Home_Page_Advt
Home_Page_Advt
Home_Page_Advt

ಐವರ್ನಾಡು ನಿವಾಸಿಗೆ ಕೊರೋನಾ ಪಾಸಿಟಿವ್ | ಕೌಡಿಚ್ಚಾರ್ ಸಿಆರ್‌ಸಿಯಲ್ಲಿರುವ ಸಂಬಂಧಿಕರಿಗೆ ಕ್ವಾರಂಟೈನ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಐವರ್ನಾಡು ನಿವಾಸಿಯೊಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು ಕೆಲ ದಿನಗಳ ಹಿಂದೆ ಅವರು ಬಂದು ತಂಗಿದ್ದ ಕೌಡಿಚ್ಚಾರ್ ಸಿಆರ್‌ಸಿ ಕಾಲನಿಯಲ್ಲಿರುವ ಸಂಬಂಧಿಕರ ಮನೆಯಲ್ಲಿರುವವರನ್ನು ಕ್ವಾರಂಟೈನ್‌ಗೆ ಸೂಚಿಸಲಾಗಿದೆ.

ಸುಳ್ಯ ಐವರ್ನಾಡು ನಿವಾಸಿಯೊಬ್ಬರು ಕಳೆದ ಕೆಲವು ದಿನಗಳಿಂದ ಕೌಡಿಚ್ಚಾರ್ ಸಿಆರ್‌ಸಿ ಕಾಲನಿಯಲ್ಲಿರುವ ಸಂಬಂಧಿಕರ ಮನೆಯಲ್ಲಿ ತಂಗಿದ್ದರು.ಮೂರು ದಿನಗಳ ಹಿಂದೆಯಷ್ಟೆ ಅವರು ಐವರ್ನಾಡಿಗೆ ಹೋಗಿದ್ದು ಅಲ್ಲಿ ಜ್ವರ,ಶೀತ ಬಾಧೆ ಕಾಣಿಸಿಕೊಂಡಿದ್ದ ಅವರನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.ಅಲ್ಲಿ ಅವರ ಗಂಟಲು ದ್ರವದ ಮಾದರಿಯನ್ನು ಕೋವಿಡ್ ಪರೀಕ್ಷೆಗೆ ಕಳುಹಿಸಲಾಗಿತ್ತು.ಅವರಿಗೆ ಕೊರೋನಾ ಸೋಂಕು ಇರುವುದು ವರದಿಯಲ್ಲಿ ದೃಢಪಟ್ಟಿತ್ತು.ಅವರನ್ನು ಮಂಗಳೂರು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಂಬಂಧಿಕರು ಕ್ವಾರಂಟೈನ್‌ಗೆ:
ಸೋಂಕಿತ ವ್ಯಕ್ತಿ ಬಂದು ತಂಗಿದ್ದ ಕೌಡಿಚ್ಚಾರ್ ಸಿಆರ್‌ಸಿ ಮನೆಯಲ್ಲಿರುವ ಅವರ ನಾಲ್ಕು ಮಂದಿ ಸಂಬಂಧಿಕರನ್ನೂ ಇದೀಗ ಕ್ವಾರಂಟೈನ್‌ಗೆ ಸೂಚಿಸಲಾಗಿದೆ.ಅರಿಯಡ್ಕ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ, ಆಶಾ ಕಾರ್ಯಕರ್ತೆ ಮತ್ತು ಆರೋಗ್ಯ ಸಹಾಯಕಿ ಸಿಆರ್‌ಸಿ ಮನೆಗೆ ಭೇಟಿ ನೀಡಿ ವಿಚಾರಿಸಿ ಮನೆಯಲ್ಲಿರುವ ನಾಲ್ಕು ಮಂದಿಯನ್ನೂ ಕ್ವಾರಂಟೈನ್‌ಗೆ ಸೂಚಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.