Breaking News

ಕೆಪಿಜೆಪಿ ರಾಜ್ಯಾಧ್ಯಕ್ಷ ಮಹೇಶ್ ಗೌಡರ ಹುಟ್ಟು ಹಬ್ಬ ಪ್ರಯುಕ್ತ ಕೊಳ್ತಿಗೆಯಲ್ಲಿ ಕೊರೋನಾ ವಾರಿಯರ್ಸ್ ಗಳಿಗೆ ಕಿಟ್ ವಿತರಣೆ

Puttur_Advt_NewsUnder_1
Puttur_Advt_NewsUnder_1

ಚಿತ್ರ: ಯೂಸುಫ್ ರೆಂಜಲಾಡಿ

  • ಕೊಳ್ತಿಗೆಯ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ-ಗಣ್ಯರ ಅಭಿಮತ

ಪುತ್ತೂರು: ಕೆಪಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ಉದ್ಯಮಿ ಮಹೇಶ್ ಗೌಡ ದಂಡಿನಮಜಲು ಅವರ ೫೧ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಕೊರೋನಾ ವಾರಿಯರ್‍ಸ್‌ಗಳಿಗೆ ಕಿಟ್ ವಿತರಣಾ ಕಾರ್ಯಕ್ರಮ ಜು.೧ರಂದು ಕೊಳ್ತಿಗೆ ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು.

ಸಭೆಯ ಪ್ರಾರಂಭದಲ್ಲಿ ಮಹೇಶ್ ಗೌಡರವರ ಹುಟ್ಟು ಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ಪುತ್ತೂರು ಎಪಿಎಂಸಿ ನಿರ್ದೇಶಕ ತೀರ್ಥಾನಂದ ದುಗ್ಗಲ ಹಾಗೂ ಗಿರೀಶ್ ಪಾದೆಕಲ್ಲುರವರು ಮಹೇಶ್ ಗೌಡರಿಗೆ ಹಾರಾರ್ಪಣೆ ಮಾಡಿದರು. ನಂತರ ಕೊಳ್ತಿಗೆ ಗ್ರಾ.ಪಂ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಒಟ್ಟು ೧೮ ಮಂದಿ ಕೊರೋನಾ ವಾರಿಯರ್ಸ್‌ಗಳಿಗೆ ಕಿಟ್ ವಿತರಿಸಲಾಯಿತು.

ಜಿ.ಪಂ ಆರೋಗ್ಯ, ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ ಮಾತನಾಡಿ ಉತ್ತಮ ಮನೆತನದಿಂದ ಬಂದಿರುವ ಮಹೇಶಣ್ಣನವರು ಸಾಧನೆಯ ಮೂಲಕ ಗುರುತಿಸಿಕೊಂಡಿದ್ದಾರೆ. ನಮ್ಮ ಊರಿನ ಹೆಸರನ್ನು ಹತ್ತೂರಿನಲ್ಲಿ ಪಸರಿಸಿದ್ದಾರೆ, ಇದೆಲ್ಲಾ ನಮಗೆ ಖುಷಿಯ ವಿಚಾರ ಎಂದರು. ಆಶಾ ಕಾರ್ಯಕರ್ತೆಯರಿಗೆ ಕಿಟ್ ನೀಡುವ ಮೂಲಕ ನಿಮ್ಮ ಜೊತೆ ನಾವಿದ್ದೇವೆ ಎನ್ನುವ ಸಂದೇಶ ರವಾನಿಸಿದಾರೆ, ಇದು ನಿಜಕ್ಕೂ ದೇವರು ಮೆಚ್ಚುವ ಕೆಲಸ ಎಂದು ಹೇಳಿದರು.

ರಾಜ್ಯ ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಲಕ್ಷ್ಮಣ ಗೌಡ ಕುಂಟಿಕಾನ ಮಾತನಾಡಿ ಕೊಳ್ತಿಗೆಯ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿರುವ ಮಹೇಶ್ ಗೌಡರು ನಮ್ಮೂರಿಗೆ ಹೆಮ್ಮೆ ತಂದಿದ್ದಾರೆ ಎಂದು ಹೇಳಿದರು.

ಕೊಳ್ತಿಗೆ ಪ್ರಾ.ಕೃ.ಪ.ಸಹಕಾರಿ ಸಂಘದ ಅಧ್ಯಕ್ಷ ವಸಂತ ಕುಮಾರ್ ರೈ ದುಗ್ಗಲ ಮಾತನಾಡಿ ಬೆಂಗಳೂರಿನಲ್ಲಿ ನೆಲೆಸಿ ಸಾಧನೆ ಮೂಲಕ ಊರಿಗೆ ಹೆಸರು ತಂದಿರುವ ಮಹೇಶ್ ಗೌಡರ ಸಾಧನೆ ಮೆಚ್ಚುವಂತದ್ದು. ರಾಜಕೀಯ ಪಕ್ಷವೊಂದನ್ನು ಸ್ಥಾಪನೆ ಮಾಡಿ ಆ ಪಕ್ಷದಿಂದ ಓರ್ವ ಅಭ್ಯರ್ಥಿಯನ್ನು ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಿಸುವುದೆಂದರೆ ಸುಲಭದ ಮಾತಲ್ಲ ಎಂದು ಹೇಳಿದರು.

ಕೊಳ್ತಿಗೆ ಗ್ರಾ.ಪಂ ಮಾಜಿ ಅಧ್ಯಕ್ಷೆ ಗಿರಿಜಾ ಧನಂಜಯ ಪೂಜಾರಿ ಮಾತನಾಡಿ ಕೊರೋನಾ ವಾರಿಯರ್‍ಸ್‌ಗಳ ಸೇವೆ ಗುರುತಿಸಿ ಅವರಿಗೆ ಕಿಟ್ ನೀಡಿರುವ ಮಹೇಶ್ ಗೌಡರ ಕಾರ್ಯ ಶ್ಲಾಘನೀಯ ಎಂದರು.

ಬೆಳ್ಳಾರೆ ಪೊಲೀಸ್ ಠಾಣೆಯ ಎಸ್ಸೈ ಆಂಜನೇಯ ರೆಡ್ಡಿ ಮಾತನಾಡಿ ಕೊರೋನಾ ವಾರಿಯರ್‍ಸ್‌ಗಳಾಗಿ ಸೇವೆ ನೀಡುತ್ತಿರುವ ವೈದ್ಯರು, ನರ್ಸ್‌ಗಳು, ಆಶಾ ಕಾರ್ಯಕರ್ತೆಯರು ತಾವು ಏನೆಂದು ತೋರಿಸಿಕೊಟ್ಟಿದ್ದಾರೆ. ಪೊಲೀಸರು ಕೂಡಾ ಕೊರೋನಾ ವಾರಿಯರ್‍ಸ್ ಆಗಿ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.
ಸಭೆಯಲ್ಲಿ ಕೊಳ್ತಿಗೆ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಕೊಳ್ತಿಗೆ ಗ್ರಾ.ಪಂ ಮಾಜಿ ಸದಸ್ಯ ಪವನ್ ಡಿ.ಜಿ, ಪ್ರಮುಖರಾದ ನೇಮಿರಾಜ್ ಪಾಂಬಾರು, ನೀಲಪ್ಪ ಗೌಡ, ದೇವಿಪ್ರಸಾದ್ ಕೊರ್ಬಂಡ್ಕ ಮತ್ತಿತರರು ಉಪಸ್ಥಿತರಿದ್ದರು. ಎಪಿಎಂಸಿ ನಿರ್ದೇಶಕ ತೀರ್ಥಾನಂದ ದುಗ್ಗಲ ಸ್ವಾಗತಿಸಿದರು. ಗಿರೀಶ್ ಪಾದೆಕಲ್ಲು ಕಾರ್ಯಕ್ರಮ ನಿರೂಪಿಸಿದರು. ಸತ್ಯಾನಂದ ಗೌಡ ಬರಡಿಮಜಲು ವಂದಿಸಿದರು.


ಕೊರೋನಾ ವಾರಿಯರ್ಸ್ ಸೇವೆ ಅವಿಸ್ಮರಣಿಯ-ಮಹೇಶ್ ಗೌಡ
ಕಿಟ್ ವಿತರಿಸಿದ ಕೆಪಿಜೆಪಿ ಕರ್ನಾಟಕ ರಾಜ್ಯಾಧ್ಯಕ್ಷ, ಉದ್ಯಮಿ ಮಹೇಶ್ ಗೌಡ ದಂಡಿನಮಜಲು ಮಾತನಾಡಿ ಕೋವಿಡ್-೧೯ ಸಂದಿಗ್ದ ಪರಿಸ್ಥಿತಿಯಲ್ಲಿ ಕೊರೋನಾ ವಾರಿಯರ್‍ಸ್‌ಗಳು ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದು ಅವರ ಸೇವೆಯನ್ನು ಸ್ಮರಿಸಲೇಬೇಕಾಗಿದೆ, ಅವರಿಗೆ ಕೋಟಿ-ಕೋಟಿ ನಮನಗಳನ್ನು ಸಲ್ಲಿಸುವುದರ ಜತೆಗೆ ನಾನು ಸಣ್ಣ ಮಟ್ಟಿನ ಕಿಟ್‌ನ್ನು ಈ ಭಾಗದ ಕೊರೋನಾ ವಾರಿಯರ್‍ಸ್‌ಗೆ ನೀಡಿದ್ದೇನೆ ಎಂದು ಹೇಳಿದರು. ನಾನು ಗ್ರಾ.ಪಂ ಸದಸ್ಯನಲ್ಲ, ದುಡ್ಡಿನ ಬಲ ನನ್ನ ಬಳಿಯಿಲ್ಲ, ತೋಳ್ಬಲವಿಲ್ಲ, ಜನಬಲವೂ ಇಲ್ಲ, ಹಾಗಿದ್ದರೂ ಸಾಮಾನ್ಯ ವ್ಯಕ್ತಿಯಾದ ನಾನು ಅಸಾಮಾನ್ಯ ಸಾಧನೆ ಮಾಡಿದ್ದೇನೆ ಎಂದರೆ ಅದಕ್ಕೆ ಹಿರಿಯರ, ದೇವರ ಆಶೀರ್ವಾದ ಮತ್ತು ನನ್ನ ಸತ್ಯ ನಿಷ್ಠೆಯೇ ಆಗಿದೆ ಎಂದು ಹೇಳಿದರು. ಪರಸ್ಪರ ಪ್ರೀತಿ, ವಿಶ್ವಾಸದಿಂದ ನಾವೆಲ್ಲಾ ಬದುಕುವ, ಕೊರೋನಾ ವಾರಿಯರ್‍ಸ್‌ಗಳಿಗೆ ಸಹಕಾರ ನೀಡುವ ಎಂದು ಮಹೇಶ್ ಗೌಡ ಅವರು ಹೇಳಿದರು.

ಕೊರೋನಾ ವಾರಿಯರ್ಸ್ ಗಳಿಗೆ ಗೌರವಾರ್ಪಣೆ:
ಕೊರೋನಾ ವಾರಿಯರ್ಸ್ ಗಳಾದ ಕೊಳ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಮಿತ್, ಕಿರಿಯ ಆರೋಗ್ಯ ಸಹಾಯಕಿಯರಾದ ಅಕ್ಷತಾ ಮತ್ತು ಚೈತ್ರಾ, ಬೆಳ್ಳಾರೆ ಪೊಲೀಸ್ ಠಾಣಾ ಎಸ್ಸೈ ಆಂಜನೇಯ ರೆಡ್ಡಿ, ಕಂದಾಯ ಇಲಾಖೆಯ ನಾಗೇಶ್, ಕೊಳ್ತಿಗೆ ಗ್ರಾ.ಪಂ ಪಿಡಿಒ ಸುನಿಲ್, ಗ್ರಾಮ ಕರಣಿಕರಾ ಶಬ್ಬೀರ್ ಮೊದಲಾದವರನ್ನು ಶಾಲು ಹೊದಿಸಿ, ಹಾರಾರ್ಪಣೆ ಮಾಡಿ ಗೌರವಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.