Home_Page_Advt
Home_Page_Advt
Home_Page_Advt

ಲಯನ್ಸ್ ರಾಜ್ಯಪಾಲರಾಗಿ ಡಾ. ಗೀತಪ್ರಕಾಶ್ ಅಧಿಕಾರ ಸ್ವೀಕಾರ

Puttur_Advt_NewsUnder_1
Puttur_Advt_NewsUnder_1

ವಿಟ್ಲ: ದ.ಕ, ಹಾಸನ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳನ್ನೊಳಗೊಂಡ ಅಂತರಾಷ್ಟ್ರೀಯ ಲಯನ್ಸ್‌ನ ೩೧೭ ಡಿ ಜಿಲ್ಲೆಯ ೨೦೨೦-೨೧ನೇ ಸಾಲಿನ ರಾಜ್ಯಪಾಲರಾಗಿ ನೇಮಕಗೊಂಡ ಡಾ. ಗೀತಪ್ರಕಾಶ್‌ರವರ ಪದಗ್ರಹಣ ಜೂ.೩೦ರಂದು ಲಯನ್ಸ್‌ನ ಅಂತರಾಷ್ಟ್ರೀಯ ಅಧ್ಯಕ್ಷ ಡಾ. ಜಂಗ್ ಉಲ್ ಚೋಯಿ ಮೂಲಕ ನಡೆಯಿತು. ಲಯನ್ಸ್ ಕ್ಲಬ್‌ನಲ್ಲಿ ಕಳೆದ ೨೧ ವರ್ಷಗಳಿಂದ ನಾನಾ ಸ್ತರಗಳ ಹುದ್ದೆಗಳನ್ನು ಅಲಂಕರಿಸಿ, ನಿಭಾಯಿಸಿರುವ ವೈದ್ಯರಾದ ಡಾ. ಗೀತಪ್ರಕಾಶ್ ಜು.೧ ರಿಂದ ೨೦೨೧ ರ ಜೂನ್ ೩೦ ರ ತನಕ ಅವರು ರಾಜ್ಯಪಾಲರಾಗಿ ಹುದ್ದೆ ನಿರ್ವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ೨೦೨೦-೨೧ ನೇ ಸಾಲಿನ ಪ್ರಥಮ ಉಪ ರಾಜ್ಯಪಾಲರಾಗಿ ಬಂಟ್ವಾಳ ಲಯನ್ಸ್ ಕ್ಲಬ್ಬಿನ ವಸಂತ ಕುಮಾರ್ ಶೆಟ್ಟಿ ಆಯ್ಕೆಯಾದರು. ಸಕಲೇಶಪುರ ಲಯನ್ಸ್ ಕ್ಲಬ್ ಸಂಜೀತ್ ಶೆಟ್ಟಿ ಅವರನ್ನು ದ್ವಿತೀಯ ಉಪ ರಾಜ್ಯಪಾಲರಾಗಿ ಆಯ್ಕೆ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.