HomePage_Banner
HomePage_Banner
HomePage_Banner
Breaking News

ಲಾಕ್‌ಡೌನ್ ತಲೆಬಿಸಿ: ರಕ್ತದಾನ ಶಿಬಿರಕ್ಕೆ ಬ್ರೇಕ್ | ರಕ್ತ ಸ್ಟಾಕ್ ಇಲ್ಲ | ರಕ್ತದ ಪ್ಲೇಟ್‌ಲೆಟ್ ಹೆಚ್ಚಿಸಲು ಸವಾಲು | ಮಳೆಗಾಲದ ವೈರಸ್ ಡೆಂಗ್ಯೂ ಅಟ್ಟಹಾಸ

Puttur_Advt_NewsUnder_1
Puttur_Advt_NewsUnder_1

* ರಕ್ತದ ಸಂಗ್ರಹ ಪ್ರಮಾಣ ಶೇ.95ಕ್ಕೆ ಕುಸಿತ
* ಜಿಲ್ಲೆಯ ರಕ್ತನಿಧಿಯಲ್ಲಿ ರಕ್ತ ಪೂರೈಕೆಗೆ ಹರಸಾಹಸ
* ಸೂಚನೆ ಪಾಲಿಸಿ ರಕ್ತದಾನಕ್ಕೆ ಅವಕಾಶ ಕೊಟ್ಟ ಸರಕಾರ
* ತಾಲೂಕಿನಲ್ಲಿ ರಕ್ತದಾನಿಗಳಿಂದ ಅವಿರತ ಶ್ರಮ

@ ಇಬ್ರಾಹಿಂ ಖಲೀಲ್ ಪುತ್ತೂರು
ಪುತ್ತೂರು: ಕದಂಬಭಾಹುವಿನಂತೆ ವಿಸ್ತರಿಸುತ್ತಿರುವ ಚೀನಾದಿಂದ ಬಂದ ಘಾತುಕ ಕಿಲ್ಲರ್ ಕೋವಿಡ್-೧೯ ವೈರಾಸ್ ಭೀತಿಯಿಂದಾಗಿ ನೂರಾರು ಸಂಕಷ್ಟಗಳು ಜನ ಸಾಮಾನ್ಯರ ಮಧ್ಯೆ ಎದುರಾಗುತ್ತಿದೆ. ಸರಕಾರ ಆದರದೇ ಆದ ಪ್ರಯತ್ನವನ್ನು ಮಾಡುತ್ತಿದ್ದರೂ ಕೆಲವೊಮ್ಮೆ ವಿಫಲತೆಯನ್ನೂ ಕೂಡ ಕಾಣಬಹುದು. ಕಳೆದ ೪ ತಿಂಗಳಿಂದ ದೇಶದ ಮೂಲೆ ಮೂಲೆಯಲ್ಲಿ ನಡೆದ ಪ್ರತಿಯೊಂದು ಆಗು-ಹೋಗುಗಳು ಅನೀರಿಕ್ಷಿತವಾಗಿಯೇ ಉಳಿದಿದೆ. ಈ ನಡುವೆ ಮಳೆಗಾಲ ಆರಂಭವಾಗುತ್ತಿದ್ದಂತೆ ಜಿಲ್ಲೆಯಲ್ಲಿ ಮಾರಕವಾಗಿ ನುಸುಳುತ್ತಿರುವ ಡೆಂಗ್ಯೂ, ಇಲಿ ಜ್ವರ, ಮಲೇರಿಯಾ, ಹೆಚ್೧ಎನ್೧ ಕಾಯಿಲೆ ವಕ್ಕರಿಸಿಕೊಳ್ಳಲು ಆರಂಭವಾಗುತ್ತದೆ. ಕಳೆದ ಬಾರಿ ರಾಜ್ಯಾದ್ಯಂತ ಪತ್ತೆಯಾಗುವ ಮಲೇರಿಯಾ ಪ್ರಕರಣದಲ್ಲಿ ಶೇ.೬೦ರಷ್ಟೂ ಜಿಲ್ಲೆಯಲ್ಲಿಯೇ ವರದಿಯಾಗಿದೆ. ಇದೀಗ ಸೈಡ್ ಕಿಲ್ಲರ್‌ನಂತೆ ನುಸುಳುತ್ತಿರುವ ಡೆಂಗ್ಯೂ ಮಹಾಮಾರಿ ಹಿಂದಿನ ವರ್ಷ ಜಿಲ್ಲೆಯನ್ನು ಹೈರಾಣಾಗಿಸಿ ೧೫ ಜೀವವನ್ನು ಬಲಿ ಪಡೆಯಿತು. ಆದರಿಂದ ಮಳೆಗಾಲದ ಸಂದರ್ಭದಲ್ಲಿ ರಕ್ತ, ರಕ್ತದಕಣಗಳು(ಪ್ಲೇಟ್‌ಲೆಟ್) ಹಾಗೂ ರಕ್ತದಪೂರಣದ ಅಗತ್ಯ ಹೆಚ್ಚಾಗಿರುವುದರಿಂದ ಸವಾಲಾಗಿ ಪರಿಣಾಮಿಸಲಿದೆ. ಸಾಮಾನ್ಯವಾಗಿ ಜನವರಿಯಿಂದ ಮೇ ತಿಂಗಳವರೆಗೆ ರಕ್ತದಾನಿಗಳು ಶಿಬಿರಗಳಲ್ಲಿ ಭಾಗವಹಿಸಿ ರಕ್ತದಾನ ಮಾಡುತ್ತಿದ್ದರು. ಲಾಕ್‌ಡೌನ್ ಜಾರಿಯಾದ ಬಳಿಕ ಸಂಘ ಸಂಸ್ಥೆಗಳಿಗೆ ರಕ್ತದಾನ ಶಿಬಿರ ಆಯೋಜಿಸಲು ಸಂಪೂರ್ಣವಾಗಿ ಬ್ರೇಕ್ ಬಿದ್ದಿರುವುದರಿಂದ ಬ್ಲಡ್ ಬ್ಯಾಂಕ್‌ನಲ್ಲಿ ರಕ್ತದ ಕೊರತೆ ಉಂಟಾಗಿದೆ. ಈ ಬಾರಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ರಕ್ತದಾನ ಶಿಬಿರಗಳು ನಡೆಯದ ಕಾರಣ ಡೆಂಗ್ಯೂ ರೋಗಿಗಳಿಗೆ ತುರ್ತು ಅಗತ್ಯ ರಕ್ತದ ಪೂರೈಕೆಗೆ ಕುತ್ತು ಬಿದ್ದಿದೆ ಎಂದು ಹೇಳಲಾಗುತ್ತಿದೆ.
ಡೆಂಗ್ಯೂದಲ್ಲಿ ರಕ್ತಕಣ ದಾನ ಮುಖ್ಯವೇಕೆ?:
ಡೆಂಗ್ಯೂ ಪೀಡಿತರ ರಕ್ತದಲ್ಲಿರುವ ರಕ್ತಕಣಗಳು ನಾಶವಾಗುತ್ತದೆ ಅಲ್ಲದೇ ಇದರಿಂದಾಗಿ ರೋಗಿಯಲ್ಲಿ ಆಂತರಿಕ ರಕ್ತಸ್ರಾವ ಹಾಗೂ ಇನ್ಯಾವುದು ಸಂಕೀರ್ಣದ ರೋಗ ಸಮಸ್ಯೆ ಹುಟ್ಟಿಕೊಳ್ಳುವ ಸಾಧ್ಯತೆ ಹೆಚ್ಚಿರುವುದರಿಂದ ರಕ್ತಕಣಗಳು ೨೦ಸಾವಿರ/.ಞಞ ಕ್ಕಿಂತ ಕಡಿಮೆಯಾದ್ದಲ್ಲಿ, ಸಾಮಾನ್ಯವಾಗಿ ಪ್ಲೇಟ್‌ಲೇಟ್ ೧.೫ ಲಕ್ಷದಿಂದ ೪ ಲಕ್ಷದವರೆಗೆ ಇರುತ್ತದೆ. ಆದರೆ ೪೦ ಸಾವಿರಕ್ಕಿಂತ ಕಡಿಮೆಯಾದರೆ ರೋಗಿಗೆ ಶೀಘ್ರವಾಗಿ ರಕ್ತ ವರ್ಗಾವಣೆ ಮಾಡುವ ಅಗತ್ಯವಿರುತ್ತದೆ. ಇಂತಹ ಸಂದರ್ಭದಲ್ಲಿ ರೋಗಿಗಳ ಜೀವದ ಮೇಲೂ ಆಪಾಯವಾಗಿರುವುದರಿಂದ ರಕ್ತಕಣ ದಾನಿಗಳ ಅವಶ್ಯಕತೆ ಹಾಗೂ ಲಭ್ಯತೆ ಅತೀ ಅನಿವಾರ್ಯವಾಗುತ್ತದೆ. ರಕ್ತದ ಹಾಗೆ ರಕ್ತಕಣಗಳನ್ನು ಬರೇ ೩೫ ದಿನ ಸಂಗ್ರಹಿಸಿಡಬಹುದಾಗಿದೆ. ದಾನಿಗಳಿಂದ ಸಂಗ್ರಹಿಸಿದ ರಕ್ತವನ್ನು ವಿಶೇಷ ಯಂತ್ರಕ್ಕೆ ಹಾಕಿ, ರಕ್ತದಿಂದ ಪ್ಲೇಟ್‌ಲೆಟ್ ಪ್ರತ್ಯೇಕಿಸಲಾಗುತ್ತದೆ. ಪ್ರತಿ ದಾನಿಯಿಂದ ರಕ್ತ ತೆಗೆಯುವಾಗ ೩೦೦ ಎಂ.ಎಲ್ ಎಂದು ನಿಗದಿ ಮಾಡಲಾಗುತ್ತದೆ. ೩ ರಿಂದ ೪ಲೀ. ರಕ್ತದಲ್ಲಿ ೧ರಿಂದ ೧.೫ ಲೀ. ಪ್ಲೇಟ್‌ಲೆಟ್ ಸಿಗುತ್ತದೆ. ಇದರಿಂದ ಡೆಂಗ್ಯೂ ರೋಗಿಗಳಿಗೆ ಪ್ಲೇಟ್‌ಲೆಟ್ ನೀಡುವ ಮೂಲಕ ಆರೋಗ್ಯದಲ್ಲಿ ಚೇತರಿಕೆ ತರಲು ಸಾಧ್ಯವಾಗುತ್ತದೆ. ವೆನ್ಲಾಕ್ ಪ್ರಾದೇಶಿಕ ರಕ್ತ ಮರುಪೂರಣ ಕೇಂದ್ರದಲ್ಲಿ ಇದೀಗ ಪ್ಲಾಸ್ಮಾ ೯೬೪ ಬ್ಯಾಗ್, ಕೆಂಪು ರಕ್ತಕಣ ೧೮೧ ಬ್ಯಾಗ್, ಪ್ಲೇಟ್‌ಲೆಟ್ ೭೫ ಬ್ಯಾಗ್‌ಗಳನ್ನು ಪ್ರತ್ಯೇಕಿಸಿಡಲಾಗಿದ್ದು, ರಕ್ತಕಣಗಳು ಹಾಗೂ ಅವುಗಳ ದಾನದ ಬಗ್ಗೆಗಿರುವ ಅರಿವಿನ ಕೊರತೆಯು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಲಿದೆ ಆದುದರಿಂದ ರಕ್ತಕಣ ದಾನಿಗಳ ಸಮುದಾಯನ್ನು ಕಟ್ಟುವುದು ಅತೀ ಅವಶ್ಯಕವಾಗಿದೆ ಎಂದು ವೆನ್ಲಾಕ್ ಆಸ್ಪತ್ರೆಯ ರಕ್ತನಿಧಿ ಕೇಂದ್ರ ಮುಖ್ಯಸ್ಥ ಡಾ. ಶರತ್ ಕುಮಾರ್ ಜೆ. ಹೇಳಿದರು.
ಎ+, ಎಬಿ+ ಗುಂಪಿನ ರಕ್ತಕ್ಕೆ ಹೆಚ್ಚು ಕೊರತೆ:
ಲಾಕ್‌ಡೌನ್ ಸಮಸ್ಯೆಯಿಂದಾಗಿ ಇದೀಗ ತುರ್ತು ಸಮಯಕ್ಕೆ ರಕ್ತದ ಪೊರೈಕೆಯಾಗುತ್ತಿಲ್ಲ ಎಂಬ ಆತಂಕ ಎದುರಾಗುತ್ತಿದೆ. ಜಿಲ್ಲೆಯಲ್ಲಿ ಡೆಂಗ್ಯೂ ಹಬ್ಬುತ್ತಿದ್ದಂತೆ ಬ್ಲಡ್ ಬ್ಯಾಂಕ್‌ನಲ್ಲಿ ಎ+ ಹಾಗೂ ಎಬಿ+ ಗುಂಪಿನ ರಕ್ತಕ್ಕೆ ಬಹು ದೊಡ್ದ ಪ್ರಮಾಣದಲ್ಲಿ ಬೇಡಿಕೆ ಹೆಚ್ಚಾಗುತ್ತಿದ್ದು, ಕೆಲವು ದಿನಗಳಿಂದ ಆಸ್ಪತ್ರೆಗಳಲ್ಲಿ ರೋಗಿಗೆ ರಕ್ತದ ಪೂರೈಕೆಯನ್ನು ಮಾಡಲು ಹರಸಾಹಸ ಪಡುವಂತಾಗಿದೆ. ಪ್ರಸ್ತುತ ಬಿ ಪಾಸಿಟಿವ್, ಒ ಪಾಸಿಟಿವ್, ಎ ಪಾಸಿಟಿವ್ ಮತ್ತು ಎಬಿ ಪಾಸಿಟಿವ್ ರಕ್ತದ ಗುಂಪುಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಆದರೆ ಎ ಪಾಸಿಟಿವ್ ಮತ್ತು ಎಬಿ ಪಾಸಿಟಿವ್ ಸಂಗ್ರಹ ಇಲ್ಲದೆ ರಕ್ತ ಪೂರೈಕೆ ಸಾಧ್ಯವಾಗುತ್ತಿಲ್ಲ. ಸಾಂಕ್ರಾಮಿಕ ಕಾಯಿಲೆಗಳು ಹೆಚ್ಚಾಗುತ್ತಿರುವುದರಿಂದ ಪ್ಲೇಟ್‌ಲೆಟ್, ಪ್ಲಾಸ್ಮಾಕ್ಕೂ ಹೆಚ್ಚಿನ ಕೊರತೆ ಉಂಟಾಗಿದೆ. ಅಲ್ಲದೇ ಆರು ತಿಂಗಳ ಮಗುವಿನಿಂದ ೪೫ ವರ್ಷದ ವಯೋಮಾನ ವರೆಗಿನ ೧೦೫ಕ್ಕೂ ಹೆಚ್ಚು ಥಲೆಸ್ಸೇಮಿಯಾ ಪೀಡಿತರಿಗೆ ದಿನಕ್ಕೆ ೮ ಯುನಿಟ್‌ಗಳಂತೆ ತಿಂಗಳಿಗೆ ಸುಮಾರು ೩೦೦ರಷ್ಟು ಯನಿಟ್ ರಕ್ತ ಬೇಕಾಗುತ್ತದೆ. ಇವರ ಶರೀರದಲ್ಲಿ ರಕ್ತ ಕಣಗಳು ಉತ್ಪಾದಿಯಾಗದೆ ದಿನ ಕಳೆದಂತೆ ಈ ರೋಗಿಗಳಲ್ಲಿ ರಕ್ತದ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತದೆ. ಥಲೆಸ್ಸೇಮಿಯಾ ರೋಗಿಯ ಬದುಕು ಸಾಗಬೇಕಾದರೆ ಪ್ರತಿ ತಿಂಗಳು ರಕ್ತ ಅವಶ್ಯವಾಗಿರುವುದರಿಂದ ಜಿಲ್ಲೆಯ ರಕ್ತನಿಧಿ ಕೇಂದ್ರಗಳನ್ನೇ ಅವಲಂಬಿಸಿದ್ದಾರೆ. ದಾನಿಗಳು ತುರ್ತಾಗಿ ರಕ್ತದಾನ ಮಾಡುವುದರಿಂದ ಹೆಚ್ಚು ಅನುಕೂಲವಾದೀತು.
ಭಯ ಬಿಟ್ಟು ‘ರಕ್ತ’ದಾನ ಮಾಡಿ:
ವೈರಸ್ ಹಾವಳಿಯನ್ನು ಸಾಧ್ಯವಾದಷ್ಟು ನಿಯಂತ್ರಣ ಮಾಡಬೇಕೆಂಬ ಉzಶದಿಂದ ಕಠಿಣ ನಿರ್ಧಾರಕ್ಕೆ ಮುಂದಾಗಿರುವ ಸರ್ಕಾರ ಶಿಬಿರಗಳನ್ನು ಮಾಡುವವರ ಮೇಲೆ ನಿಬಂಧ ಹಾಕಿರುವುದರಿಂದ ರಕ್ತದಾನ ಶಿಬಿರ ಮಾಡುವ ಖಾಸಗಿ ಆಸ್ಪತ್ರೆಗಳಿಗೆ ಇದು ಸ್ವಲ್ಪಮಟ್ಟಿನ ಸಮಸ್ಯೆ ತಂದೊಡ್ಡಿದೆ. ರಾಜ್ಯದಲ್ಲಿ ೪೩ ಸರಕಾರಿ ಬ್ಲಡ್ ಬ್ಯಾಂಕ್‌ಗಳು ಸೇರಿ ಒಟ್ಟು ೨೨೬ ರಕ್ತ ನಿಧಿ ಕೇಂದ್ರಗಳಿವೆ. ಶಸ್ತ್ರಚಿಕಿತ್ಸೆ, ಡಯಾಲಿಸಿಸ್, ಹೆರಿಗೆ, ಥಲಸ್ಸೇಮಿಯಾ ಸೇರಿದಂತೆ ತುರ್ತು ಸಂದರ್ಭದಲ್ಲಿ ರಕ್ತದ ಅವಶ್ಯಕತೆ ತುಂಬಾ ಇದೆ. ಆದರೆ ಕೋವಿಡ್ ೧೯ ವೈರಸ್ ಹಾವಳಿಯಿಂದಾಗಿ ಕೆಲವೆಡೆ ಜನರು ಸಹ ಹೆದರಿಕೆಯಿಂದ ರಕ್ತ ಕೊಡಲು ಮುಂದೆ ಬರುತ್ತಿಲ್ಲ ಎಂಬ ಮಾತು ಕೂಡ ಕೇಳಿಬರುತ್ತಿದೆ. ಇದರಿಂದ ಮುಂಬರುವ ದಿನಗಳಲ್ಲಿ ರಕ್ತದ ಕೊರತೆ ಮತ್ತಷ್ಟು ಕಾಡುತ್ತದೆ ಎಂಬುವುದು ಬ್ಲಡ್ ಬ್ಯಾಂಕ್ ವೈದ್ಯರ ಆತಂಕ. ಈ ಬಗ್ಗೆ ರಾಜ್ಯ ಸರಕಾರಕ್ಕೆ ಪತ್ರ ಬರೆದಿರುವ ರಾಷ್ಟ್ರೀಯ ರಕ್ತಪೂರಣ ಪರಿಷತ್ (ಎನ್‌ಬಿಟಿಸಿ) ರಕ್ತದಾನದಿಂದ ಕೊರೋನಾ ವೈರಸ್ ಹರಡಿದ ಪುರಾವೆ ಇಲ್ಲವೆಂದು ಉಲ್ಲೇಖ ಮಾಡಿದೆ. ಜನರೇ ಮುಂದೇ ಬಂದು ಆಸ್ಪತ್ರೆ ಅಥವಾ ಬ್ಲಡ್ ಬ್ಯಾಂಕ್‌ಗಳಲ್ಲಿ ರಕ್ತ ಕೊಡವುದರಿಂದ ಸಮಸ್ಯೆ ಗಂಭೀರವಾಗುವುದನ್ನು ತಪ್ಪಿಸಬಹುದು. ಈ ಬಗ್ಗೆ ಕೋವಿಡ್ ೧೯ ವೈರಸ್ ಜತೆಗೆ ಜನರಲ್ಲಿ ರಕ್ತದಾನದ ಬಗ್ಗೆಯೂ ಸರ್ಕಾರ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಬೇಕಾಗಿದೆ.
ಭದ್ರತೆ ಅಡ್ಡಿ…:
ಕಳೆದ ನಾಲ್ಕು ತಿಂಗಳ ಲೌಕ್‌ಡೌನ್ ಸಂದರ್ಭದಲ್ಲಿ ಅಪಘಾತ, ರೋಗಿಗಳ ಪ್ರಮಾಣ ಇಳಿಕೆಯಾಗಿತ್ತು, ಕ್ಲಿಷ್ಟ ಶಸ್ತ್ರಚಿಕಿತ್ಸೆ ಮುಂದೂಡಿಕೆ ಹಾಗೂ ಹೊರಜಿಲ್ಲೆಯಿಂದ ರೋಗಿಗಳು ಬರದಿರುವುದರಿಂದ ಶೇ.೩೦ರಷ್ಟು ರಕ್ತದ ಬೇಡಿಕೆ ಆಸ್ಪತ್ರೆಗಳಲ್ಲಿ ಕಡಿಮೆಯಾಗಿತ್ತು. ಆದರೆ ಲಾಕ್‌ಡೌನ್ ತೆರವಾದ ಬಳಿಕ ಈ ಪ್ರಕರಣಗಳು ಹೆಚ್ಚಳವಾಗಿರುವುದರಿಂದ ಮತ್ತು ಸಾಂಕ್ರಾಮಿಕ ಕಾಯಿಲೆ ಹಾವಳಿಯಿಂದ ರಕ್ತದ ಪ್ಲೇಟ್‌ಲೆಟ್ ಬೇಡಿಕೆ ಒಮ್ಮಿಂದೊಮ್ಮೆಲೆ ಹೆಚ್ಚಳವಾಯಿತು ಎನ್ನಲಾಗುತ್ತಿದೆ. ಅಗತ್ಯ ತುರ್ತು ರಕ್ತದ ಅವಶ್ಯಕತೆಯನ್ನು ಮನಗಂಡು ತಾಲೂಕಿನಲ್ಲಿರುವ ನಾನಾ ಧಾರ್ಮಿಕ ಹಾಗೂ ಸಾಮಾಜಿಕ ಸಂಘ ಸಂಸ್ಥೆಗಳ ಸದಸ್ಯರು ರಕ್ತದಾನ ಮಾಡಲು ಮುಂದೆ ಬಂದಿರುವುದು ಅಭಿನಂದನೀಯ. ದಾನಿಗಳು ಆಸ್ಪತ್ರೆಗೆ ಬರುವ ಸಂದರ್ಭದಲ್ಲಿ ಕೆಲವು ಕಡೆ ಲಾಕ್‌ಡೌನ್ ಭದ್ರತೆ ತೊಂದರೆಯಾಗಿವೆ.
ತಾಲೂಕಿನಲ್ಲಿ ತುರ್ತು ರಕ್ತದ ಪೂರೈಕೆಗೆ ಸ್ಪಂದನೆ:
ದಿನದಿಂದ ದಿನಕ್ಕೆ ರಕ್ತದ ಬೇಡಿಕೆ ಹೆಚ್ಚಿತ್ತಿರುವ ಹಿನ್ನಲೆಯಲ್ಲಿ ತಾಲೂಕಿನಾದ್ಯಂತ ಇರುವ ನೂರಾರು ರಕ್ತದಾನಿಗಳು ತಕ್ಷಣವೇ ಸ್ಪಂದಿಸುತ್ತಿದ್ದಾರೆ. ಕರೆ ಅಥವಾ ವ್ಯಾಟ್ಸಾಪ್, ಫೇಸ್‌ಬುಕ್ ಗ್ರೊಪ್ ಮುಖೇನ ಕೂಡ ರಕ್ತದ ಅವಶ್ಯಕತೆ ಜತೆಗೆ ವಿವರಗಳನ್ನು ನಮೂದಿಸಿದರೆ ತಕ್ಷಣ ತಾಲೂಕಿನ ವಿವಿಧ ಆಸ್ಪತ್ರೆಗಳಿಗೆ ರಕ್ತದ ಪೂರೈಕೆ ಮಾಡುವ ಕಾರ್ಯ ನಡೆಯುತ್ತಿದೆ. ಡೆಂಗ್ಯೂದಿಂದ ಈಗಾಗಲೇ ಹಲವೆಡೆ ರಕ್ತದ ಅವಶ್ಯಕತೆಯನ್ನು ಮನಗಂಡು ನಾನಾ ಸಂಘ ಸಂಸ್ಥೆಗಳು ನಿರಂತರ ಸೇವೆಯಲ್ಲಿ ತೊಡಗಿಸಿಕೊಂಡಿದೆ.

ತುರ್ತು ಸಂದರ್ಭದಲ್ಲಿ ರಕ್ತದ ಅಗತ್ಯವಿದ್ದಲ್ಲಿ ಮತ್ತು ರಕ್ತದಾನ ಮಾಡಲು ಇಚ್ಛಿಸುವವರು ಪುತ್ತೂರಿನ ಬ್ಲಡ್ ಬ್ಯಾಂಕ್‌ನ ದೂರವಾಣಿ ಸಂಖ್ಯೆ 08251&234242, 9449733642ನ್ನು ಸಂಪರ್ಕಿಸಬಹುದಾಗಿದೆ.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.