Home_Page_Advt
Home_Page_Advt
Home_Page_Advt

ಬಿಜೆಪಿ ಮಹಿಳಾ ಮೋರ್ಛಾದ ನೂತನ ಪದಾಧಿಕಾರಿಗಳ ಆಯ್ಕೆ – ಬಿಜೆಪಿ ಮಹಿಳಾ ಮೋರ್ಛಾದ ಪ್ರಥಮ ಸಭೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬಿಜೆಪಿ ಮಹಿಳಾ ಮೋರ್ಛಾದ ನೂತನ ಪದಾಧಿಕಾರಿಗಳ ಆಯ್ಕೆ ಬಳಿಕ ಮೋರ್ಛಾದ ಪ್ರಥಮ ಸಭೆಯು ಜು.೧ ರಂದು ಬಿಜೆಪಿ ಕಚೇರಿಯಲ್ಲಿ ನಡೆಯಿತು. ಬಿಜೆಪಿ ಗ್ರಾಮಾಂತರ ಮಹಿಳಾ ಮೋರ್ಛಾದ ಅಧ್ಯಕ್ಷೆ ಯಶಸ್ವಿನಿ ಶಾಸ್ತ್ರೀಯವರ ಅಧ್ಯಕತೆಯಲ್ಲಿ ಸಭೆ ನಡೆಯಿತು. ಮಹಿಳಾ ಮೋರ್ಚಾದ ಪದಾಧಿಕಾರಿಗಳನ್ನು ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವರ ಅನುಮತಿಯ ಮೇರೆಗೆ ಘೋಷಣೆ ಮಾಡಲಾಯಿತು.

ಮಹಿಳಾ ಮೋರ್ಚಾದ ಉಪಾಧ್ಯಕ್ಷರಾಗಿ ಪ್ರಫುಲ್ಲ ರೈ ಕರ್ನೂರುಗುತ್ತು, ಪ್ರಭಾ ಕೋಂಟ್ರುಪ್ಪಾಡಿ, ಕಾರ್ಯದರ್ಶಿಗಳಾಗಿ ಶ್ರೀಮತಿ ಜಗದೀಶ್ವರಿ ಕುವೆತ್ತಿಲ, ಚಂದ್ರಕಲಾ ಆಚಾರ್ಯ ಮುರ್ವ, ಖಜಾಂಚಿಯಾಗಿ ವಿಜಯಲಕ್ಷ್ಮಿ ಉಕ್ಕುಡ ಮತ್ತು ಸದಸ್ಯರಾಗಿ ಶ್ರೀಮತಿ ರೇವತಿ ಕೋಚೋಡಿ ವಿಟ್ಲ, ಶ್ರೀಮತಿ ಉಷಾ ಲಕ್ಷ್ಮಣ ಪೂಜಾರಿ ಬೆಳ್ಳಿಪ್ಪಾಡಿ, ಪುಷ್ಪಾವತಿ ರಘುನಾಥ್ ಪಾಟಾಳಿ ಪಾಣಾಜೆ, ಜಯಂತಿ ಭಂಡಾರಿ ಕೆಯ್ಯೂರು, ಭಾರತಿ ಕಂಪ ಮುಂಡೂರು, ಸುಜಾತ ಬಜತ್ತೂರು, ಸುನೀತಾ ಸುಂದರ ವಿಟ್ಲಮುಡ್ನೂರು, ವೀಣಾ ಕರ್ಗಲ್ಲು ಕುಳ, ನಾಗವೇಣಿ ದೇವಪ್ಪ ನಾಯ್ಕ ಪೆರ್ಲಂಪಾಡಿಯವರನ್ನು ಘೋಷಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲದ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ, ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಯಶೋಧ ಕೆ ಗೌಡ ನರಿಮೊಗ್ರು ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.