ಕುಂಬ್ರದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಡಿ ಕೆ ಶಿವಕುಮಾರ್ ರವರ ಪದಗ್ರಹಣ, ಪ್ರತಿಜ್ಞಾ ವಿಧಿ ವೀಕ್ಷಣಾ ಸಮಾರಂಭ

Puttur_Advt_NewsUnder_1
Puttur_Advt_NewsUnder_1
  • ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ತುಂಬಿದೆ: ಕುಂಬ್ರ ದುರ್ಗಾಪ್ರಸಾದ್ ರೈ

ಪುತ್ತೂರು:ಕೆಪಿಸಿಸಿ ಅಧ್ಯಕ್ಷರಾಗಿ ಡಿ ಕೆ ಶಿವಕುಮಾರ್ ರವರ ಪದಗ್ರಹಣ ಸಮಾರಂಭದ ವೀಕ್ಷಣಾ ಕಾರ್ಯಕ್ರಮ ಕುಂಬ್ರದಲ್ಲಿ ಜು. ೨ ರಂದು ನಡೆಯಿತು.
ಕುಂಬ್ರದ ನ್ಯೂಫ್ಯಾಮಿಲಿ ಕಾಂಪ್ಲೆಕ್ಸ್‌ನ ಸಭಾಂಗಣದಲ್ಲಿ ನಾಯಕರು ಹಾಗೂ ಕಾರ್ಯಕರ್ತರು ಸಮಾರಂಭವನ್ನು ವೀಕ್ಷಣೆ ಮಾಡಿದರು. ಕಾರ್ಯಕ್ರಮದವನ್ನು ಕಾಂಗ್ರೆಸ್ ನ ಹಿರಿಯ ಮುಖಂಡ ಜತ್ತಪ್ಪ ಗೌಡ ದೇವಸ್ಯ ದೀಪಬೆಳಗಿಸುವ ಮೂಲಕ ಉದ್ಘಾಟಿಸಿದರು.

ಕಾರ್ಯಕರ್ತರಲ್ಲಿ ಹೊಸ ಚೈತನ್ಯ ತುಂಬಿದೆ: ದುರ್ಗಾಪ್ರಸಾದ್
ಕಾರ್ಯಕ್ರಮದಲ್ಲಿ ಮಾತನಾಡಿದ ಪುತ್ತೂರು ಬ್ಲಾಕ್ ಕಾಂಗ್ರೆಸ್ ವಕ್ತಾರ ಕುಂಬ್ರ ದುರ್ಗಾಪ್ರಸಾದ್ ರೈ ಮಾತನಾಡಿ ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಪದಗ್ರಹಣ ಸಮಾರಂಭವನ್ನು ಭಾರತದ ರಾಜಕೀಯದ ಇತಿಹಾಸದಲ್ಲೇ ಮೊದಲ ಬಾರಿಗೆ ವಿಶೇಷವಾಗಿ ವ್ಯವಸ್ಥೆ ಮಾಡಲಾಗಿದೆ. ಲಕ್ಷಾಂತರ ಮಂದಿ ಕಾರ್ಯಕರ್ತರು ಒಂದೇ ಸಮಯದಲ್ಲಿ ಕಾರ್ಯಕ್ರಮವನ್ನು ವೀಕ್ಷಣೆ ಮಾಡುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಪುಳಕವನ್ನು ತಂದಂತಾಗಿದೆ. ಡಿ ಕೆ ಶಿವಕುಮಾರ್ ರವರು ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಮೂಡಿದೆ. ರಾಜ್ಯದ ಮೂಲೆ ಮೂಲೆಗಳಲ್ಲಿ ಸೇರಿದಂತೆ ವಿಶ್ವದಾದ್ಯಂತ ಕಾರ್ಯಕರ್ತರು ತಮ್ಮ ಪಕ್ಷದ ನಾಯಕನ ಪಟ್ಟಾಭಿಷೇಕವನ್ನು ನೋಡಿ ಕಣ್ತುಂಬಿಕೊಂಡಿದ್ದಾರೆ. ಪಕ್ಷವನ್ನು ಗ್ರಾಮೀಣ ಹಾಗೂ ಬೂತ್ ಮಟ್ಟದಲ್ಲಿ ಗಟ್ಟಿಗೊಳಿಸಬೇಕಾದ ಕರ್ತವ್ಯ ಕಾರ್ಯಕರ್ತರ ಮೇಲಿದೆ. ಎಲ್ಲರೂ ಸೇರಿ ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸಬೇಕಿದೆ ಎಂದು ಹೇಳಿದರು.

ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು: ವಿನೋದ್ ಶೆಟ್ಟಿ
ಡಿಕೆಶಿ ಯವರು ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತುಂಬಿದೆ. ಮುಂದಿನ ದಿನಗಳಲ್ಲಿ ತಳಮಟ್ಟದಿಂದ ಪಕ್ಷವನ್ನು ಬೆಳೆಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ. ಮುಂದಿ ದಿನಗಳಲ್ಲಿ ಹಂತಹಂತವಾಗಿ ಗ್ರಾಮೀಣ ಮಟ್ಟದಲ್ಲಿ ಪಕ್ಷವನ್ನು ಬೆಳಸುವಲ್ಲಿ ಎಲ್ಲರೂ ಕಾರ್ಯಪೃವೃತ್ತರಾಗಬೇಕು ಎಂದು ಒಳಮೊಗ್ರು ಗ್ರಾಮಸಮಿತಿ ಕಾಂಗ್ರೆಸ್ ಅಧ್ಯಕ್ಷ ವಿನೋದ್ ಶೆಟ್ಟಿ ಮುಡಾಲ ಹೇಳಿದರು.

ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ವಂದೇಮಾತರಂ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರಾರಂಭದಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸೈನಿಕರಿಗೆ ಒಂದು ನಿಮಿಷ ಮೌನ ಆಚರಿಸುವ ಮೂಲಕ ಗೌರವ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಒಳಮೊಗ್ರು ಗ್ರಾಪಂ ಮಾಜಿ ಉಪಾಧ್ಯಕ್ಷ ಇಸುಬು ಮೈದಾನಿಮೂಲೆ,ಒಳಮೊಗ್ರು ಗ್ರಾಪಂ ಸದಸ್ಯರಾದ ಶಶಿಕಿರಣ್ ರೈ, , ಶೀನಪ್ಪ ನಾಯ್ಕ್, ಯುವ ಕಾಂಗ್ರೆಸ್ ಮುಖಂಡ ರಕ್ಷಿತ್ ರೈ ಮುಗೇರು, ಕಾರ್ಯಕರ್ತರಾದ ಹುಕ್ರಪ್ಪ ಬೊಳ್ಳಾಡಿ, ಮಾದವ, ಲತೀಫ್ ಕುಂಬ್ರ, ಅಝೀಝ್, ಮಹಮ್ಮದ್ , ಪ್ರಜ್ವಲ್ ರೈ, ಸಂಜೀವ ರೈ, ಅಬ್ದುಲ್ ಮಜೀದ್ ಅಲಂಗೂರು, ವಿಠಲಪೂಜಾರಿ, ಯು. ಅಶ್ರಫ್, ಕುಶಾಲಪ್ಪ ಗೌಡ, ಅಬ್ದುಲ್ ರಝಾಕ್ ಪರ್ಪುಂಜ, ವಿಜಯಕುಮಾರ್ ರೈ, ಆಚಿ ಕುಂಬ್ರ, ಅಬ್ದುಲ್ ರಶೀದ್, , ಚೆನ್ನ, ಇಬ್ರಾಹಿಂ ಸೇರಿದಂತೆ ೫೦ ಮಂದಿ ಕಾರ್ಯಕರ್ತರು ಉಪಸ್ಥಿತರಿದ್ದರು. ಕೊರೋನಾ ಹಿನ್ನೆಲೆಯಲ್ಲಿ ಅಂತರ ಕಾಯ್ದುಕೊಂಡು , ಮಾಸ್ಕ್ ಕಡ್ಡಾಯವಾಗಿ ಬಳಸಿ ಕಾರ್ಯಕ್ರಮ ನಡೆಯಿತು.

ಒಳಮೊಗ್ರು ಗ್ರಾಮಸಮಿತಿ ಕಾಂಗ್ರೆಸ್ ಕಾರ್ಯದರ್ಶಿ ಸಂತೋಷ್‌ಭಂಡಾರಿ ಸ್ವಾಗತಿಸಿದರು. ಯುವ ಕಾಂಗ್ರೆಸ್ ಮುಖಂಡ ರಕ್ಷಿತ್ ರೈ ಮುಗೇರು ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.