Home_Page_Advt
Home_Page_Advt
Home_Page_Advt

ನಗರಸಭೆ ವ್ಯಾಪ್ತಿಯಲ್ಲಿ ಏರಿಕೆಯಾದ ಕೊರೋನಾ: ಮುರ, ಚಿಕ್ಕಪುತ್ತೂರು ನಿವಾಸಿಗಳಿಬ್ಬರಿಗೆ ಕೊರೋನಾ ದೃಢ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನಗರಸಭಾ ವ್ಯಾಪ್ತಿಯಲ್ಲಿ ದಿನೇ ದಿನೆ ಕೊರೋನಾ ಪ್ರಕರಣ ಏರಿಕೆ ಕಾಣುತ್ತಿದ್ದು, ಕಬಕ ಗ್ರಾಮದ ಮುರ ನಿವಾಸಿ 26ವರ್ಷದ ಯುವಕ ಮತ್ತು ಚಿಕ್ಕಪುತ್ತೂರು ನಿವಾಸಿ 25 ವರ್ಷದ ಯುವಕರಿಬ್ಬರಲ್ಲಿ ಜೂ.30ರಂದು ಕೊರೋನಾ ದೃಢಪಟ್ಟ ಬಗ್ಗೆ ವರದಿಯಾಗಿದೆ.

ಮೈಸೂರಿನಲ್ಲಿ ತರಕಾರಿ, ಹಣ್ಣು ಹಂಪಲು ಮಳಿಗೆಯಲ್ಲಿ ಉದ್ಯೋಗಿಯಾಗಿದ್ದ ಕಬಕ ಗ್ರಾಮದ ಮುರದ ಯುವಕ ಲಾಕ್‌ಡೌನ್ ಸಂದರ್ಭದಲ್ಲಿ ಊರಿಗೆ ಬಂದಿದ್ದರು. ಈ ನಡುವೆ ಜೂ.27ರಂದು ಆರೋಗ್ಯದ ಸಮಸ್ಯೆಗೆ ಸಂಬಂಧಿಸಿ ಯುವಕನ ಗಂಟಲು ದ್ರವ ಮಾದರಿಯನ್ನು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಸಂಗ್ರಹಿಸಿ ಮಂಗಳೂರು ಕೋವಿಡ್ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಇದೀಗ ವರದಿಯಲ್ಲಿ ಆತನ ಕೊವಿಡ್ ಪರೀಕ್ಷೆಯಲ್ಲಿ ಕೊರೋನಾ ದೃಢಪಟ್ಟಿದೆ. ಅದೇ ರೀತಿ ಗೂಡ್ಸ್ ಲಾರಿಯೊಂದರಲ್ಲಿ ಚಾಲಕನಾಗಿರುವ ಚಿಕ್ಕಪುತ್ತೂರು ನಿವಾಸಿಯ 25 ವರ್ಷದ ಯುವಕನಿಗೂ ಕೊರೋನಾ ದೃಢಪಟ್ಟಿದ್ದು, ಆತನ ಗಂಟಲು ದ್ರವ ಮಾದರಿಯನ್ನು ಜೂ.27ರಂದು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಸಂಗ್ರಹಿಸಿ ಮಂಗಳೂರಿಗೆ ಕಳುಹಿಸಲಾಗಿತ್ತು, ಇದೀಗ ಆತನ ವರದಿಯಲ್ಲೂ ಕೊರೋನಾ ದೃಢಪಟ್ಟಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.