Home_Page_Advt
Home_Page_Advt
Home_Page_Advt

ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಬ್ಯಾಂಕ್ | ಸಿಇಓ. ಜತ್ತಪ್ಪ ಗೌಡ, ಪ್ರಧಾನ ವ್ಯವಸ್ಥಾಪಕಿ ಸಾವಿತ್ರಿ, ಸಹಾಯಕ ಶ್ರೀನಿವಾಸಗೆ ಬೀಳ್ಕೊಡುಗೆ

Puttur_Advt_NewsUnder_1
Puttur_Advt_NewsUnder_1
  • ಉತ್ತಮ ಸೇವಕರಾಗಿ ದುಡಿದು ಗ್ರಾಹಕರ ಪ್ರೀತಿಗೆ ಪಾತ್ರರಾಗಿದ್ದಾರೆ-ಮುಕುಂದ ಗೌಡ
  • ದಕ್ಷ, ಪ್ರಾಮಾಣಿಕತೆ ನಮ್ಮನ್ನು ಒಳಿತಿನ ಕಡೆಗೆ ಕೊಂಡೊಯ್ಯತ್ತದೆ-ಕೆ.ವಿ. ಪ್ರಸಾದ್

ಉಪ್ಪಿನಂಗಡಿ: ಇಲ್ಲಿನ ಸಹಕಾರಿ ವ್ಯವಸಾಯಿಕ ಸಂಘದಲ್ಲಿ ಕಳೆದ ೩೬ ವರ್ಷಗಳಿಂದ ವಿವಿಧ ಹುದ್ದೆಗಳ ಮೂಲಕ ಸೇವೆ ಸಲ್ಲಿಸಿ ಇದೀಗ ಮುಖ್ಯ  ಕಾರ್ಯನಿರ್ವಹಣಾಧಿಕಾರಿಯಾಗಿದ್ದು ಸೇವಾ ನಿವೃತ್ತಿ ಹೊಂದಿದ ಆರ್. ಜತ್ತಪ್ಪ ಗೌಡ ಮತ್ತು ೩೪ ವರ್ಚಗಳಿಂದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಇದೀಗ ಪ್ರಧಾನ ವ್ಯವಸ್ಥಾಪಕಿಯಾಗಿದ್ದು ಸೇವಾ ನಿವೃತ್ತಿ ಹೊಂದಿದ ಡಿ.ಕೆ. ಸಾವಿತ್ರಿ ಮತ್ತು ಸಹಾಯಕರಾಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಶ್ರೀನಿವಾಸ ಹೆಗ್ಡೆ ಇವರುಗಳಿಗೆ ಬೇಂಕ್ ವತಿಯಿಂದ ಬೀಳ್ಕೊಡುಗೆ ಸಮಾರಂಭ ಜು. ೩೦ರಂದು ಜರಗಿತು.

ಸಮಾರಂಭದಲ್ಲಿ ನಿವೃತ್ತಿ ಹೊಂದಿದ ಸಿಬ್ಬಂದಿಗಳಿಗೆ ಬೇಂಕ್ ಆಡಳಿತ ಮಂಡಳಿ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಹಾಗೂ ಸಿಬ್ಬಂದಿ ವರ್ಗ ಹಾಗೂ ಬೇಂಕ್ ಸದಸ್ಯರುಗಳು, ಸಾರ್ವಜನಿಕರು ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.

ಸಮಾರಂಭವನ್ನು ಬಜತ್ತೂರು ತಾಲ್ಲೂಕು ಪಂಚಾಯಿತಿ ಸದಸ್ಯ ಮುಕುಂದ ಗೌಡ ಬಜತ್ತೂರು ಉದ್ಘಾಟಿಸಿ ಮಾತನಾಡಿ ನಿವೃತ್ತಿ ಹೊಂದಿದ ಸಿಬ್ಬಂದಿಗಳು ಉತ್ತಮ ಸೇವಕರಾಗಿ ದುಡಿದು ಬೇಂಕ್ ಗ್ರಾಹಕರ ಪ್ರೀತಿಗೆ ಪಾತ್ರರಾಗಿದ್ದಾರೆ. ಅವರ ಸೇವೆ ಇತರ ಹೊಸ ಸಿಬ್ಬಂದಿಗಳಿಗೆ ಮಾದರಿ ಆಗಲಿ ಎಂದ ಅವರು ಬೀಳ್ಕೊಡುಗೆ ಸ್ವೀಕರಿಸಿ, ಗೌರವಯುತವಾಗಿ  ಇಲ್ಲಿಂದ ಹೋಗುವ ನಿಮ್ಮ ನಿವೃತ್ತಿ ಜೀವನ ಒಳಿತಾಗಲಿ ಎಂದು ಹಾರೈಸಿದರು.

ಉಪ್ಪಿನಂಗಡಿ ಸಹಕಾರಿ ಬೇಂಕ್ ಅಧ್ಯಕ್ಷ ಕೆ.ವಿ. ಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿ ನಾವುಗಳು ಮಾಡುವ ಕೆಲಸದಲ್ಲಿ ದಕ್ಷತೆ ಮತ್ತು ಪ್ರಾಮಾಣಿಕತೆ ಇದ್ದರೆ ಅದು ನಮ್ಮನ್ನು ಒಳಿತಿನ ಕಡೆಗೆ ಕೊಂಡೊಯ್ಯತ್ತದೆ, ಈ ನಿಟ್ಟಿನಲ್ಲಿ ನಮ್ಮ ಸಿಬ್ಬಂದಿಗಳು ಅಭಿನಂದನಾರ್ಹರು ಎಂದ ಅವರು ನಿವೃತ್ತಿ ಹೊಂದಿದ ಸಿಬ್ಬಂದಿಗಳ ಮುಂದಿನ ನಿವೃತ್ತ ಜೀವನ  ಯಶಸ್ಸಿನತ್ತ ಸಾಗಲಿ ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯೆ ಶ್ರೀಮತಿ ಸುಜಾತಕೃಷ್ಣ ಆಚಾರ್ಯ, ಸಹಕಾರಿ ಬೇಂಕ್ ಉಪಾಧ್ಯಕ್ಷ ಸುನಿಲ್ ಕುಮಾರ್ ದಡ್ಡು, ಸಿಬ್ಬಂದಿಗಳ ಪರವಾಗಿ ಸಹಾಯಕ ಮನೇಜರ್  ಪ್ರವೀಣ್ ಆಳ್ವ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.ವೇದಿಕೆಯಲ್ಲಿ ಜಿಲ್ಲಾ ಸಂಘದ ಪ್ರತಿನಿಧಿ ಡಿ. ಶರತ್, ನಿವೃತ್ತಿ ಹೊಂದಿದ ಜತ್ತಪ್ಪ ಗೌಡರವರ ಪತ್ನಿ ಶ್ರೀಮತಿ ಸವಿತಾ, ಡಿ.ಕೆ. ಸಾವಿತ್ರಿಯವರ ಪತಿ ಗಣೇಶ್ ದೇವಾಡಿಗ, ಶ್ರೀನಿವಾಸ ಹೆಗ್ಡೆಯವರ ಪತ್ನಿ ಶ್ರೀಮತಿ ಶೋಭಾ ಹೆಗ್ಡೆ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಬೇಂಕ್ ಮಾಜಿ ಅಧ್ಯಕ್ಷ, ನಿರ್ದೇಶಕರಾದ ಯಶವಂತ ಗೌಡ, ಯತೀಶ್ ಶೆಟ್ಟಿ, ಶ್ರೀಮತಿ ಸುಜಾತ ರೈ, ಶ್ರೀಮತಿ ಶ್ಯಾಮಲಾ ಶೆಣೈ, ಜಗದೀಶ್ ರಾವ್, ಸಚಿನ್, ದಯಾನಂದ ಸರೋಳಿ, ಕುಂಞ, ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸದಸ್ಯ ಸುರೇಶ್ ಅತ್ರಮಜಲು, ಬಜತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಕುಮಾರ್, ಮಾಜಿ ನಿರ್ದೇಶಕರಾದ ರಾಮಚಂದ್ರ ಮಣಿಯಾಣಿ, ಧರ್ನಪ್ಪ ನಾಯ್ಕ್, ನಿವೃತ್ತ ಮುಖ್ಯ ಕಾರ್‍ಯನಿರ್ವಹಣಾಧಿಕಾರಿ ಶೇಷಪತಿ ರೈ, ರವೀಂದ್ರ ರಾವ್, ನಿವೃತ್ತ ಸಿಬ್ಬಂದಿಗಳಾದ ವಿಶ್ವನಾಥ ಗೌಡ, ಡೀಕಯ್ಯ ಉಪಸ್ಥಿತರಿದ್ದರು.

ನೂತನ ಮುಖ್ಯಕಾರ್‍ಯನಿರ್ವಹಣಾಧಿಕಾರಿ ಶ್ರೀಮತಿ ಕ್ಲೇರಿ ವೇಗಸ್ ಸ್ವಾಗತಿಸಿ, ನಿರ್ದೇಶಕ ರಾಜೇಶ್ ಶಾಂತಿನಗರ ವಂದಿಸಿದರು. ಸಿಬ್ಬಂದಿಗಳಾದ ಶ್ರೀಮತಿ ಶೋಭಾ, ಕೀರ್ತನ್, ಗಾಯತ್ರಿ ವಿವಿಧ ಕಾರ್‍ಯಕ್ರಮ ನಿರ್ವಹಸಿದರು. ಶಶಿಧರ್ ಹೆಗ್ಡೆ ಕಾರ್‍ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.