ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ರವರ ಪ್ರತಿಜ್ಞಾ ವಿಧಿ – ಪುತ್ತೂರು, ವಿಟ್ಲ-ಉಪ್ಪಿನಂಗಡಿ ಬ್ಲಾಕ್‌ನಲ್ಲಿ ನೇರ ಪ್ರಸಾರ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್‌ರವರು ಜು.೨ರಂದು ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮ ನಡೆಯಲಿದ್ದು, ಇದರ ಅಂಗವಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದಾದ್ಯಂತ ಪುತ್ತೂರು ಮತ್ತು ವಿಟ್ಲ ಉಪ್ಪಿನಂಗಡಿ ಬ್ಲಾಕ್‌ನ ವಿವಿಧ ಕಡೆಗಳಲ್ಲಿ ನೇರ ಕಾರ್ಯಕ್ರಮವನ್ನು ನಡೆಯಲಿದೆ.
ಪುತ್ತೂರು ನಗರ ಸಭೆ ವ್ಯಾಪ್ತಿಯಲ್ಲಿ ನೆಹರು ನಗರದ ಪಾಲಿಟೆಕ್ನಿಕ್ ಕಾಲೇಜು ಬಳಿ, ಪಡೀಲ್ (ರೋಶನ್ ರೈ ಮನೆಯ ಬಳಿ), ಸಾಲ್ಮರ ( ನಗರಸಭಾ ಸದಸ್ಯ ರಾಬಿನ್ ತಾವ್ರೋ ಮನೆಯ ಬಳಿ), ಪರ್ಲಡ್ಕ ( ಗೋಳಿಕಟ್ಟೆ ನಗರಸಭಾ ಸದಸ್ಯ ಮಹಮ್ಮದ್ ರಿಯಾಜ್ ಅವರ ಮನೆಯ ಬಳಿ) ಕೂರ್ನಡ್ಕ (ನಗರಸಭಾ ಸದಸ್ಯ ಯೂಸೂಪ್ ಡ್ರೀಮ್ ಅವರ ಮನೆಯ ಬಳಿ) ಹಾಗೂ ಪುತ್ತೂರು ಕಾಂಗ್ರೆಸ್ ಕಛೇರಿಯಲ್ಲಿ ನಡೆಯಲಿದ್ದು, ಗ್ರಾಮಾಂತರ ಪ್ರದೇಶಗಳಲ್ಲಿ ಪುರುಷರಕಟ್ಟೆ ಜಂಕ್ಷನ್, ಮುಂಡೂರು ಗ್ರಾಮದ (ಸಿ.ಎ.ಬ್ಯಾಂಕ್ ಸಭಾಂಗಣ), ಸರ್ವೆ ಗ್ರಾಮದ (ಕಲ್ಪಣೆ ಸಮುದಾಯ ಭವನ), ಕೆಯ್ಯೂರು (ಜಯಂತ್ ಪೂಜಾರಿ ಕೆಂಗುಡೇಲು ಅಂಗಡಿ ಬಳಿ), ತಿಂಗಳಾಡಿ (ಅಬೀಬ್‌ರವರ ಅಂಗಡಿ ಬಳಿ), ಕೊಳ್ತಿಗೆ (ಅಮಲ ರಾಮಚಂದ್ರರವರ ಮನೆ), ನೆ.ಮುಡ್ನೂರು (ಈಶ್ವರಮಂಗಲ ಜಂಕ್ಷನ್), ಬಡಗನ್ನೂರು (ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರುರವರ ಮನೆ ಬಳಿ), ಪಾಣಾಜೆ (ಆರ್ಲಪದವು ಜಂಕ್ಷನ್), ಅರಿಯಡ್ಕ (ಮಾಡನ್ನೂರು ಜಂಕ್ಷನ್), ಬೆಟ್ಟಂಪಾಡಿ (ಗ್ರಾ.ಪಂ.ಬಳಿ), ಒಳಮೊಗ್ರು (ಕುಂಬ್ರ ಜಂಕ್ಷನ್), ನಿಡ್ಪಳ್ಳಿ (ಆಸಿಫ್ ಹಾಜಿ ಮನೆ ಬಳಿ), ಸಂಪ್ಯ (ದಾವೂದ್ ಮನೆ ಬಳಿ) ನಡೆಯಲಿದೆ.

ವಿಟ್ಲ-ಉಪ್ಪಿನಂಗಡಿ ಬ್ಲಾಕ್: ವಿಟ್ಲ ಉಪ್ಪಿನಂಗಡಿ ಬ್ಲಾಕ್‌ನಲ್ಲಿ ಮಾಣಿಲ, ಪೆರುವಾಯಿ, ಕೇಪು, ಅಳಿಕೆ, ಪುಣಚ, ಬಲ್ನಾಡು, ವಿಟ್ಲ ಮುಡ್ನೂರು, ಇಡ್ಕಿದು, ಪಡ್ನೂರು, ಕಬಕ, ಕೊಡಿಪ್ಪಾಡಿ, ಕೆದಿಲ, ಪೆರ್ನೆ, ಕೋಡಿಂಬಾಡಿ, ನೆಕ್ಕಿಲಾಡಿ, ಉಪ್ಪಿನಂಗಡಿ, ಹಿರೇಬಂಡಾಡಿ, ಬಜತ್ತೂರು ಹಾಗೂ ವಿಟ್ಟ ಪೇಟೆಯಲ್ಲಿ ನೇರ ಪ್ರಸಾರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.

‘ಸುದ್ದಿ ಪುತ್ತೂರು’ ಯುಟ್ಯೂಬ್ ಚಾನೆಲ್‌ನಲ್ಲಿ ನೇರ ಪ್ರಸಾರ
ಡಿಕೆ ಶಿವಕುಮಾರ್ ಪ್ರತಿಜ್ಞಾ‌‌ದಿನ‌ ಪದಗ್ರಹಣ ಕಾರ್ಯಕ್ರಮ ‘ಸುದ್ದಿ ಪುತ್ತೂರು’ ಯುಟ್ಯೂಬ್ ಚಾನೆಲ್‌ನಲ್ಲಿಯೂ ನೇರ ಪ್ರಸಾರ ನಡೆಯಲಿದೆ. ಕಾರ್ಯಕ್ರಮಕ್ಕೆ ಅರ್ಧಗಂಟೆ ಮುಂಚಿತವಾಗಿ ಅಂದರೆ ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ನೇರ ಪ್ರಸಾರ ಆರಂಭಗೊಳ್ಳಲಿದ್ದು, ಪುತ್ತೂರು, ಕಡಬ ಮತ್ತು ವಿಟ್ಲ-ಉಪ್ಪಿನಂಗಡಿ ವ್ಯಾಪ್ತಿಯಲ್ಲಿ ನೇರ ಪ್ರಸಾರ ಆಗುವಲ್ಲಿನ‌ ಸ್ಥಳಗಳ ವಿಡಿಯೋಗಳು ಪ್ರಸಾರವಾಗಲಿದೆ. ಆಯಾ ವ್ಯಾಪ್ತಿಯ ಕಾರ್ಯಕರ್ತರು ತಮ್ಮಲ್ಲಿ ನಡೆಯುವ ಕಾರ್ಯಕ್ರಮಗಳ ವಿಡಿಯೋ ಫೋಟೋ ಕಳುಹಿಸಿದಲ್ಲಿ ನೇರ ಪ್ರಸಾರದಲ್ಲಿ ಅಳವಡಿಸಿಕೊಳ್ಳಲಾಗುವುದು.
ಫೊಟೋ‌ ವಿಡಿಯೋ ಕಳುಹಿಸಬೇಕಾದ ವಾಟ್ಸಾಪ್ ಸಂಖ್ಯೆ 8088902347

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.