Home_Page_Advt
Home_Page_Advt
Home_Page_Advt

ನಗರಸಭಾ ಪೌರಾಯುಕ್ತೆ ರೂಪ ಶೆಟ್ಟಿ ಸಹಿತ ರಾಜ್ಯದ 298 ಮಂದಿ ಮೂಲ‌ ಹುದ್ದೆಗೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪೌರಾಡಳಿತ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ರಾಜ್ಯದ ಕ್ಲಾಸ್ ಬಿ ವರ್ಗದ ಅಧಿಕಾರಿಗಳಾದ 298 ಮಂದಿಯನ್ನು ಮೂಲ ಹುದ್ದೆಗೆ ವರ್ಗಾವಣೆಗೊಳಿಸಿ ಸರಕಾರ ಆದೇಶಿಸಿದೆ. ಇದರಲ್ಲಿ ಪುತ್ತೂರು ನಗರಸಭೆಯ ಪೌರಾಯುಕ್ತೆ ರೂಪ ಟಿ ಶೆಟ್ಟಿಯವರೂ ಸೇರಿದ್ದಾರೆ.

ಬಡತನ ನಿರ್ಮೂಲನ ಕೋಶದ ಸಮುದಾಯದ ಸಂಘಟನಾಧಿಕಾರಿ ಹುದ್ದೆಯಲ್ಲಿರುವವರು ಮುಖ್ಯಾಧಿಕಾರಿ, ಪೌರಾಯುಕ್ತರಂತಹ ಹುದ್ದೆಯಲ್ಲಿರುವುದರಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಸರಕಾರ ಈ ತೀರ್ಮಾನ‌ ಕೈಗೊಂಡಿದೆ.ರಾಜ್ಯದ ಹಲವು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮುಖ್ಯಾಧಿಕಾರಿ ಇಲ್ಲವೇ ಪೌರಾಯುಕ್ತ ಹುದ್ದೆಯಲ್ಲಿ‌ರುವವರು ಅವರ ಯಾವ ಮೂಲ‌ ಹುದ್ದೆ ಇದೆಯೋ ಅಲ್ಲಿಯೇ ಕಾರ್ಯ ನಿರ್ವಹಿಸುವಂತೆ ಆದೇಶಿಲಾಗಿದೆ. ಈ ಹಿನ್ನೆಲೆಯಲ್ಲಿ ರೂಪ ಶೆಟ್ಟಿಯವರೂ ತಮ್ಮ ಮೂಲ‌ ಹುದ್ದೆಗೆ ವರ್ಗಾವಣೆಗೊಳ್ಳಲಿದ್ದಾರೆ. ಇಡೀ ರಾಜ್ಯಕ್ಕೇ ಅನ್ವಯ ಆಗುವ ಆದೇಶದಂತೆ ಈ ವರ್ಗಾವಣೆ ನಡೆಯುತ್ತದೆ ಹೊರತು ಪುತ್ತೂರಿಗೆ ಮಾತ್ರ ಸೀಮಿತವಾದ ಆದೇಶ ಇದಲ್ಲ, ಹಿಂಬಡ್ತಿಯೂ ಅಲ್ಲ ಎಂದು‌ ಇಲಾಖಾ ಮೂಲಗಳು ಸ್ಪಷ್ಟಪಡಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.