Home_Page_Advt
Home_Page_Advt
Home_Page_Advt

ನೆಹರೂನಗರದಲ್ಲಿ ಸಾಯಿ ಮೊಬೈಲ್ಸ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನೆಹರುನಗರದ ಮಂಗಳಾ ಸಮೀಪ ಸಚ್ಚಿತ್ ಕಾಂಪ್ಲೆಕ್ಸ್‌ನಲ್ಲಿ ಜೂ.೨೯ರಂದು ಸಾಯಿ ಮೊಬೈಲ್ಸ್ ನೂತನ ಮಳಿಗೆಯನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ರಿಬ್ಬನ್ ಕತ್ತರಿಸಿ ದೀಪ ಬೆಳಗಿಸಿ ಉದ್ಘಾಟಿಸಿದರು ಬಳಿಕ ಮಾತನಾಡಿದ ಅವರು ನೆಹರೂ ನಗರ ಭಾಗದಲ್ಲಿ ಶಾಲಾ ಕಾಲೇಜುಗಳು ಹೆಚ್ಚಾಗಿರುವುದರಿಂದ ಇವರಿಗೆ ಬೇಕಾದ ಉತ್ತಮ ಹೊಸ ವಿನ್ಯಾಸದ ಮೊಬೈಲ್ ಇಂಟರ್ನೆಟ್ ಇತರ ವ್ಯವಸ್ಥೆಗಳನ್ನು ಪುತ್ತೂರಿನ ಜನತೆಗೆ ಉತ್ತಮ ಸೇವೆಯನ್ನು ನೀಡಲಿ. ಅದೇ ರೀತಿಯಲ್ಲಿ ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಉದ್ದೇಶದಂತೆ ಆತ್ಮ ನಿರ್ಭರ ಭಾರತ ಸ್ವಾವಲಂಬಿ ಸ್ವಾಭಿಮಾನಿ ಭಾರತ ಆಗಬೇಕೆಂಬ ನಿಟ್ಟಿನಲ್ಲಿ ಎಲ್ಲ ಯುವಕರು ಸ್ವಂತ ಉದ್ಯೋಗವನ್ನು ಮಾಡಿ ಇತರ ದೇಶದಿಂದ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು ಮೇಕ್ ಇನ್ ಇಂಡಿಯಾ ಕಲ್ಪನೆಯನ್ನು ಪೂರ್ಣಗೊಳಿಸಬೇಕು ಸಾಯಿ ಮೊಬೈಲ್ಸ್ ಕೂಡ ಮುಂದಿನ ದಿನಗಳಲ್ಲಿ ಇದಕ್ಕೆ ಪೂರಕವಾಗಿ ಕೆಲಸ ಮಾಡಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ವಸಂತ್, ಎಎಸ್‌ಐ ಲೋಕನಾಥ್, ಮಾಲಕರ ತಂದೆ ಬಿಎನ್ ಕೃಷ್ಣ ತಾಯಿ ಬಿಎ ಜಯಂತಿ ಉಪಸ್ಥಿತರಿದ್ದರು.

ನಮ್ಮಲ್ಲಿ ಎಲ್ಲಾ ಕಂಪೆನಿಯ ಮೊಬೈಲ್ ಫೋನ್ ಗಳು ಮೊಬೈಲ್ ಬಿಡಿ ಭಾಗಗಳು ಲಭ್ಯವಿದ್ದು ಮೊಬೈಲ್ ಸರ್ವಿಸ್ ಅನ್ನು ಅತಿ ಶೀಘ್ರದಲ್ಲಿ ಮಾಡಿಕೊಡಲಾಗುವುದು ಹೊಸ ಮೊಬೈಲ್ ಖರೀದಿಗೆ ಸಾಲ ಸೌಲಭ್ಯ ಬಜಾಜ್ ಫಿನ್ ಸರ್ವಿಸ್ ಲಭ್ಯವಿದೆ ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿದೆ. – ಭವಿತ್ ಕೃಷ್ಣ ಮ್ಹಾಲಕರು, ಸಾಯಿ ಮೊಬೈಲ್ಸ್ ನೆಹರುನಗರ

About The Author

Related posts

1 Comment

  1. Sudarshan

    ಅಲ್ಲಿರುವ ಬಹುತೇಕ ಮೊಬೈಲ್ ಚೈನಾ ಮೇಕ್. ಇದು ಅತ್ಮನಿರ್ಭರ ಅಗಲ್ಲ

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.