HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಒಳಮೊಗ್ರು ಗ್ರಾಪಂ ವರ್ಗಾವಣೆಗೊಂಡ ಕಾರ್ಯದರ್ಶಿ, ಗುಮಾಸ್ತಗೆ ಬೀಳ್ಕೊಡುಗೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಒಳಮೊಗ್ರು ಗ್ರಾಪಂ ಕಚೇರಿಯಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ದಾಮೋದರ್ ಹಾಗೂ ಗುಮಾಸ್ತರಾಗಿ ಸೇವೆಯಲ್ಲಿದ್ದ ಜಯಶೀಲ ರೈ ಅವರು ಭಡ್ತಿಗೊಂಡು ವರ್ಗಾವಣೆಗೊಂಡಿದ್ದು ಇವರಿಬ್ಬರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಗ್ರಾಪಂ ಕಚೇರಿಯಲ್ಲಿ ಜೂ. 29ರಂದು ನಡೆಯಿತು. ಒಳಮೊಗ್ರು ಗ್ರಾಪಂ ಅಧ್ಯಕ್ಷ ಯತಿರಾಜ್ ರೈ ನೀರ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಶಾಲು, ಫಲಪುಷ್ಪ ನೀಡಿ ಗೌರವಿಸಲಾಯಿತು.


ಕಾರ್ಯದರ್ಶಿಯಾಗಿದ್ದ ದಾಮೋದರ್‌ರವರು 2002ರಲ್ಲಿ ಒಳಮೊಗ್ರು ಗ್ರಾಪಂ ನಲ್ಲಿ ಕಾರ್ಯದರ್ಶಿಯಾಗಿ ನಿಯುಕ್ತಿಗೊಂಡು ಎಂಟು ವರ್ಷಗಳ ಸೇವೆಯಲ್ಲಿದ್ದು ಮಂಗಳೂರು ತಾಲೂಕು ಪಂಚಾಯತ್ ಕಚೇರಿಯಲ್ಲಿ ಗ್ರೇಡ್ 1 ಕಾರ್ಯದರ್ಶಿಯಾಗಿ ಭಡ್ತಿಗೊಂಡು ವರ್ಗಾವಣೆಗೊಂಡಿರುತ್ತಾರೆ. ಗುಮಾಸ್ತರಾಗಿದ್ದ ಜಯಶೀಲ ರೈ ಯವರು ೧೯೯೫ ರಲ್ಲಿ ಗುಮಾಸ್ತರಾಗಿ ಒಳಮೊಗ್ರು ಗ್ರಾಪಂ ಕಚೇರಿಯಲ್ಲಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿ ಇದೀಗ ಸುಳ್ಯ ತಾಲೂಕು ಬಾಳಿಲ ಗ್ರಾಪಂ ಕಚೇರಿಯಲ್ಲಿ ಗ್ರೇಡ್ -2 ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷರಿಂದ ಗ್ರಾಪಂ ಸದಸ್ಯರುಗಳಿಗೆ ವಿದಾಯಕೂಟ ಸಮಾರಂಭವೂ ನಡೆಯಿತು.
ಕಾರ್ಯಕ್ರಮದಲ್ಲಿ ಗ್ರಾಪಂ ಉಪಾಧ್ಯಕ್ಷೆ ಸುನಂದ, ಸದಸ್ಯರುಗಳಾದ ಶಶಿಕಿರಣ್ ರೈ, ಶೀನಪ್ಪ ನಾಯ್ಕ, ಅಬ್ದುಲ್‌ರಹಿಮಾನ್ ಹಾಜಿ ಅರಿಯಡ್ಕ, ಉಷಾ ನಾರಾಯಣ , ಭಾಗೀರತಿ, ವಸಂತಿ ಆರ್. ಶೆಟ್ಟಿ, ವಸಂತಿ ಡಿ, ಚಂದ್ರಕಲಾ, ಪಿಡಿಒ ಗೀತಾ ಬಿಎಸ್, ಜಾನಕಿ, ಗುಲಾಬಿ, ಕೇಶವ, ನೂತನ ಕಾರ್ಯದರ್ಶಿ ಜಯಂತಿ, ಗ್ರಂಥಪಾಲಕಿ ಸಿರಿನ, ಮೋಹನ್ ಕುಮಾರ್ ಉಪಸ್ಥಿತರಿದ್ದರು. ತ್ರಿವೇಣಿ ಪಳ್ಳತ್ತಾರು ಸ್ವಾಗತಿಸಿದರು. ಮಹೇಶ್ ಕೇರಿ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.