Home_Page_Advt
Home_Page_Advt
Home_Page_Advt

ಗ್ರಾ.ಪಂಗಳಿಗೆ ಕೊರೋನಾ ಸವಾಲು ಎದುರಿಸುವ ರಕ್ಷಾ ಕಿಟ್ ವಿತರಣೆ

Puttur_Advt_NewsUnder_1
Puttur_Advt_NewsUnder_1
  • ಕಾರ್ಯಪಡೆಯ ಜವಾಬ್ದಾರಿ ಹೆಚ್ಚಿದೆ – ಸಂಜೀವ ಮಠಂದೂರು

ಪುತ್ತೂರು: ಕೋವಿಡ್-೧೯ ಭಯದ ವಾತಾವರಣ ನಿರ್ಮಾಣ ಮಾಡಿದೆ. ನನ್ನ ಆರೋಗ್ಯ ನಮ್ಮ ಪಂಚಾಯತ್ ಎಂದು ಪಂಚಾಯತ್ ಕಾರ್ಯಪಡೆಯ ಮೇಲೆ ಬಹಳಷ್ಟು ಜವಾಬ್ದಾರಿ ಇದೆ. ಮುಂದಿನ ದಿನ ಕನಿಷ್ಠ ೧೫ ದಿವಸಕ್ಕೆ ಕಾರ್ಯಪಡೆ ಸಭೆ ನಡೆಸಬೇಕೆಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಪುತ್ತೂರು, ಕಡಬ ಉಭಯ ತಾಲೂಕಿ ಗ್ರಾ.ಪಂ ಕಚೇರಿಗಳಿಗೆ ಕೊರೋನಾ ಸವಾಲು ಎದುರಿಸುವ ರಕ್ಷಾ ಕಿಟ್‌ಗಳನ್ನು ಜೂ. ೩೦ರಂದು ಅವರು ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ವಿತರಣೆ ಮಾಡಿ ಮಾತನಾಡಿದರು. ಕೋವಿಡ್ -೧೯ ಎದುರಿಸುವ ನಿಟ್ಟಿನಲ್ಲಿ ಮಾಸ್ಕ್ ಹಕಿ ಓಡಾಡಬೇಕೆಂದು ಸೂಚನೆ ಇದೆ. ಸಭೆ ಸಮಾರಂಭ ಆದಷ್ಟು ಕಡಿಮೆ ಮಾಡಬೇಕು. ಜಿಲ್ಲಾಡಳಿತ ನೀಡಿದ ಸೂಚನೆ ನಿಯಮಗಳನ್ನು ಪಾಲನೆ ಮಾಡಬೇಕು. ಇಂತಹ ಸಂದರ್ಭದಲ್ಲಿ ನಾವು ಎಷ್ಟು ಜನರಿಗೆ ಎಚ್ಚರಿಕೆ ಕೊಡುವ ಕೆಲಸ ಮಾಡಿದ್ದೇವೆ ಎಂಬುದನ್ನು ನಿವೇ ಒಮ್ಮೆ ಚಿಂತನೆ ಮಾಡಿ ಎಂದು ಗ್ರಾ.ಪಂ ಪಿಡಿಒಗಳನ್ನು ಉದ್ದೇಶಿಸಿ ಮಾತನಾಡಿದ ಶಾಸಕರು ಇವತ್ತು ಕೆಲವೊಂದು ನಿಯಮವನ್ನು ಪಾಲನೆ ಮಾಡದ ಹಿನ್ನೆಲೆಯಲ್ಲಿ ಕೊರೋನಾ ಪಂಚಾಯತ್ ವ್ಯಾಪ್ತಿಗೂ ತಲುಪಿದೆ. ನಮ್ಮ ಮೊಂಡು ಧೈರ್ಯದಿಂದಾಗಿನಾವು ಸೋಲುತ್ತಿದ್ದೇವೆ. ಇವತ್ತು ಅಂತಹ ಸವಾಲನ್ನು ಎದುರಿಸಲು ನಿಮಗೆ ರಕ್ಷಾ ಕಿಟ್‌ಗಳನ್ನು ವಿತರಣೆ ಮಾಡಲಾಗುತ್ತಿದೆ. ಮೊನ್ನೆ ತನಕ ಆಹಾರದ ಕಿಟ್ ವಿತರಣೆ ಮಾಡಲಾಗುತ್ತಿತ್ತು. ಆಗ ಆಹಾರದ ಸಂಕಷ್ಟ. ಇವತ್ತು ಆಹಾರಕ್ಕಿಂತಲೂ ರಕ್ಷಣೆಯ ಚಿಂತನೆ. ಹಾಗಾಗಿ ರಕ್ಷಾ ಕಿಟ್ ಕೊಡುವ ಕೆಲಸ ನಡೆಯುತ್ತಿದೆ ಎಂದರು.

ಕೊರೋನಾ ಪೀಡಿತರಿಗೆ ಕರುಣೆ ತೋರಿಸಿ:
ತಾಲೂಕಿನಲ್ಲಿ ನೆಮ್ಮದಿಯ ವಾತಾವರಣ ಇದೆ ಎಂದು ನಾವು ಭಾವಿಸುತ್ತಿದ್ದೆವೆ. ಆದರೆ ಕೊರೋನಾ ಬಂದಿರುವುದು ಗೊತ್ತಾಗುತ್ತಿಲ್ಲ. ಕೊರೋನಾ ಪಿಡೀತ ವ್ಯಕ್ತಿಯೊಂದಿಗೆ ಗೌರವ ಕರುಣೆ ತೋರಿಸುವ ಕೆಲಸ ಮಾಡಿ. ಕುಟುಂಬವನ್ನು ದೂರ ಮಾಡುವುದು ಬೇಡ. ಸಮಾಜ ಅವರಿಗೆ ಅನುಕಂಪ ತೋರಿಸಿ ಅವರ ಖಾಯಿಲೆ ದೂರ ಮಾಡುವ ಕೆಲಸ ಆಗಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಉದ್ಯೋಗ ಖಾತ್ರಿ ಮಾಹಿತಿ ಕರ ಪತ್ರ ಬಿಡುಗಡೆ:
ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಲು ಅನೇಕ ಅವಕಾಶವಿದೆ. ಈ ನಿಟ್ಟಿನಲ್ಲಿ ಅದರ ಮಾಹಿತಿ ಅನೇಕ ಮಂದಿಗೆ ತಿಳಿದಿಲ್ಲ. ಹಾಗಾಗಿ ಮಾಹಿತಿ ಕರ ಪತ್ರವನ್ನು ಶಾಸಕ ಸಂಜೀವ ಮಠಂದೂರು ಬಿಡುಗಡೆಗೊಳಿಸಿದರು.

ರೂ. ೧.೯೦ ಲಕ್ಷದ ಕಿಟ್ ವಿತರಣೆ:
ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಅವರು ಮಾತನಾಡಿ ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಗ್ರಾ.ಪಂ ಕಚೇರಿಯಲ್ಲಿ ಕಾರ್ಯಪಡೆ ಇದೆ. ಇಂತಹ ಸಂದರ್ಭದಲ್ಲಿ ಅವರಿಗೆ ಅವರ ರಕ್ಷಣೆಯ ಉದ್ದೇಶದಿಂದ ಸ್ವಚ್ಛ ಭಾರತ ಮಿಷನ್ ಯೋಜನೆಯಲ್ಲಿ ಗ್ರಾ.ಪಂಗಳಿಗೆ ರೂ. ೧.೯೦ ಲಕ್ಷದ ಮಾಸ್ಕ್, ಹ್ಯಾಂಡ್ ವಾಶ್ ವಾಟರ್, ಸೇಪ್ಟಿ ಗ್ಲೌಸ್, ಗಂ ಬೂಟ್, ಪಿಪಿಇ ಕಿಟ್ ವಿತರಣೆ ಮಾಡಲಾಗುತ್ತಿದೆ. ಮುಂದಿನ ದಿನ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಇಂಗುಗುಂಡಿ ಮಾಡುವ ಗುರಿ ಇದೆ. ಈ ಕುರಿತು ಪ್ರತಿ ಗ್ರಾ.ಪಂಗಳಲ್ಲಿ ಮಾಹಿತಿ ಕೊಡುವ ಕೆಲಸ ಆಗಬೇಕೆಂದು ಹೇಳಿದರು. ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಸದಸ್ಯರಾದ ಮುಕುಂದ, ಹರೀಶ್ ಬಿಜತ್ರೆ, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಮೀನಾಕ್ಷಿ ಮಂಜುನಾಥ್, ಎನ್.ಆರ್.ಇಜಿಯ ಪ್ರಭಾರ ಅಧಿಕಾರಿ ಶೈಲಜಾ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಗ್ರಾ.ಪಂ ಪಿಡಿಒಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.