HomePage_Banner
HomePage_Banner
HomePage_Banner

ಪೌರಕಾರ್ಮಿಕ ಚಾಲಕನಿಗೆ ಕೊರೋನಾ -ಕಸ ಸಂಗ್ರಹಕರಲ್ಲಿ ಭಯದ ವಾತಾವರಣ

Puttur_Advt_NewsUnder_1
Puttur_Advt_NewsUnder_1
  • ಊರಿಗೆ ಹೊರಟ ಪೌರಕಾರ್ಮಿಕರನ್ನು ನಿಲ್ಲಿಸಿ ಧೈರ್ಯ ತುಂಬಿದ ಶಾಸಕ ಸಂಜೀವ ಮಠಂದೂರು

ಪುತ್ತೂರು: ಪೌರಕಾರ್ಮಿಕರೊಬ್ಬರಿಗೆ ಕೊರೋನಾ ದೃಢಪಟ್ಟ ಬೆನ್ನಲ್ಲೆ ಪೌರ ಕಾರ್ಮಿಕರಲ್ಲಿ ಭಯದ ವಾತಾವರಣ ಉಂಟಾಗಿ ಊರಿಗೆ ಹೊರಡುವ ಸಿದ್ಧತೆ ನಡೆಸುತ್ತಿದ್ದಂತೆ ಶಾಸಕ ಸಂಜೀವ ಮಠಂದೂರು ಅವರು ಪೌರಕಾರ್ಮಿಕರನ್ನು ನಿಲ್ಲಿಸಿ ಕೆಲಸದಲ್ಲಿ ಯಾವುದೇ ಚ್ಯುತಿಯಾಗದ ಮತ್ತು ನಿಮ್ಮ ಆರೋಗ್ಯದಲ್ಲಿ ಯಾವುದೇ ತೊಂದರೆ ಆಗದ ಹಾಗೆ ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬುವ ಕಾರ್ಯವನ್ನು ಜೂ.30ರಂದು ಬೆಳ್ಳಂಬೆಳಗೆ ಶಾಸಕ ಸಂಜೀವ ಮಠಂದೂರು ಅವರು ಮಾಡಿದ್ದಾರೆ.

ನಗರಸಭೆ ಹೊರಗುತ್ತಿಗೆ ಪೌರಕಾರ್ಮಿಕ ಕಸ ಸಂಗ್ರಹದ ಲಾರಿ ಚಾಲಕನಿಗೆ ಜೂ.29ರಂದು ಕೊರೋನಾ ದೃಢಪಟ್ಟ ಕುರಿತು ವರದಿ ಬಂದಿದ್ದರಿಂದ ಜೂ.30ರಂದು ಕಸ ಸಂಗ್ರಹದ ಸುಮಾರು 41 ಮಂದಿ ಹೊರಗುತ್ತಿಗೆ ಪೌರಕಾರ್ಮಿಕರಲ್ಲಿ ಭಯದ ವಾತಾವರಣ ಉಂಟಾಗಿತ್ತು. ಇದನ್ನು ಮನಗಂಡ ಶಾಸಕರು ಬೆಳ್ಳಂಬೆಳಗೆ ನಗರಸಭೆ ಕಚೇರಿ ಆವರಣಕ್ಕೆ ಬಂದು ಎಲ್ಲಾ ಪೌರಕಾರ್ಮಿಕರಿಗೆ ಕೊರೋನಾ ವಿರುದ್ಧದ ಹೋರಾಟ ಮತ್ತು ಮುನ್ನೆಚ್ಚರಿಕೆ ಕುರಿತು ಧೈರ್ಯ ತುಂಬಿದರು. ರೋಗ ಉಲ್ಬಣ ಆಗುವ ಸನ್ನಿವೇಶವನ್ನು ನಾವು ತೆಡೆಗಟ್ಟಬೇಕು. ನಾವು ಜಾಗೃತರಾಗಬೇಕು. ಪ್ರಮುಖವಾಗಿ ನಗರದಲ್ಲಿ ಕೆಲಸ ಮಾಡುವಾಗ ನಮ್ಮ ಜಾಗೃತೆ ನಾವು ಮಾಡಬೇಕು. ಎಚ್ಚರ ತಪ್ಪಿದರೆ ಮತ್ತೆ ಏನು ಮಾಡಲು ಆಗುವುದಿಲ್ಲ. ಖಾಯಿಲೆ ಇವತು ನಾಳೆಗೆ ಮುಗಿಯವುದಿಲ್ಲ. ಸರಿಯಾದ ಔಷಧಿ ಕಂಡುಹಿಡಿಯವ ತನಕ ಖಾಯಿಲೆಯಿಂದ ಮುಕ್ತಿ ಇಲ್ಲ. ಹಾಗೆಂದು ಮನೆಗೆ ಬೀಗ ಹಾಕಿ ಕುತ್ತುಕೊಳ್ಳಲು ಆಗುವುದಿಲ್ಲ. ಸಹಜ ಜೀವನಕ್ಕೆ ತೊಡಗಿಸಿಕೊಳ್ಳಬೇಕಾಗುತ್ತದೆ. ಇನ್ನು ಒಂದಷ್ಟು ಸಮಯ ಲಾಕ್‌ಡೌನ್ ಆದರೆ ಆರ್ಥಿಕ ಶಕ್ತಿಗೆ ಹೊಡೆತ ಬೀಳಬಹುದು. ನಾವು ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಅಷ್ಟೆ ಎಂದು ಹೇಳಿದರು.

ನಿರ್ಭೀತಿಯಿಂದ ಕೆಲಸ ಮಾಡಿ, ಮುನ್ನೆಚ್ಚರಿಕೆ ಕೈಗೊಳ್ಳಿ:
ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ನಗರಸಭೆಯ ಪೌರಕಾರ್ಮಿಕರು ಕೆಲಸ ಮಾಡಿದಾಗ ಜನರು ನೆಮ್ಮದಿಯಿಂದ ಇರಬಹುದು. ಜನರ ಆರೋಗ್ಯ ಕೂಡಾ ಒಳ್ಳೆಯದಿರಬಹುದು. ಆದರೆ ಇಂತಹ ಮಳೆಗಾಲದಲ್ಲಿ ಒಂದು ದಿನ ನೀವು ಲಾಕ್‌ಡೌನ್ ಮಾಡಿದರೆ ನಮ್ಮ ಪರಿಸ್ಥಿತಿ ಏನಾಗಬಹುದು ಎಂದು ನಿವೇ ಆಲೋಚಿಸಿ. ಬಹುಶಃ ಸರಕಾರ ಲಾಕ್‌ಡೌನ್ ಮಾಡಿದಾಗಲೂ ನಿಮಗೆ ಲಾಕ್‌ಡೌನ್ ಇಲ್ಲ. ನೀವು 364 ದಿನವೂ ಕೆಲಸ ಮಾಡಿದ್ದೀರಿ. ಇಂತಹ ಸಂದರ್ಭಲ್ಲಿ ನಿಮ್ಮ ಆರೋಗ್ಯ ಹಿತವನ್ನು ನೋಡುವ ಜವಾಬ್ದಾರಿ ನಮ್ಮದು. ಮಹಾಲಿಂಗೇಶ್ವರನ ಅನುಗ್ರಹದಿಂದ ಕೊರೋನಾ ಯಾರಿಗೂ ಬರುವುದು ಬೇಡ. ಈಗಾಗಲೇ ಪುತ್ತೂರಿಗೆ ಬಂದ ಕೇಸ್‌ಗಳಲ್ಲಿ ಬಹುತೇಕ ಮತ್ತೆ ನೆಗೆಟಿವ್ ವರದಿ ಬಂದಿದೆ. ಜೊತೆಗೆ ಪುತ್ತೂರಿನಲ್ಲಿ ಕೊರೋನಾದಿಂದ ಯಾರೂ ಮೃತಪಟ್ಟಿಲ್ಲ. ಯಾವುದೆ ವ್ಯಕ್ತಿ 14 ದಿನಗಳ ಹೆಚ್ಚು ಪೊಸೀಟಿವ್ ಕೇಸ್‌ನಲ್ಲಿ ಆಸ್ಪತ್ರೆಯಲ್ಲಿ ಯಾರೂ ಇರಲಿಲ್ಲ. ಹಾಗಾಗಿ ಯಾವುದೇ ರೀತಿಯ ಭಯ ಪಡುವ ಅಗತ್ಯವಿಲ್ಲ ಎಂದು ಹೇಳಿದರು.

ನಿಮ್ಮ ಭದ್ರತೆಗೆ ಎಲ್ಲಾ ಸಲಕರಣೆ ನೀಡುತ್ತೇವೆ:
ಪೌರಾಯುಕ್ತೆ ರೂಪಾ ಶೆಟ್ಟಿಯವರು ಮಾತನಾಡಿ ಕೆಲಸವಿಲ್ಲದಿದ್ದರೆ ಜೀವನ ಸಾಗಿಸುವುದು ಕಷ್ಟ. ಆದರೆ ಕೊರೋನಾ ಭಯ ಎಂದು ಕೆಲಸಕ್ಕೆ ಹೋಗದೆ ಇರುವುದು ಸರಿಯಲ್ಲ. ನಿಮಗೆ ಏನೆ ಸಮಸ್ಯೆ ಬಂದರೂ ಅದರ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳುತ್ತೇವೆ. ಇಲ್ಲಿ ಯಾವುದೇ ಭಯ ಬೇಡ. ನಿಮ್ಮ ಭದ್ರತೆಗೆಗಾಗಿ ಇನ್ನಷ್ಟು ಸಲಕರಣೆಗಳನ್ನು ನಿಮಗೆ ನೀಡಲಾಗುವುದು. ಸಲಕರಣೆ ಅಳವಡಿಸಿಕೊಳ್ಳದೆ ಕೆಲಸ ಮಾಡಬೇಡಿ ಎಂದರು. ನಗರಸಭೆ ಪರಿಸರ ಅಭಿಯಂತರ ಗುರುಪ್ರಸಾದ್ ಶೆಟ್ಟಿ, ಹಿರಿಯ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ ಮತ್ತು ಶ್ವೇತಾ ಕಿರಣ್, ನಗರಸಭೆ ಪೌರಕಾರ್ಮಿಕರ ಮೇಸ್ತ್ರಿ ಐತ್ತಪ್ಪ ಮತ್ತು ನಗರಸಭೆ ಪೌರಕಾರ್ಮಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಜನರು ನಮ್ಮನ್ನು ದೂರ ಮಾಡುತ್ತಿದ್ದಾರೆ –ಪೌರ ಕಾರ್ಮಿಕರ ಅಳಲು
ಕೊರೋನಾ ಆರಂಭದ ಸಂದರ್ಭದಲ್ಲಿ ಸಮಸ್ಯೆ ಇರಲಿಲ್ಲ. ಆದರೆ ಇತ್ತೀಚೆಗೆ ಜನರು ನಮ್ಮನ್ನು ದೂರ ಮಾಡುತ್ತಿದ್ದಾರೆ. ಹಿಂದೆ ಕಸವನ್ನು ಕೈಯಲ್ಲಿ ಕೊಡುತ್ತಿದ್ದವರು ಇವತ್ತು ಕಸವನ್ನು ಎಸೆಯುತ್ತಿದ್ದಾರೆ. ಆಟೋ ರಿಕ್ಷಾ ನಿಲ್ಲಿಸುವುದಿಲ್ಲ. ಪೌರ ಕಾರ್ಮಿಕರು ಎಂದು ತಿಳಿದ ತಕ್ಷಣ ಅರ್ಧದಲ್ಲೇ ಇಳಿಸುತ್ತಾರೆ. ಪತಿ ಪೌರಕಾರ್ಮಿಕನಾಗಿ ಮನೆ ಮನೆ ಕಸ ಸಂಗ್ರಹ ಕೆಲಸದಲ್ಲಿರುವುದು ಎಂದು ಮಾಹಿತಿ ತಿಳಿದ ತಕ್ಷಣ ಗಾರ್ಬಲ್ ಕೆಲಸದಲ್ಲಿದ್ದ ನನ್ನ ಪತ್ನಿಯನ್ನು ಕೆಲಸಕ್ಕೆ ಬರುವುದು ಬೇಡ ಎಂದು ಹೇಳಿದ್ದಾರೆ. ಇಂತಹ ಹಲವು ವಿಚಾರಗಳ ಕುರಿತು ಪೌರ ಕಾರ್ಮಿಕರು ಶಾಸಕರ ಗಮನಕ್ಕೆ ತಂದರು. ಶಾಸಕರು ಇವೆಲ್ಲಕ್ಕೆ ಪರಿಹಾರ ನಾನೇ ಮಾಡುತ್ತೇನೆ. ಆಟೋ ರಿಕ್ಷಾ ಚಾಲಕರ ಸಂಘಟನೆಯವಲ್ಲಿ ಮಾತುಕತೆ ನಡೆಸುತ್ತೇನೆ ಎಂದು ಭರವಸೆ ನೀಡಿದರು.

ಊರಿಗೆ ಹೋಗಿ ನಿರುದ್ಯೊಗಿಗಳಾಗಬೇಡಿ:
ನಿರ್ಭಿಯಿತಿಯಿಂದ ಕೆಲಸ ಮಾಡಿ. ಜನರು ನಿಮ್ಮಮೊಂದಿಗಿದ್ದಾರೆ. ಪುತ್ತೂರಿನ ಜನರು ನಿಮ್ಮ ಮೇಲೆ ಪ್ರೀತಿ ತೋರಿಸುತ್ತಾರೆ. ಇಂತಹ ಸಂದರ್ಭದಲ್ಲಿ ನೀವು ಮತ್ತೆ ಮತ್ತೆ ಊರಿಗೆ ಹೋಗಿ ಅಲ್ಲಿ ಅಲ್ಲಿಯೂ ಉದ್ಯೋಗ ಇಲ್ಲದೆ ಅಲ್ಲಿಯೂ ಸಮಸ್ಯೆ ಎದುರಿಸುವ ಸಂಗತಿ ಆಗಬಾರದು – ಸಂಜೀವ ಮಠಂದೂರು, ಶಾಸಕರು ಪುತ್ತೂರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.