Home_Page_Advt
Home_Page_Advt
Home_Page_Advt

ಈಸ್ಟ್‌ಇಂಡಿಯಾ ಕಂಪೆನಿಯಂತೆ ರೈತರನ್ನು ಗುಲಾಮರನ್ನಾಗಿ ಮಾಡುವ ಸರಕಾರ | ರೈತ ಸಂಘದ ಪ್ರತಿಭಟನೆಯಲ್ಲಿ ಶ್ರೀಧರ್ ಶೆಟ್ಟಿ ಆಕ್ರೋಶ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೋವಿಡ್-೧೯ನ ಪರಿಸ್ಥಿತಿಯಲ್ಲಿ ರೈತಾಪಿ ವರ್ಗ ತತ್ತರಿಸಿ ಹೋಗಿದ್ದಾರೆ. ಇಂತಹ ಸಮಯದಲ್ಲಿ ಸರಕಾರ ಸುಗ್ರಿವಾಜ್ಞೆ ಮೂಲಕ, ಎಪಿಎಂಸಿ ತಿದ್ದುಪಡಿ, ಭೂಸುಧಾರಣೆ ತಿದ್ದುಪಡಿಯನ್ನೆಲ್ಲಾ ಮಾಡಿಕೊಂಡು ರೈತರ ಹಕ್ಕನ್ನು ಮೊಟಕುಗೊಳಿಸುವ ಮೂಲಕ ಹಿಂದೆ ಈಸ್ಟ್ ಇಂಡಿಯಾ ಕಂಪೆನಿಯಂತೆ ರೈತರನ್ನು ಗುಲಾಮರನ್ನಾಗಿ ಮಾಡುವ ಮೂಲಕ ಸರಕಾರ ರೈ ವಿರೋಧಿ ನಿಲುವನ್ನು ಹೊಂದಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿ ಬೈಲುಗುತ್ತು ಅವರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಮತ್ತು ಕೇಂದ್ರ ಸರಕಾರ ರೈತ ವಿರೋಧಿ ಮತ್ತು ಜನವಿರೋಧಿ ಕಾಯ್ದೆಗಳನ್ನು ಜಾರಿಗೆ ತರುತ್ತಿದೆ ಎಂದು ಆರೋಪಿಸಿ ಜು.೧ರಂದು ಪುತ್ತೂರು ಮಿನಿ ವಿಧಾನ ಸೌಧದ ಮುಂದೆ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಕೋವಿಡ್ ಸಂಕಷ್ಟದ ಸಮಯದಲ್ಲಿ ಸುಗ್ರಿವಾಜ್ಞೆ ಮೂಲಕ ಮಾಡುವ ಕಾಯ್ದೆ ತರುವ ಪರಿಸ್ಥಿತಿ ಏನಿತ್ತು. ಯಾವುದೆ ಕಾಯ್ದೆಗಳನ್ನು ಶಾಸನ ಸಭೆ ಲೋಕಸಭೆಗಳಲ್ಲಿ ಚರ್ಚೆ ಮಾಡಿ ಬಳಿಕ ಜಾರಿಗೆ ತರುವುದು ನಿಯಮ. ಎಂದ ಅವರು ಇವತ್ತು ನಾವು ಸರಕಾರದ ಗುಲಾಮಗಿರಿಗೆ ಹೋಗುತ್ತಿದ್ದೇವೆ. ಹಿಂದೆ ಈಸ್ಟ್‌ಇಂಡಿಯಾ ಕಂಪೆನಿ ಯಾವ ರೀತಿ ಆಡಳಿತ ಮಡಿತ್ತೋ, ಅದೇ ನಮ್ಮ ಸರಕಾರ ಹಂತ ಹಂತವಾಗಿ ಎಲ್ಲವನ್ನು ಖಾಸಗಿಕರಣದಲ್ಲಿ ಬಹುರಾಷ್ಟ್ರೀಯ ಕಂಪೆನಿಗಳಿಗೆ ಕೊಟ್ಟು ನಮ್ಮನ್ನು ಗುಲಾಮರನ್ನಾಗಿ ಮಾಡುತ್ತಿದೆ ಎಂದರು. ಸರಕಾರದ ೧೯೭೧ರ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಬಂದರೆ ರೈತಾಪಿ ವಶದಲ್ಲಿರುವ ಕೃಷಿ ಭೂಮಿ, ಅನುಬಂಧಿತ ಭೂಮಿ, ಕಾರ್ಪೋರೇಟ್ ಕಂಪೆನಿಗಳು ಬಂಡವಾಳ ಶಾಹಿಗಳ ವಶವಾಗುತ್ತದೆ. ಇದರಿಂದ ರೈತಾಪಿ ವರ್ಗವೇ ಆಹಾರಕ್ಕಾಗಿ ಬಿಕ್ಷೆಬೇಡಬೇಕಾಗಬಹುದು. ಎಪಿಎಂಸಿಯಲ್ಲಿರುವ ದೋಷಗಳನ್ನು ಸರಿಪಡಿಸುವುದು ಬಿಟ್ಟು ಕಾಯ್ದೆ ತಿದ್ದುಪಡಿಯಿಂದ ಮಾರುಕಟ್ಟೆ ವ್ಯವಸ್ಥೆಯನ್ನು ಕಾರ್ಪೋರೇಟ್ ಕಂಪೆನಿಗಳ ವಶಕ್ಕೆ ಒಪ್ಪಿಸಿ ರೈತರ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಹುನ್ನಾರ ಆಗಿದೆ. ಹಾಗಾಗಿ ಸರಕಾರ ಜನವಿರೋಧಿ ಕಾಯ್ದೆಯನ್ನು ಬಿಡಬೇಕು. ರೈತರ ಪರ ನಿಲು ತಳೆಯಬೇಕು ಎಂದು ಅವರು ಆಗ್ರಹಿಸಿದರು. ಪ್ರತಿಭಟನೆಯ ಬಳಿಕ ಪುತ್ತೂರು ಸಹಾಯಕ ಕಮೀಷನರ್ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು. ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊನ್ನಪ್ಪ ಗೌಡ, ಕಡಬ ತಾಲೂಕು ಅಧ್ಯಕ್ಷ ವಿಕ್ಟರ್ ಮಾರ್ಟಿಸ್, ಈಶ್ವರ ಗೌಡ, ಶೇಖರ್ ರೈ ಕುಂಬ್ರ, ಜಯಪ್ರಕಾಶ್ ರೈ , ಇಸುಬು ಪುಣಚ, ವಿಶ್ವನಾಥ ಪೂಜಾರಿ ಕುಂತೂರು, ಗೋಪಾಲ ಆಚಾರ್ಯ, ಶೀವಚಂದ್ರ ಸುಳ್ಯಪದವು, ಶ್ರೀಧರ್ ರೈ ಮೇರ್ಲ, ಶಶಿ ವಲತ್ತಡ್ಕ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.