ಪುತ್ತೂರು : ಕಳೆದ 25 ವರ್ಷಗಳಿಂದ ತನ್ನ ಗ್ರಾಹಕರಿಗೆ ಸಾರ್ಥಕ ಸೇವೆಯನ್ನು ನೀಡಿದ ದರ್ಬೆಯ ಶ್ರೀರಾಮ ಸೌಧ ವಾಣಿಜ್ಯ ಸಂಕೀರ್ಣದಲ್ಲಿ ಸೇವೆ ನೀಡುತ್ತಿರುವ ಉಷಾ ಮೆಡಿಕಲ್ಸ್ ಇವರಿಂದ ಪುತ್ತೂರಿನ ಪ್ರಪ್ರಥಮ ಪಾಲಿಕ್ಲಿನಿಕ್ ಜು.2 ರಂದು ಸರಳ ಕಾರ್ಯಕ್ರಮದೊಂದಿಗೆ ಶುಭಾರಂಭ ಗೊಂಡಿತು.
ಸುಂದರ ಸುಸಜ್ಜಿತ ಸಂಪೂರ್ಣ ಹವಾನಿಯಂತ್ರಿತ ಉಷಾ ಪಾಲಿ ಕ್ಲಿನಿಕ್ ಇದನ್ನು ಧನ್ವಂತರಿ ಹಾಸ್ಪಿಟಲ್ ಇದರ ಹಿರಿಯ ವೈದ್ಯರು ಆಗಿರುವಂತಹ ಡಾಕ್ಟರ್ ಚಂದ್ರಶೇಖರ್ ಕಜೆ ಅವರು ದೀಪ ಬೆಳಗಿಸಿ ಉದ್ಘಾಟಿಸಿ, ಶುಭ ಹಾರೈಸಿದರು. ಕಟ್ಟಡದ ಮ್ಹಾಲಕ ಉಮೇಶ್ ನಾಯಕ್ ಸಹಿತ ಹಲವು ಮಂದಿ ಪ್ರಮುಖರು ಉಪಸ್ಥಿತರಿದ್ದರು. ಸಂಸ್ಥೆಯ ಮುಖ್ಯಸ್ಥರಾದ ಪಿ.ಗಣೇಶ್ ಭಟ್ ಹಾಗೂ ಅರುಣಾ ಜಿ.ಭಟ್ ಅತಿಥಿಗಳನ್ನು ಸ್ವಾಗತಿಸಿದರು.
ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಸೇವೆಯನ್ನು ನೀಡುತ್ತಿರುವ 12 ಮಂದಿ ತಜ್ಞ ವೈದ್ಯರುಗಳು ಒಂದೇ ಸೂರಿನಡಿಯಲ್ಲಿ ಸೇವೆಗೆ ಲಭ್ಯರಿರುತ್ತಾರೆ. ಈ ಮೂಲಕ ಹಲವು ಅನುಭವಿ ನೂತನ ವೈದ್ಯರುಗಳನ್ನು ಪುತ್ತೂರಿಗೆ ಪರಿಚಯಿಸಿರುವ ಹೆಮ್ಮೆ ಈ ಉಷಾ ಪಾಲಿ ಕ್ಲಿನಿಕ್ಕಿಗೆ ಸಲ್ಲುತ್ತದೆ.
ಪಾಲಿಕ್ಲಿನಿಕ್ ಮೂಲಕ ಪುತ್ತೂರಿನ ಜನರು ಪರವೂರಿಗೆ ತೆರಳಿ ಚಿಕಿತ್ಸೆ ಪಡೆಯಲು ಅನಾನುಕೂಲವಾಗಿರುವವರಿಗೆ ಉಷಾ ಪಾಲಿ ಕ್ಲಿನಿಕ್ ಒಂದು ವರದಾನವಾಗಲಿದೆ.
ರಕ್ತ ತಪಾಸಣಾ ಕೇಂದ್ರ;
ಪುತ್ತೂರಿನ ಏಕೈಕ ಸಂಪೂರ್ಣ ಸ್ವಯಂಚಾಲಿತ ರಕ್ತ ತಪಾಸಣೆ ಕೇಂದ್ರ ಆಗಿರುವಂತಹ ಧನ್ವಂತರಿ ಕ್ಲಿನಿಕ್ ಲ್ಯಾಬೋರೇಟರೀಸ್ ಇದರ ಮಾದರಿ ಸಂಗ್ರಹ ಕೇಂದ್ರ ಈ ಸಂದರ್ಭದಲ್ಲಿ ಉದ್ಘಾಟನೆಗೊಂಡಿತು.
ಸೇವೆಗೆ ಲಭ್ಯವಿರುವ ವೈದ್ಯರುಗಳು;
* ಡಾ.ಡೋಟನ್ ಡೆನ್ನಿಸ್ ನೊರೊನ್ನಾ ಇವರು ಕನ್ಸಲ್ಟೆಂಟ್ ಫಿಜಿಶಿಯನ್ ಹಾಗೂ ತುರ್ತು ಚಿಕಿತ್ಸಾ ತಜ್ಞರು ಪ್ರತಿದಿನ ಬೆಳಿಗ್ಗೆ 10ರಿಂದ 12:30 ತನಕ ಸೇವೆಗೆ ಲಭ್ಯ.
* ಡಾ. ಶ್ರೀಲತಾ ಭಟ್, ಇವರು ಪ್ರಸೂತಿ ಹಾಗೂ ಬಂಜೆತನ ನಿವಾರಣಾ ತಜ್ಞೆ ಆಗಿರುತ್ತಾರೆ. ಪ್ರತಿದಿನ ಸಂಜೆ 4 ರಿಂದ 6ರ ತನಕ ಸೇವೆಗೆ ಲಭ್ಯ.
* ಡಾ. ಪ್ರಕಾಶ್ ಕೊಣ್ಣೂರು ಇವರು ಮನೋರೋಗ ತಜ್ಞ ರಾಗಿರುತ್ತಾರೆ. ಪ್ರತಿದಿನ ಬೆಳಗ್ಗೆ 10 ರಿಂದ 1ರ ತನಕ ಸೇವೆಗೆ ಲಭ್ಯ.
* ಡಾ. ಸುರಕ್ಷಾ ರೈ ಪಿ.ಇವರು ಜನರಲ್ ಪ್ರಾಕ್ಟಿಷನರ್ ಆಗಿದ್ದು ಪ್ರತಿದಿನ ಬೆಳಗ್ಗೆ 9.30 ರಿಂದ ಸಂಜೆ 7ರ ತನಕ ಸೇವೆಗೆ ಲಭ್ಯ.
* ಡಾ. ಗಣೇಶ್ ನಾಯಕ್ ಎಸ್ ಇವರು ಕನ್ಸಲ್ಟೆಂಟ್ ಫಿಜಿಶಿಯನ್ ಹಾಗೂ ಮಧುಮೇಹ ತಜ್ಞರು ಆಗಿರುತ್ತಾರೆ. ಗುರುವಾರ ಹಾಗೂ ಶುಕ್ರವಾರ ಸಂಜೆ 6.30 ರಿಂದ 8.30 ರ ತನಕ ಸೇವೆಗೆ ಲಭ್ಯ
* ಡಾ. ಎಂ.ಆರ್ ಅಶೋಕ್ ಪದಕನ್ನಾಯ ಇವರು ಕಿವಿ ಮೂಗು ಹಾಗೂ ಗಂಟಲು ತಜ್ಞರು. ತಲೆನೋವು ಗೊರಕೆ ಎಂಡೋಸ್ಕೋಪಿ, ತಲೆ ಹಾಗೂ ಕುತ್ತಿಗೆ ಶಸ್ತ್ರಚಿಕಿತ್ಸಾ ತಜ್ಞರು ಆಗಿರುತ್ತಾರೆ. ಪ್ರತಿ ಮಂಗಳವಾರ ಸಂಜೆ 5 ರಿಂದ 7 ರ ತನಕ ಸೇವೆಗೆ ಲಭ್ಯ
* ಡಾ. ಮಧುಕರ್ ಎಂ. ಗೌಡ ಇವರು ಕಿವಿ ಮೂಗು ಹಾಗೂ ಗಂಟಲು ತಜ್ಞರು. ತಲೆನೋವು ಗೊರಕೆ ಎಂಡೋಸ್ಕೋಪಿ, ತಲೆ ಹಾಗೂ ಕುತ್ತಿಗೆ ಶಸ್ತ್ರಚಿಕಿತ್ಸಾ ತಜ್ಞರು ಆಗಿರುತ್ತಾರೆ. ಶನಿವಾರ ಸಂಜೆ 5 ರಿಂದ 7 ರ, ಆದಿತ್ಯವಾರ ಬೆಳಗ್ಗೆ 10ರಿಂದ 12ರ ತನಕ ತನಕ ಸೇವೆಗೆ ಲಭ್ಯ
* ಡಾ. ಸುಜಯ್ ತಂತ್ರಿ ಕೆ.ಇವರು ಕನ್ಸಲ್ಟೆಂಟ್ ಆಯುರ್ವೇದ ತಜ್ಞರು. ಸೋಮವಾರ ಮತ್ತು ಶನಿವಾರ ಸಂಜೆ 5 ರಿಂದ 7 ರ ತನಕ ಸೇವೆಗಳ ಅಭ್ಯ
* ಡಾ. ಸ್ವಾತಿ ಶೆಣೈ ಇವರು ಮಕ್ಕಳ ಹಾಗೂ ನವಜಾತ ಶಿಶು ತಜ್ಞೆ ಇವರು ಬುಧವಾರ ಮತ್ತು ಗುರುವಾರ ಸಂಜೆ 6ರಿಂದ 8ರ ತನಕ ಸೇವೆಗೆ ಲಭ್ಯ
* ಡಾ. ವಿಶುಕುಮಾರ್ ಬಿ.ಇವರು ಹೃದ್ರೋಗ ತಜ್ಞರು. ಪ್ರತಿ ಗುರುವಾರ 3ರಿಂದ ಸಂಜೆ 6 ತನಕ ಸೇವೆಗೆ ಲಭ್ಯ
* ಡಾ. ಅಶ್ವಿನ್ ಆಳ್ವಾ ಇವರು ಗ್ಯಾಸ್ಟ್ರೋ, ಲಿವರ್ ಎಂಡೋಸ್ಕೋಪಿ ಕ್ಯಾನ್ಸರ್ ಸರ್ಜನ್. ಲ್ಯಾಪ್ರೋಸ್ಕೋಪಿ ರೋಬೋಟಿಕ್ ಮತ್ತು ತೂಕ ಇಳಿಕೆ ಶಸ್ತ್ರಚಿಕಿತ್ಸಾ ತಜ್ಞರು ಆಗಿರುತ್ತಾರೆ ಗುರುವಾರ ಮಧ್ಯಾಹ್ನ 2.30 ರಿಂದ 3:30 ತನಕ ಲಭ್ಯ
* ಡಾ. ಶ್ರುತಿಕಾಂತ್ ಎಸ್ ಪೂಜಾರಿ MBBS, MS(Ortho) Dnb(ortho)
ಕೀಲು ಮತ್ತು ಎಲುಬು ಶಸ್ತ್ರ ಚಿಕಿತ್ಸಾ ತಜ್ಞರು. ಇವರು ಪ್ರತಿ ದಿನ ಸಂಜೆ 5.30 ರಿಂದ 7.30 ರವರೆಗೆ ಸೇವೆಗೆ ಲಭ್ಯರಿರುತ್ತಾರೆ.