HomePage_Banner
HomePage_Banner
HomePage_Banner

ಉದ್ಯೋಗಖಾತ್ರಿಯಲ್ಲಿ ಹಿರೇಬಂಡಾಡಿ ಗ್ರಾ.ಪಂ. ನಂ.1-ಶೌಕತ್ ಅಲಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ವಾರ್ಷಿಕವಾಗಿ ಕಡಿಮೆ ಸ್ವಂತ ನಿಧಿ ಹೊಂದಿರುವ ಗ್ರಾ.ಪಂ. ಹಿರೇಬಂಡಾಡಿಯಾದರೂ, ೨೦೧೫-೨೦ರ ಆಡಳಿತಾವಧಿಯಲ್ಲಿ ಹಿರೇಬಂಡಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಲವು ಕೋಟಿಗಳ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಇಲ್ಲಿ ಸಮಗ್ರವಾಗಿ ಬಳಸಿಕೊಳ್ಳಲಾಗಿದ್ದು, ಕೊಡಗು, ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯನ್ನು ಸಮಗ್ರವಾಗಿ ಬಳಸಿಕೊಂಡ ಪಟ್ಟಿಯಲ್ಲಿ ಹಿರೇಬಂಡಾಡಿ ಗ್ರಾ.ಪಂ. ಮೊದಲ ಸ್ಥಾನದಲ್ಲಿದೆ ಎಂದು ಗ್ರಾ.ಪಂ. ಅಧ್ಯಕ್ಷ ಹಮ್ಮಬ್ಬ ಶೌಕತ್ ಅಲಿ ತಿಳಿಸಿದರು.

ತಮ್ಮ ಆಡಳಿತದ ಅವಧಿಯಲ್ಲಿ ಗ್ರಾಮದಲ್ಲಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಹಿರೇಬಂಡಾಡಿ ಗ್ರಾ.ಪಂ. ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ೨೦೧೫ರಲ್ಲಿ ನಾವು ಅಧಿಕಾರಕ್ಕೆ ಬಂದಾಗ ಈ ಗ್ರಾ.ಪಂ.ನಲ್ಲಿ ವಾರ್ಷಿಕವಾಗಿ ೧.೨೧ ಲಕ್ಷದಷ್ಟು ಮಾತ್ರ ಸ್ವಂತ ನಿಧಿ ಸಂಗ್ರಹವಾಗುತ್ತಿತ್ತು. ಈಗ ೧೦ ಲಕ್ಷದಷ್ಟು ಸ್ವಂತ ನಿಧಿ ಸಂಗ್ರಹವಾಗುತ್ತಿದೆ. ಸ್ವಂತ ನಿಧಿ ಹೆಚ್ಚಳ ಮಾಡಬೇಕೆಂದು ನಾವು ಮನೆ ತೆರಿಗೆ ಜಾಸ್ತಿ ಮಾಡಿ ಜನತೆಗೆ ಭಾರಕೊಟ್ಟಿಲ್ಲ. ಬದಲಾಗಿ ದಂಡನಾ ಶುಲ್ಕ, ಅಭಿವೃದ್ಧಿ ಶುಲ್ಕಗಳನ್ನು ಹೆಚ್ಚಳಗೊಳಿಸಿದ್ದೇವೆ. ೨೦೧೫-೧೬ರಲ್ಲಿ ಗ್ರಾಮದಲ್ಲಿ ಉದ್ಯೋಗ ಖಾತ್ರಿಯಲ್ಲಿ ೨೧.೮೦ ಲಕ್ಷ ರೂ.ನ ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದು, ಇತರೆ ಅನುದಾನದಿಂದ ೨೩.೧೬ ಲಕ್ಷ ರೂ.ನ ಅಭಿವೃದ್ಧಿ ಕೆಲಸಗಳು ನಡೆದಿವೆ. ೨೦೧೬-೧೭ರಲ್ಲಿ ೯೧.೮೩ ಲಕ್ಷ ರೂ. ಉದ್ಯೋಗ ಖಾತ್ರಿಯ ಕೆಲಸಗಳು ಸೇರಿ ಒಂದು ಕೋಟಿಯ ಇಪ್ಪತ್ತೊಂಬತ್ತು ಲಕ್ಷದ ಎಂಭತ್ತೆರಡು ಸಾವಿರದ ಕಾಮಗಾರಿಗಳು ನಡೆದಿವೆ. ೨೦೧೭-೧೮ರಲ್ಲಿ ೭೮.೬೫ ಲಕ್ಷ ರೂ.ನ ಉದ್ಯೋಗ ಖಾತ್ರಿಯ ಕೆಲಸಗಳು ಸೇರಿ ಒಟ್ಟು ಒಂದು ಕೋಟಿಯ ಹನ್ನೊಂದು ಲಕ್ಷದ ತೊಂಭತ್ತಮೂರು ಸಾವಿರದ ಅಭಿವೃದ್ಧಿ ಕೆಲಸಗಳು ನಡೆದಿವೆ. ೨೦೧೮- ೧೯ರಲ್ಲಿ ಉದ್ಯೋಗ ಖಾತ್ರಿಯಡಿ ೬೯.೮೩ ಲಕ್ಷದ ಕೆಲಸಗಳು ನಡೆದಿದ್ದು, ಇತರ ಅನುದಾನದಿಂದ ೫೦.೪೫ ಲಕ್ಷ ರೂ.ನ ಅಭಿವೃದ್ಧಿ ಕೆಲಸಗಳು ನಡೆದಿವೆ. ೨೦೧೯- ೨೦ರ ಮಾರ್ಚ್ ಅಂತ್ಯದವರೆಗೆ ಒಂದು ಕೋಟಿಯ ಇಪ್ಪತ್ತೊಂದು ಲಕ್ಷದ ಐದು ಸಾವಿರದ ಅಭಿವೃದ್ಧಿ ಕಾಮಗಾರಿಗಳು ಉದ್ಯೋಗ ಖಾತ್ರಿಯಲ್ಲಿ ನಡೆದಿದ್ದು, ಇತರ ಅನುದಾನದಿಂದ ೪೬ ಲಕ್ಷದ ಅಭಿವೃದ್ಧಿ ಕಾಮಗಾರಿಗಳು ನಡೆದಿದೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಉಪಾಧ್ಯಕ್ಷೆ ಉಷಾ ಲಕ್ಷ್ಮೀಶ, ಸದಸ್ಯರಾದ ಪ್ರಕಾಶ್ ರೈ ಬೆಳ್ಳಿಪ್ಪಾಡಿ, ಚಂದ್ರಾವತಿ ನೆಹರೂತೋಟ, ಸದಾನಂದ ಶೆಟ್ಟಿ, ನಿತಿನ್ ತಾರಿತ್ತಡಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.