HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಉದ್ಯೋಗದ ಭರವಸೆಯನ್ನು ಕಳೆದುಕೊಳ್ಳುತ್ತಿರುವ ವಿದ್ಯುತ್ ಮಾಪಕ ಓದುಗರು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪ್ರಸ್ತುತ ಮಾನವನ ಮೂಲಭೂತ ಸೌಕರ್ಯಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಕತ್ತಲನ್ನು ಬೆಳಗಿಸಲು, ತಂಪು, ಬಿಸಿ, ಯಂತ್ರ ಹಾಗೂ ಅಂಗೈ ಅಗಲದ ಮೊಬೈಲ್ ಉಪಯೋಗದ ವರೆಗೆ ವಿದ್ಯುತ್ ಎಂಬುದು ಶ್ರೀಮಂತರಿಂದ ಕಡುಬಡತನದ ವ್ಯಕ್ತಿಗಳ ವರೆಗಿನ ಮನೆಮಾತಾಗಿದೆ. ಕರ್ನಾಟಕದಲ್ಲಿ ವಿದ್ಯುತ್ ಇಲಾಖೆಯಿಂದ ನಿಗಮಗಳಾಗಿ ಪರಿವರ್ತನೆಗೊಂಡು ದಶಕದಿಂದ ಹೆಚ್ಚು ವರ್ಷಗಳಾಗಿವೆ. ಈ ಇಲಾಖೆಯಲ್ಲಿ ಸರಕಾರಿ ನೌಕರರು, ಅರೆಸರಕಾರಿ ನೌಕರರು, ಖಾಸಗಿ ನೌಕರರು, ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ಎಂಬ ರೀತಿಗಳಲ್ಲಿ ವೃತ್ತಿ ಸೇವೆಯಲ್ಲಿದ್ದಾರೆ. ಇಲಾಖೆಗೆ ಆದಾಯ ತರುವ ಬೆನ್ನೆಲುಬು, ಆಧಾರ ಸ್ತಂಭಗಳೆಂದು ಕರೆಯಲ್ಪಡುವ ಮಾಪಕ ಓದುಗರ (meter readers) ಜೀವನದಲ್ಲಿ ಉದ್ಯೋಗ ಕಳೆದುಕೊಳ್ಳುವ ದಿನಗಳು ಹತ್ತಿರವಾಗಿವೆ.

ಕಾರಣ: ಮನೆ, ಅಂಗಡಿ ಮುಗ್ಗಟ್ಟು, ಶಿಕ್ಷಣ ಸಂಸ್ಥೆಗಳು, ಉದ್ಯಮ ಘಟಕಗಳು ಇತ್ಯಾದಿಗಳ ವಿದ್ಯುತ್ ಮಾಪಕಗಳ ಬಿಲ್ ವಿತರಿಸುವಲ್ಲಿ ಕಳೆದ ಹದಿನೈದು ವರ್ಷಗಳಿಗಿಂತ ಹೆಚ್ಚು ಅವಧಿಯಲ್ಲಿ ಜೀವನೋಪಾಯಕ್ಕಾಗಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದಾರೆ. PF ESI ಸೌಲಭ್ಯಗಳಿದ್ದು ಟೆಂಡರ್ ಪರಿಷ್ಕರಣೆ ಸಂದರ್ಭದಲ್ಲಿ ಕೇಂದ್ರ ಸರಕಾರದ ಕನಿಷ್ಟ ವೇತನ ಜಾರಿಯಲ್ಲಿ ಇದ್ದರೂ ನೌಕರನಿಗೆ ಕನಸಿನ ಮಾತಾಗಿದೆ. ಆಧುನೀಕರಣ, ಖಾಸಗೀಕರಣಗಳ ಭರಾಟೆಯಲ್ಲಿ ಗೃಹೋಪಯೋಗಿ ವಸ್ತುಗಳು ಬೆಲೆ ಏರಿಕೆಯಾಗುತ್ತಿದ್ದಂತೆ, ವಿದ್ಯುತ್ ಇಲಾಖೆಯಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಾ ಇದ್ದರೂ, ಮಳೆ ಬಿಸಿಲೆನ್ನದೆ ವರ್ಷದ ಹನ್ನೆರಡು ತಿಂಗಳಲ್ಲಿ ಬಿಲ್ ವಿತರಿಸುವ ಕಾಯಕ ನಿರಂತರವಾಗಿ ಸಾಗುತ್ತಿದೆ. ಆದರೆ ಮಾಪಕ ಓದುಗನ ವೇತನ ಪ್ರಮಾಣ ಟೆಂಡರ್ ಬದಲಾವಣೆ ಸಂದರ್ಭದಲ್ಲಿ ಕಡಿಮೆಯಾಗುತ್ತಾ ಬೇರೆ ಉದ್ಯೋಗಕ್ಕೂ ಅರ್ಹರಲ್ಲದ ಅವಸ್ಥೆಯಲ್ಲಿ ಜೀವನ ಅತಂತ್ರವಾಗಿದೆ.

ಕಳೆದ ಕೆಲವು ವರ್ಷಗಳಿಂದ ದೇಶದ ಕಾರ್ಮಿಕ ಸಂಘಟನೆ CITU ಇದರ ನೇತೃತ್ವದಲ್ಲಿ ಪ್ರತಿಭಟನೆ, ಹೋರಾಟಗಳನ್ನು ನಡೆಸುತ್ತಿದ್ದರೂ ಇಲಾಖೆಯಾಗಲಿ, ಆಡಳಿತ ನಡೆಸುವ ಸರಕಾರವಾಗಲಿ ಮಾಪಕ ಓದುಗರ ಸಂಕಷ್ಟಗಳಿಗೆ ಗಮನ ಹರಿಸುವಲ್ಲಿ ಹಿಂಜರಿಯುತ್ತಲೇ ಇದೆ. ಮಾಪಕ ಓದುಗರು ಗುತ್ತಿಗೆ ಕಾರ್ಮಿಕರಾಗಿದ್ದು ಬಳಸಿ ಬಿಸಾಡುವ ನೀತಿಯನ್ನು ಇಲಾಖೆ ಪಾಲಿಸುತ್ತಿದೆ. ಮಾಪಕ ಓದುಗರು ಇಲಾಖೆಗೆ ಚ್ಯುತಿ ಬಾರದಂತೆ ಸಮಯ ಮಿತಿಯಲ್ಲಿ ಕೆಲಸ ನಿರ್ವಹಿಸಬೇಕು; ಆದರೆ ಕಾಯಕ ಸಮಯದಲ್ಲುಂಟಾಗುವ ಸಂಕಷ್ಟಗಳಿಗೆ ಇಲಾಖೆ ಹೊಣೆಯಾಗದೆ ಬೇಜವಾಬ್ದಾರಿ ವರ್ತಿಸುತ್ತಿದೆ. ಈ ನಿಟ್ಟಿನಲ್ಲಿ CITU ಸಹಕಾರ ನೀಡುತ್ತಿದ್ದು ಮಾಪಕ ಓದುಗರನ್ನು ಸಂಘಟಿಸುವಲ್ಲಿ ಮತ್ತು ಕೆಲವು ಸೌಲಭ್ಯಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿದೆ.

ಸಂಘಟನೆಯ ಉದ್ದೇಶದಂತೆ ಜುಲೈ ತಿಂಗಳ ಮೂರನೇ ತಾರೀಖಿನಂದು ರಾಜ್ಯವ್ಯಾಪಿಯಾಗಿ ಕೆಲವು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ. ಇದರ ಪೂರ್ವಭಾವಿಯಾಗಿ ಜೂನ್ 29ರಂದು ಪುತ್ತೂರು, ಕುಂಬ್ರ, ಸುಳ್ಯ, ಕಡಬ, ಸುಬ್ರಹ್ಮಣ್ಯ ಹಾಗೂ ಬಂಟ್ವಾಳದ ಮಾಪಕ ಓದುಗರ ಸಮಾವೇಶ ನಡೆಯಿತು. ಸಮಾವೇಶದಲ್ಲಿ ಕರ್ನಾಟಕ ರಾಜ್ಯ ವಿದ್ಯುತ್ ಕಾರ್ಮಿಕರ ಫೆಡರೇಶನ್ ಇದರ ಪ್ರಧಾನ ಕಾರ್ಯದರ್ಶಿ ಎಸ್. ಎಂ. ಶಿವಕುಮಾರ್, ವಕೀಲರು ಭಾಗವಹಿಸಿ ಕಾರ್ಮಿಕರ ಸಮಸ್ಯೆಗಳ ಬಗೆಹರಿಸುವಲ್ಲಿ ಪ್ರೋತ್ಸಾಹದ ಮಾತುಗಳನ್ನಾಡಿದರು. ಮೆಸ್ಕಾಂ ವಲಯದ ಸಂಘಟನಾ ಕಾರ್ಯದರ್ಶಿ ಸಮಿತ್ ಸುಳ್ಯ ಕಾರ್ಯಚಟುವಟಿಕೆ ಮತ್ತು ಮುಂದೆ ನಡೆಯುವ ಹೋರಾಟದ ಮಾಹಿತಿಗಳನ್ನು ನೀಡಿದರು. ಸಮಾವೇಶವನ್ನು ಮಾಪಕ ಓದುಗ ಮೋಹನ ನಾಯ್ಕ ಸ್ವಾಗತಿಸಿ ವಂದನೆಗೈದರು. ಪುತ್ತೂರು ಉಪವಿಭಾಗ ಮಾಪಕ ಓದುಗರ ಮೇಲ್ವಿಚಾರಕರಾದ ಅಕ್ಷಯ ಶೆಟ್ಟಿ, ಕುಂಬ್ರ ಉಪವಿಭಾಗದ ಕೇಶವ ನಾಯ್ಕ, ಕಡಬ ಉಪವಿಭಾಗದ ಉದಯಾನಂದ, ಸುಳ್ಯ ಉಪವಿಭಾಗದ ಸಮಿತ್ ಇವರ ಸಹಕಾರಗಳೊಂದಿಗೆ  ಮಾಪಕ ಓದುಗರೂ ಹಾಗೂ ಸುಬ್ರಹ್ಮಣ್ಯ, ಬಂಟ್ವಾಳ, ಮಂಗಳೂರು ಉಪವಿಭಾಗಗಳ ಮಾಪಗ ಓದುಗ ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸಿದ್ದರು.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.