Home_Page_Advt
Home_Page_Advt
Home_Page_Advt

ಉಪ್ಪಿನಂಗಡಿ ಸಿ.ಎ. ಬೇಂಕ್ ಮುಖ್ಯ ಕಾರ‍್ಯಕಾರ್ಯನಿರ್ವಹಣಾಧಿಕಾರಿ ಜತ್ತಪ್ಪ ಗೌಡ, ಪ್ರಧಾನ ವ್ಯವಸ್ಥಾಪಕಿ ಸಾವಿತ್ರಿ ಜೂ. 30ರಂದು ನಿವೃತ್ತಿ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಇಲ್ಲಿನ ಸಹಕಾರಿ ವ್ಯವಸಾಯಿಕ ಸಂಘದಲ್ಲಿ ಕಳೆದ 36 ವರ್ಷಗಳಿಂದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಇದೀಗ ಕಳೆದ 18 ತಿಂಗಳುಗಳಿಂದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಆರ್. ಜತ್ತಪ್ಪ ಗೌಡ ಮತ್ತು ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಇದೀಗ ಪ್ರಧಾನ ವ್ಯವಸ್ಥಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಡಿ.ಕೆ. ಸಾವಿತ್ರಿ ಇವರುಗಳು ಜೂ. 30ರಂದು ನಿವೃತ್ತಿ ಹೊಂದಲಿದ್ದಾರೆ.


ಬಿ.ಕಾಂ. ಪದವೀಧರರಾಗಿರುವ ಆರ್. ಜತ್ತಪ್ಪ ಗೌಡರವರು ೧೯೮೪ರಲ್ಲಿ ಗುಮಾಸ್ತ ಹುದ್ದೆಗೆ ನೇಮಕಗೊಂಡವರು ಬಳಿಕ ಲೆಕ್ಕಾಧಿಕಾರಿಯಾಗಿ, ಶಾಖಾ ಮೆನೇಜರ್ ಆಗಿ ಸೇವೆ ಸಲ್ಲಿಸಿ, 2019 ಜನವರಿ ೧ರಿಂದ ಮುಖ್ಯ ಕಾರ‍್ಯನಿರ್ವಹಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಉಪ್ಪಿನಂಗಡಿ ಕಸಬಾ ಗ್ರಾಮದ ರಂಗಾಜೆ ನಿವಾಸಿ ಆಗಿರುವ ಜತ್ತಪ್ಪ ಗೌಡ ಅವರ ಪತ್ನಿ ಶ್ರೀಮತಿ ಸವಿತಾ ಗೃಹಿಣಿಯಾಗಿರುತ್ತಾರೆ. ಪುತ್ರರಾದ ಭರತ್ ಆರ್.ಜೆ. ಮೆಕಾನಿಕಲ್ ಇಂಜಿನಿಯರ್ ಆಗಿದ್ದು ಬೆಂಗಳೂರು ಖಾಸಗಿ ಸಂಸ್ಥೆಯಲ್ಲಿ, ಮನೋಹರ್ ಆರ್.ಜೆ. ಬೆಂಗಳೂರು ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ. ಇನ್ನೋರ್ವ ಪುತ್ರ ರವಿರಾಜ್ ಆರ್.ಜೆ. ಚಾರ್ಟಡ್ ಅಕೌಂಟೆಂಟ್ ಓದುತ್ತಿದ್ದಾರೆ.
ಡಿ.ಕೆ. ಸಾವಿತ್ರಿ:
ಎಸ್.ಎಸ್.ಎಲ್.ಸಿ. ಓದಿ, ಸಹಕಾರಿ ಉದ್ಯೋಗ ತರಬೇತಿ ಪಡೆದಿರುವ ಡಿ.ಕೆ. ಸಾವಿತ್ರಿಯವರು ೧೯೮೬ರಲ್ಲಿ ಗುಮಾಸ್ತ ಹುದ್ದೆಗೆ ನೇಮಕಗೊಂಡವರು ಬಳಿಕ ಲೆಕ್ಕಾಧಿಕಾರಿಯಾಗಿ, ಮೆನೇಜರ್ ಆಗಿ, ಇದೀಗ ಕೆಲ ವರ್ಷಗಳಿಂದ ಪ್ರಧಾನ ವ್ಯವಸ್ಥಾಪಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇಳಂತಿಲ ಗ್ರಾಮದ ಪೆದಮಲೆ ನಿವಾಸಿ ಆಗಿರುವ ಡಿ.ಕೆ. ಸಾವಿತ್ರಿಯವರ ಪತಿ ಗಣೇಶ್ ದೇವಾಡಿಗ ಚೆಂಡೆ ವಾದಕರಾಗಿರುತ್ತಾರೆ. ಪುತ್ರಿ ಧನ್ಯಶ್ರೀಯನ್ನು ಮದುವೆ ಮಾಡಿ ಕೊಟ್ಟಿದ್ದು, ಪುತ್ರ ಮಂಜುನಾಥ ಮೆಕಾನಿಕಲ್ ಇಂಜಿನಿಯರ್ ಆಗಿದ್ದು ಬೆಂಗಳೂರು ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿ ಇದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.