HomePage_Banner
HomePage_Banner
HomePage_Banner

ಕೋವಿಡ್ -19 ಸಂದರ್ಭದಲ್ಲಿ ರಾಜಕೀಯ ಬೇಳೆ ಬೇಯುವುದಿಲ್ಲ | ಕಾಂಗ್ರೆಸ್ ಪ್ರತಿಭಟನೆಗೆ ಪುತ್ತೂರು ಶಾಸಕ ಸಂಜೀವ ಮಠಂದೂರು ತಿರುಗೇಟು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊವೀಡ್ -19 ನಲ್ಲೂ ಆರ್ಥಿಕ ದೃಢತೆಯನ್ನು ಕಾಪಾಡುವ ಕೆಲಸ ದೇಶ ಮಾಡಿದೆ. ಇದಕ್ಕೆ ಕಾರಣ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಮತ್ತು ಹಣಕಾಸು ಸಚಿವರಾದ ನಿರ್ಮಲ ಸೀತಾರಾಮ್ ಎಂದು ಎಲ್ಲರಿಗೂ ತಿಳಿದ ವಿಚಾರ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್‌ನ ರಾಜಕೀಯ ಬೇಳೆ ಬೇಯುವುದಿಲ್ಲ ಎಂದು ಶಾಸಕ ಸಂಜೀವ ಮಠಂದೂರು ಅವರು ಕಾಂಗ್ರೆಸ್ ಪ್ರತಿಭಟನೆಗೆ ತಿರುಗೇಟು ನೀಡಿದ್ದಾರೆ.

ಕೋವಿಡ್-19 ಸಂದರ್ಭಲ್ಲೂ ಅಭಿವೃದ್ಧಿ ಕಾರ್ಯಗಳೂ ಎಲ್ಲಾ ಕಡೆಯಿಂದ ನಿರಂತರವಾಗಿ ನಡೆಯುತ್ತಿದೆ. ಎಲ್ಲಿಯೂ ಅಭಿವೃದ್ಧಿ ಕಾರ್ಯ ಕುಂಠಿತವಾಗಿಲ್ಲ. ಅದರ ಎಡೆಯಲ್ಲಿ ಕಾಂಗ್ರೆಸ್ ಪಕ್ಷ ರಾಜಕೀಯವಾಗಿ ಕೊರೋನಾ ಸಂದರ್ಭದಲ್ಲಿ ಜನರ ಮನಸ್ಸನ್ನು ಡೈವರ್ಟ್ ಮಾಡಲು ಬೆಲೆ ಏರಿಕೆ ನೆಪದಲ್ಲಿ ಪ್ರತಿಭಟನೆ ಮಾಡುತ್ತಿದೆ. ಇದೇ ಕಾಂಗ್ರೆಸ್ ಈ ದೇಶದಲ್ಲಿ ಹೆಚ್ಚಿನ ಅವಧಿಯಲ್ಲಿ ಆಡಳಿತ ಮಾಡಿ ಭ್ರಷ್ಟಾಚಾರ ಮತ್ತು ಹಣದುಬ್ಬರಕ್ಕೆ ಎಷ್ಟು ಕೊಡುಗೆಯನ್ನು ಕೊಟ್ಟಿದೆ ಎಂದು ಜನ ಈಗಾಗಲೇ ತೀರ್ಮಾನ ಮಾಡಿದ್ದಾರೆ. 2012ರ ಮಧ್ಯೆ ದೇಶದಲ್ಲಿ ತೈಲ ಬೆಲೆ ರೂ.80 ದಾಟಿತ್ತು. ಆಗ ಯಾವುದೇ ಕೊರೋನಾ, ಸಮಸ್ಯೆ ಇರಲಿಲ್ಲ. ಇವತ್ತು ದೇಶದಲ್ಲಿ ಒಂದಷ್ಟು ಕೋವಿಡ್ -19 ಸಮಸ್ಯೆ ಎದುರಾದಾಗ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೇ ಧಾರಣೆ ಏರಿಇಳಿತವಾದಾಗ ಒಂದಷ್ಟು ವ್ಯತ್ಯಾಸ ಆಗಿದೆ. ಬಹುಶಃ ಇದು ತಾತ್ಕಾಲಿಕ ಮುಂದಿನ ದಿನಗಳಲ್ಲಿ ಈ ದರ ನೂರಕ್ಕೆ ನೂರು ಕಡಿಮೆ ಆಗಲಿದೆ ಎಂದು ಹೇಳಿದ ಶಾಸಕ ಸಂಜೀವ ಮಠಂದೂರು ಅವರು ಇಂತಹ ಸಂದರ್ಭವನ್ನು ರಾಜಕೀಯ ಉದ್ದೇಶಕ್ಕೆ ಕಾಂಗ್ರೆಸ್ ಬಳಕೆ ಮಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ ಕೂಡಾ ಈ ದೇಶವನ್ನು ಆಳಿತ ಮಾಡಿದ ರಾಜಕೀಯ ಪಾರ್ಟಿ. ಸಂಕಷ್ಟದ ಸಂದರ್ಭದಲ್ಲಿ ಜನರ ಮನಸ್ಸನ್ನು ಬೇರೆಡೆಗೆ ಡೈವರ್ಟ್ ಮಾಡುವ ಸಂಗತಿಯನ್ನು ಕಾಂಗ್ರೆಸ್ ಮಾಡಬಾರದು ಮತ್ತು ಇಂತಹ ಸಂದರ್ಭದಲ್ಲಿ ರಾಜಕೀಯ ಬೇಳೆ ಬೇಯುವುದಿಲ್ಲ ಎಂದು ಅವರು ತಿಳಿದು ಕೊಳ್ಳಬೇಕೆಂದು ಹೇಳಿದರು.

ರಮನಾಥ ರೈ ಅವರೇ ನಿಮ್ಮ ಆರೋಗ್ಯ ಕಾಪಾಡಿ ಮನೆಯಲ್ಲೇ ಸುರಕ್ಷಿತವಾಗಿರಿ:
ರಮಾನಾಥ ರೈ ಅವರು ಹಲವು ವರ್ಷ ಮಂತ್ರಿಗಳಾದವರು.  ಇತರರಿಗೆ ಬುದ್ದಿವಾದ ಹೇಳುವವರು. ಅದಲ್ಲದೆ ಬಹಳಷ್ಟು ಅನುಭವಿಗಳು. ಅವರಿಗೆ ಸಾಮಾನ್ಯ ಜ್ಞಾನ ಇದೆ ಎಂದು ನಾನು ಭಾವಿಸುತ್ತೇನೆ. ಕೋವಿಡ್ -19 ಇರುವಾಗ ದೇಶದ ಆರ್ಥಿಕ ಸ್ಥಿತಿ ಹೇಗಿದೆ. ಜನಜೀವನ ಹೇಗಿದೆ ಎಂದು ಅವರಿಗೆ ಗೊತ್ತಿದೆ. ಅವರು ಆಡಳಿತ ಮಾಡುವಾಗ ಜನ ಜೀವನ ಹೇಗಿತ್ತು ಎಂದೂ ಅವರಿಗೆ ಗೊತ್ತಿದೆ. ಆದರೆ ಅವರು ಈಗಿನ ಪರಿಸ್ತಿಯನ್ನು ಯಾವ ರೀತಿ ಉಪಯೋಗ ಮಾಡಿಕೊಳ್ಳುತ್ತಾರೆ ಎಂಬುದು ಸಾಮಾನ್ಯ ಜನರಿಗೂ ಅರ್ಥವಾಗಿದೆ. ಹಾಗಾಗಿ ಅವರು ಬೀದಿಗಿಳಿದು ಪ್ರತಿಭಟನೆ ಮಾಡಿದರೆ ಇಲ್ಲಿನ ಜನರು ದಡ್ಡರಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಜನರು ಬುದ್ದಿವಂತರು. ತಾನು ಶಾಶ್ವತವಾಗಿ ಶಾಸಕ, ಮಂತ್ರಿಯಾಗಬೇಕೆಂಬ ಉದ್ದೇಶಕ್ಕೆ ಈ ರೀತಿಯ ಪ್ರತಿಭಟನೆ ಮಾಡುತ್ತಾರೆ ಎಂದು ಜನರು ಭಾವಿಸಿಕೊಂಡು ತಮ್ಮಷ್ಟಕ್ಕೆ ತಾವಿರುತ್ತಾರೆ. ಹಾಗಾಗಿ ರಮಾನಾಥ ರೈ ಅವರೇ ಇಂತಹ ಕ್ಷುಲಕ ವಿಚಾರವನ್ನು ಮುಂದಿಟ್ಟುಕೊಂಡು ಬೀದಿಗಿಳಿಯದೆ ನೀಮ್ಮ ಆರೋಗ್ಯ ಕಾಪಾಡಿ, ಮತ್ತು ಮನೆಯಲ್ಲೇ ಸುರಕ್ಷಿತವಾಗಿರಿ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.