Home_Page_Advt
Home_Page_Advt
Home_Page_Advt

ಎಪಿಎಂಸಿ ಯಾರ್ಡ್‌ನಲ್ಲಿ ತರಕಾರಿ ಸಂತೆ ಖಾಯಂ | ಮೂಲಭೂತ ಸೌಕರ್ಯ ಒದಗಿಸಲು ಸದಸ್ಯರ ಒಮ್ಮತ: ಎಪಿಎಂಸಿ ಸಾಮಾನ್ಯ ಸಭೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊವೀಡ್ -19 ಸಂದರ್ಭದಲ್ಲಿ ಕಿಲ್ಲೆ ಮೈದಾನದಲ್ಲಿನ ಸೋಮವಾರ ಸಂತೆ ಮಾರುಕಟ್ಟೆಯನ್ನು ಎಪಿಎಂಸಿಗೆ ಸ್ಥಳಾಂತರಿಸಲಾಗಿದ್ದು, ಇದೀಗ ಖಾಯಂ ಆಗಿ ತರಕಾರಿ ಸಂತೆ ಮುಂದಿನ ಪ್ರತಿ ಸೋಮವಾರ ಎಪಿಎಂಸಿ ಯಾರ್ಡ್‌ನಲ್ಲೇ ನಡೆಸುವ ನಿಟ್ಟಿನಲ್ಲಿ ಎಂದು ಸಹಾಯಕ ಕಮೀಷನರ್ ಎಪಿಎಂಸಿಗೆ ಆದೇಶ ನೀಡಿದ್ದು, ಸಂತೆಗಾಗಿ ಮೂಲಭೂತ ಸೌಕರ್ಯ ಒದಗಿಸಲು ಎಪಿಎಂಸಿ ನಿರ್ದೇಶಕರು ಒಮ್ಮತ ಸೂಚಿಸಿದ್ದಾರೆ.

ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಅವರ ಅಧ್ಯಕ್ಷತೆಯಲ್ಲಿ ಜೂ.30ರಂದು ನಡೆದ ಎಪಿಎಂಸಿ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಈಗಾಗಲೇ ಸಹಾಯಕ ಕಮೀಷನರ್ ಅವರು ಮುಂದಿನ ದಿನಗಳಲ್ಲಿ ಎಪಿಎಂಸಿಯಲ್ಲೇ ಸಂತೆ ನಡೆಸಬೇಕಾಗಿದೆ. ಇದಕ್ಕೆ ಎಪಿಎಂಸಿಯೂ ಬದ್ಧರಾಗಿರಬಹುದೇ ಎಂಬ ಸಂದೇಶ ಕಳುಹಿಸಿದ್ದಾರೆ. ಸಂತೆ ಪೂರ್ಣ ರೀತಿಯಲ್ಲಿ ನಡೆಯಬೇಕಾದರೆ ಅದಕ್ಕಾಗಿ ಮೂಲಭೂತ ಸೌಕರ್ಯ ಒದಗಿಸಬೇಕು. ಈ ನಿಟ್ಟಿನಲ್ಲಿ ನಿರ್ದೇಶಕರ ಅಭಿಪ್ರಾಯವನ್ನು ಅಧ್ಯಕ್ಷ ದಿನೇಶ್ ಮೆದು ಅವರು ಪ್ರಶ್ನಿಸಿದರು. ನಿರ್ದೇಶಕ ಬಾಲಕೃಷ್ಣ ಬಾಣಜಾಲು ಅವರು ಮಾತನಾಡಿ ಎಪಿಂಸಿ ಯಾರ್ಡ್‌ನಲ್ಲಿ ಸಂತೆ ಮಾಡುವುದಾದರೆ ಅದಕ್ಕೆ ಮೂಲಭೂತ ಸೌಕರ್ಯ ನಾವು ಮಾಡಿಕೊಡಬೇಕು. ಜೊತೆಗೆ ಎಪಿಎಂಸಿಗೆ ಪ್ರತಿ ಸೋಮವಾರ ಸರಕಾರಿ ಬಸ್ ಓಡಾಟ ನಡೆಸಬೇಕು ಈ ಕುರಿತು ಸಹಾಯಕ ಕಮೀಷನರ್‌ಗೆ ಮನವಿ ಮಾಡಬೇಕೆಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ನಿರ್ದೇಶಕರೆಲ್ಲರೂ ಧ್ವನಿಗೂಡಿಸಿದರು.

ಎಪಿಎಂಸಿ ರೈಲ್ವೇ ಅಂಡರ್‌ಪಾಸ್ ಕೊನೆಯ ಹಂತ:
ಬಹು ಬೇಡಿಕೆಯ ಎಪಿಎಂಸಿ ರೈಲ್ವೇ ಅಂಡರ್‌ಪಾಸ್ ಯೋಜನೆಯು ರೈಲ್ವೇ ಇಲಾಖೆಯ ಹುಬ್ಬಳ್ಳಿ ಡಿವಿಜನ್ ಬೋರ್ಡ್ ಮೀಟಿಂಗ್‌ನ ಕೊನೆಯ ಅಂತದಲ್ಲಿದೆ. ಈಗಾಗಲೇ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಶಾಸಕ ಸಂಜೀವ ಮಠಂದೂರು ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ ಬಿ.ಯಸ್ ಯಡಿಯೂರಪ್ಪ ಅವರಲ್ಲಿ ಚರ್ಚಿಸಿ ಅವರ ಅಂಕಿತದ ಬಳಿಕ ಸರಕಾರದ ಮೂಲಸೌಕರ್ಯ ಇಲಾಖೆ ಮತ್ತು ಎಪಿಎಂಸಿ ಅನುದಾನದ ಕುರಿತು ರೈಲ್ವೇ ಹುಬ್ಬಳ್ಳಿ ಡಿವಿಜನ್‌ನಲ್ಲಿ ನಿದೇರ್ಶಕರ ಸಭೆಯಲ್ಲಿ ಒಟ್ಟು ಎಪಿಎಂಸಿ ರೈಲ್ವೇ ಅಂಡರ್‌ಪಾಸ್‌ನ ಅಂತಿಮ ಹಂತಕ್ಕೆ ಬರಲಿದೆ ಎಂದು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ತಿಳಿಸಿದರು.

ಸೆಸ್ ತೆಗೆದರೆ ನಷ್ಟವೋ, ಲಾಭವೋ ?
ಎಪಿಎಂಸಿ ಮಾರುಕಟ್ಟೆಯಲ್ಲಿ ಹಾಕಲಾಗುತ್ತಿರುವ ಶೇ.೧.೫ ರಷ್ಟು ಸೆಸ್‌ನ್ನು ತೆಗೆದು ಹಾಕುವ ಕುರಿತು ಈಗಾಗಲೇ ಚರ್ಚೆ ನಡೆಯುತ್ತಿದೆ. ಮುಂದೆ ಸೆಸ್ ದರವನ್ನು ಇಳಿಸಿ ೦.೫೦ ಪೈಸೆಗೆ ನಿಲ್ಲಿಸಲಾಗುವುದು ಎಂಬ ಕೇಂದ್ರದ ಮಾಹಿತಿ ಇದೆ. ಆದರೆ ರಾಜ್ಯ ಸರಕಾರ ಈ ಕುರಿತು ಯಾವುದೇ ನಿರ್ಣಯ ಕೈಗೊಂಡಿಲ್ಲ. ಈ ಕುರಿತು ನಿರ್ದೇಶಕ ಅಬ್ದುಲ್ ಶಕೂರ್ ಅವರು ಮಾತನಾಡಿ ಸೆಸ್ ತೆಗೆದರೆ ವರ್ತಕರಿಗೂ, ಕೃಷಿಕರಿಗೂ ಲಾಭವಿದೆ ಎಂದರು. ಆದರೆ ವಾಸ್ತವ ವಿಚಾರದಲ್ಲಿ ಸೆಸ್ ತೆಗೆದರೆ ಎಪಿಎಂಸಿ ಆದಾಯ ಇರುವುದಿಲ್ಲ. ಇದರಿಂದ ಆವರ್ತ ನಿಧಿ ಸಿಗುವುದಿಲ್ಲ. ಅನುದಾನದ ಕೊರತೆ ಆಗುತ್ತದೆ ಎಂಬ ಕುರಿತು ಸದಸ್ಯರೊಳಗೆ ಚರ್ಚೆಗಳು ನಡೆದವು. ಎಪಿಎಂಸಿ ಉಪಾಧ್ಯಕ್ಷ ಮಂಜುನಾಥ ಎನ್.ಎಸ್, ನಿರ್ದೇಶಕರಾದ ಬೂಡಿಯಾರ್ ರಾಧಾಕೃಷ್ಣ ರೈ, ಬಾಲಕೃಷ್ಣ ಬಾಣಜಾಲು, ಕಾರ್ತಿಕ್ ರೈ ಬೆಳ್ಳಿಪ್ಪಾಡಿ, ಪುಲಸ್ತ್ಯಾ ರೈ, ತೀರ್ಥಾನಂದ ದುಗ್ಗಳ, ತ್ರಿವೇಣಿ ಪೆರ್‍ವೋಡಿ, ಕುಶಾಲಪ್ಪ ಗೌಡ, ಮೆದಪ್ಪ, ಅಬ್ದುಲ್ ಶಕೂರ್, ಕೃಷ್ಣಕುಮಾರ್ ರೈ ಮತ್ತು ನಾಮನಿರ್ದೇಶಿತ ಸದಸ್ಯರಾದ ಮೋಹನಾಂಗಿ, ಬಾಲಕೃಷ್ಣ ಜೋಯಿಷ, ಬಾಬು ಬೊಮ್ಮನಗುಂಡಿ ಉಪಸ್ಥಿತರಿದ್ದರು. ಕಾರ್ಯದರ್ಶಿ ರಾಮಚಂದ್ರ ಸಾಮಾನ್ಯ ಸಭೆ ನಡಾವಳಿ ನಡೆಸಿದರು.

ಕೋವಿಡ್-೧೯ ನಡುವೆ ಹೆಚ್ಚು ಸಂಗ್ರಹಗೊಂಡ ತೆರಿಗೆ
ಕೋವಿಡ್ -೧೯ ಲಾಕ್ ಡೌನ್ ಸಂದರ್ಭದಲ್ಲಿ ಎಪ್ರಿಲ್ ತಿಂಗಳಲ್ಲಿ ಕೇವಲ ರೂ. ೩ಲಕ್ಷ ತೆರಿಗೆ ಸಂಗ್ರಹ ಆಗಿತ್ತು. ಆದರೆ ಲಾಕ್‌ಡೌನ್ ಸಡಿಲಿಕೆ ಬಳಿಕ ಮೇ ತಿಂಗಳಲ್ಲಿ ರೂ. ೭೫ಲಕ್ಷ ತೆರಿಗೆ ಸಂಗ್ರಹವಾಗಿತ್ತು. ಆದರೆ ಇದೀಗ ಜೂನ್ ತಿಂಗಳಲ್ಲಿ ಪ್ರಥಮ ಬಾರಿಗೆ ರೂ. ೧ ಕಾಲು ಕೋಟಿ ತೆರಿಗೆ ಸಂಗ್ರಹ ಆಗಿದೆ. ಇದಕ್ಕೆ ಮುಖ್ಯ ಕಾರಣ ದೇಶಕ್ಕೆ ಯಾವುದೆ ಕೃಷಿ ಉತ್ಪನ್ನ ಆಮದು ಆಗದಿರುವುದು. ಜೊತೆಗೆ ಎಪಿಎಂಸಿಯಲ್ಲಿ ಎಲ್ಲವೂ ಬಿಲ್ಲಿಂಗ್ ಆಗಿ ಹೋಗುವುದು. ಇವೆಲ್ಲದರ ಪರಿಣಾಮ ಎಪಿಎಂಸಿಯಲ್ಲಿ ತೆರಿಗೆ ಸಂಗ್ರಹ ಹೆಚ್ಚಳವಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.