Home_Page_Advt
Home_Page_Advt
Home_Page_Advt

ತೆಂಕಿಲ: ಕೊಟ್ಟಿಬೆಟ್ಟು ಎಂಬಲ್ಲಿ ಮರಬಿದ್ದು ಮನೆ, ದೈವದ ಕಾಂಪೌಂಡ್‌ಗೆ ಹಾನಿ, ಕಾರು ಸಂಪೂರ್ಣ ಜಖಂ

ಪುತ್ತೂರು: ತೆಂಕಿಲ ಕೊಟ್ಟಿಬೆಟ್ಟು ಎಂಬಲ್ಲಿ ಜೂ.29ರಂದು ಸಂಜೆ ವೇಳೆಗೆ ಭಾರಿ ಗಾತ್ರದ ಮಾವಿನ ಮರವೊಂದು ಬುಡ ಸಹಿತ ಮುರಿದು ಬಿದ್ದು, ದೈವದ ಕಟ್ಟೆಯ ಕಾಂಪೌಂಡ್ ಹಾಗೂ ಮನೆಗಳ ಹಾನಿಯಾಗಿ, ಮನೆ ಅಂಗಳದಲ್ಲಿ ನಿಲ್ಲಿಸಿದ್ದ ಕಾರು ಸಂಪೂರ್ಣ ಜಖಂಗೊಂಡಿರುವ ಘಟನೆ ಜೂ.29ರಂದು ನಡೆದಿದೆ.

ತೆಂಕಿಲ ಕೊಟ್ಟಿಬೆಟ್ಟು ಎಂಬಲ್ಲಿರುವ ಪುರುಷೋತ್ತಮ ನಾಯ್ಕ್‌ ಎಂಬವರ ಮನೆ ಬಳಿ ಘಟನೆ ನಡೆದಿದೆ. ಪುರುಷೋತ್ತಮ ನಾಯ್ಕ್‌ ಅವರ ಮನೆ ಬಳಿ ಕೊಟ್ಟಿಬೆಟ್ಟು ಕುಟುಂಬದ ತರವಾಡಿನ ಗುಳಿಗ ಹಾಗೂ ಬೈರವ ದೈವದ ಕಟ್ಟೆಯಿದೆ.


 ಅದರ ಹಿಂಭಾಗದಲ್ಲಿ ಸುಮಾರು 800 ವರ್ಷಗಳಷ್ಟು ಇತಿಹಾಸವಿರುವ ಬೃಹತ್ ಗಾತ್ರದ ಮಾವಿನ ಮರವಿದ್ದು ಅದು ಬುಡ ಸಹಿತ ಮುರಿದು ಬಿದ್ದಿದೆ. ಇದರಿಂದಾಗಿ ದೈವದ ಕಾಂಪೌಂಡ್‌ಗೆ ಅಡ್ಡವಾಗಿ ಬಿದ್ದು ಅದಕ್ಕೆ ಹಾನಿಯಾಗಿದೆ. ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಅವರ ಅಳಿಯನ ಮಾರುತಿ ಎಸ್ಟೀಮ್ ಕಾರು ಸಂಪೂರ್ಣ ಜಖಂಗೊಂಡಿದೆ. ಮನೆಯ ಮಾಡು, ಅಂಗಳಕ್ಕೆ ಅಳವಡಿಸಲಾಗಿದ್ದ ಶೀಟ್‌ನ ಛಾವಣಿಗಳಿಗೆ ಹಾನಿಯಾಗಿದೆ.

 

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.