ಉಪ್ಪಿನಂಗಡಿ: ಇಲ್ಲಿನ ವ್ಯವಸಾಯಿಕ ಸೇವಾ ಸಹಕಾರಿ ಸಂಘದ ಉಪ ಪ್ರಧಾನ ವ್ಯವಸ್ಥಾಪಕಿಯಾಗಿದ್ದ ಶ್ರೀಮತಿ ಕ್ಲೇರಿ ವೇಗಸ್ರವರು ಬ್ಯಾಂಕ್ನ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿ ಜುಲೈ 1ರಿಂದ ಕರ್ತವ್ಯ ನಿರತರಾಗಿದ್ದಾರೆ.
ಬಿ.ಕಾಂ. ಪದವಿ ಪಡೆದು ಬಳಿಕ ಉನ್ನತ ಸಹಕಾರಿ ಬೇಂಕಿಂಗ್ ವ್ಯವಹಾರ ತರಬೇತಿ ಪಡೆದಿರುವ ಕ್ಲೇರಿ ವೇಗಸ್ರವರು ೧೯೮೭ರಲ್ಲಿ ಗುಮಾಸ್ತೆ ಹುದ್ದೆಗೆ ತಾತ್ಕಾಲಿಕವಾಗಿ ನೇಮಕಗೊಂಡು ಬಳಿಕ ೧೯೯೦ರಿಂದ ಖಾಯಂ ಆಗಿದ್ದು, ತದ ನಂತರ ಲೆಕ್ಕಾಧಿಕಾರಿಯಾಗಿ, ಉಪ ಪ್ರಧಾನ ವ್ಯವಸ್ಥಾಪಕರಾಗಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಜತ್ತಪ್ಪ ಗೌಡ ನಿವೃತ್ತಿ ಹೊಂದಿರುವುದರಿಂದಾಗಿ ತೆರವು ಆಗಿರುವ ಹುದ್ದೆಗೆ ನೇಮಕವಾಗಿರುತ್ತಾರೆ.