧೀರ್ಘ ಅನುಭವವದೊಂದಿಗೆ ಆ ಸಂಸ್ಥೆಯಲ್ಲಿ ಶೇ.100 ಫಲಿತಾಂಶ ಪಡೆಯುವಲ್ಲಿ ಸಾರ್ಥಕ ಶಿಕ್ಷಕಿಯಿಂದ ಟ್ಯೂಷನ್ ಸೆಂಟರ್ ನಡೆಸಲ್ಪಡುತ್ತದೆ. ಇವರು ಈಗಾಗಲೇ 9 ಹಾಗೂ 10ನೇ ತರಗತಿಯ ಗಣಿತ, ವಿಜ್ಞಾನಗಳಿಗೆ ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿಗಳಿಗೆ ನಿರಂತರವಾಗಿ ತರಬೇತಿಯನ್ನು ನೀಡಲಾಗುತ್ತಿದ್ದು ಎಸ್‌ಎಸ್‌ಎಲ್‌ಸಿಯಲ್ಲಿ ಸುಮಾರು 50ಕ್ಕೂ ಅಧಿಕ ಮಂದಿ ಸಂಸ್ಥೆಯಲ್ಲಿ ತರಬೇತಿ ಪಡೆದು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿರುತ್ತಾರೆ. ಸಂಸ್ಥೆಯಲ್ಲಿ ದಾಖಲಾತಿ ಪಡೆದು ಆರ್ಥಿಕ ತೊಂದರೆಗೆ ಒಳಗಾದ ವಿದ್ಯಾರ್ಥಿಗಳಿಗೆ ಉಚಿತ ತರಬೇತಿಯನ್ನು ನೀಡಲಾಗಿದೆ.


ವಿದ್ಯಾರ್ಥಿಗಳು ಅನುಕೂಲಕ್ಕಾಗಿ ವಿಶಾಲ ಹಾಗೂ ವಿಸ್ತೃತಗೊಂಡು ಹೊಸದಾಗಿ ಪ್ರಾರಂಭಗೊಂಡಿರುವ ಸಂಸ್ಥೆಯಲ್ಲಿ ಆಧುನಿಕ ತಂತ್ರಜ್ಞಾನ ಆಧಾರಿತ ತರಗತಿಗಳನ್ನು ನೀಡಲಾಗುವುದು. ಸ್ಮಾರ್ಟ್ ಕ್ಲಾಸ್ ಹಾಗೂ ಪ್ರೋಜೆಕ್ಟರ್ ಮೂಲಕ ತರಗತಿ ನೀಡಲಾಗುವುದು. ಈಗಾಗಲೇ ಗಣಿತ, ವಿಜ್ಞಾನಗಳಿಗೆ ತರಗತಿ ನಡೆಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಸಂಸ್ಕೃತ ವಿಷಯಗಳಿಗೂ ಟ್ಯೂಷನ್ ನೀಡಲಾಗುವುದು. ಕಲಿಕೆಯಲ್ಲಿ ತೀರಾ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪ್ರತ್ಯೇಕವಾಗಿಯೂ ಟ್ಯೂಷನ್ ನೀಡಲಾಗುವುದು. ವಿದ್ಯಾರ್ಥಿಗಳ ಬೇಡಿಕೆ ಸಂಬಂಧಿಸಿ ಉಳಿದ ವಿಷಯಗಳಿಗೂ ಟ್ಯೂಷನ್ ನೀಡಲಾಗುವುದು. ಪ್ರತಿದಿನ ಸಂಜೆ ಹಾಗೂ ರಜಾದಿನಗಳಲ್ಲಿ ಇಡೀ ದಿನದ ತರಗತಿಗಳು ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 9480343997, 8660758930 ನಂಬರನ್ನು ಸಂಪರ್ಕಿಸುವಂತೆ ಕೋಚಿಂಗ್ ಸೆಂಟರ್‌ನ ಮುಖ್ಯಸ್ಥೆ ಶೋಭಾ ಅಶೋಕ್ ಕುಂಬ್ಳೆ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.