ಜನಮನದ ಸಾರಥಿ ಡಿ.ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಪಟ್ಟಾಭಿಷೇಕ, ಪ್ರತಿಜ್ಞಾ ವಿಧಿ ಸ್ವೀಕಾರ: ಕೆಯ್ಯೂರಿನಲ್ಲಿ ವೀಕ್ಷಣೆ

Puttur_Advt_NewsUnder_1
Puttur_Advt_NewsUnder_1
  • ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ: ಎ.ಕೆ ಜಯರಾಮ ರೈ

ಪುತ್ತೂರು: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಗೊಂಡ ಜನಮನದ ಸಾರಥಿ ಡಿ.ಕೆ ಶಿವಕುಮಾರ್‌ರವರ ಪದಗ್ರಹಣ ಸಮಾರಂಭದ ವೀಕ್ಷಣೆ, ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮ ಕೆಯ್ಯೂರಿನ ಬ್ರಹ್ಮಶ್ರೀ ಕಾಂಪ್ಲೆಕ್ಸ್‌ನ ಎದುರುಗಡೆ ನಡೆಯಿತು. ವ್ಯವಸ್ಥಿತವಾಗಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಚೆನ್ನಪ್ಪ ರೈ ದೇರ್ಲರವರು ದೀಪ ಬೆಳಗಿಸಿ ಶುಭ ಹಾರೈಸಿದರು. ಕಿಸಾನ್ ಕಾಂಗ್ರೆಸ್‌ನ ದ.ಕ ಜಿಲ್ಲಾ ಉಪಾಧ್ಯಕ್ಷರು, ಕೆಯ್ಯೂರು ಗ್ರಾಮೀಣ ಕಾಂಗ್ರೆಸ್‌ನ ಅಧ್ಯಕ್ಷರಾಗಿರುವ ಎ.ಕೆ ಜಯರಾಮ ರೈಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಡಿ.ಕೆ ಶಿವಕುಮಾರ್‌ರವರು ಕೆಪಿಸಿಸಿಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿರುವುದು ನಮಗೆಲ್ಲರಿಗೂ ಸಂತಸ ತಂದಿದೆ. ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ. ಒಬ್ಬ ಧೀಮಂತ ನಾಯಕ, ಜನಮನದ ಸಾರಥಿಯಾಗಿರುವ ಡಿ.ಕೆ.ಶಿಯವರಿಗೆ ನಾವೆಲ್ಲರೂ ಬೆಂಬಲ ನೀಡಬೇಕು ಆ ಮೂಲಕ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವಲ್ಲಿ ಪ್ರಯತ್ನಿಸಬೇಕು ಎಂದರು. ಮುಂದಿನ ದಿನಗಳಲ್ಲಿ ಡಿ.ಕೆ ಶಿವಕುಮಾರ್‌ರವರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿ ಎಂದು ಹೇಳಿ ಶುಭ ಹಾರೈಸಿದರು.

ಕಾಂಗ್ರೆಸ್ ಕೆಯ್ಯೂರು ವಲಯ ಸಮಿತಿಯ ಕಾರ್ಯದರ್ಶಿ ಜಯಂತ ಪೂಜಾರಿ ಕೆಂಗುಡೇಲುರವರು ಸ್ವಾಗತಿಸಿ ಮಾತನಾಡಿ, ಡಿ.ಕೆ ಶಿವಕುಮಾರ್‌ರವರು ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ. ನಾವೆಲ್ಲರೂ ಮತ್ತೆ ಒಗ್ಗಟ್ಟಾಗುವ ಮೂಲಕ ಪಕ್ಷ ಸಂಘಟನೆಗೆ ಪ್ರಯತ್ನಿಸಬೇಕು ಎಂದು ಹೇಳಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಕಾಂಗ್ರೆಸ್ ಕೆಯ್ಯೂರು ವಲಯ ಸಮಿತಿಯ ಕೋಶಾಧಿಕಾರಿ, ಕೆಯ್ಯೂರು ಗ್ರಾಪಂ ಮಾಜಿ ಸದಸ್ಯ, ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯ ಹನೀಫ್ ಕೆ.ಎಂ ಉಪಸ್ಥಿತರಿದ್ದರು.

ಸಭೆಯಲ್ಲಿ ಕೆಯ್ಯೂರು ಗ್ರಾಪಂ ಮಾಜಿ ಸದಸ್ಯ, ಜನಜಾಗೃತಿ ವೇದಿಕೆಯ ಕೆಯ್ಯೂರು ಗ್ರಾಮ ಸಮಿತಿ ಅಧ್ಯಕ್ಷ ಅಬ್ದುಲ್ ಖಾದರ್ ಮೇರ್ಲ, ಕಾಂಗ್ರೆಸ್ ಕಾರ್ಯಕರ್ತರುಗಳಾದ ಕೊರಗಪ್ಪ ಪೂಜಾರಿ, ಕೆ.ಕೃಷ್ಣಪ್ಪ ಪೂಜಾರಿ, ಸುಜಯ, ಚಂದ್ರಶೇಖರ್ ಕೆ.ಎಸ್,ಡಿ.ಬಟ್ಯಪ್ಪ ರೈ, ಕೆ.ನಾರಾಯಣ ಪೂಜಾರಿ ಕೆಯ್ಯೂರು, ಜಗದೀಶ್, ಅಬ್ಬಾಸ್,ಶೀನಪ್ಪ ರೈ, ಎ.ಕೆ ಹರಿನಾಥ ರೈ, ಕೆಯ್ಯೂರು ಗ್ರಾಪಂ ಮಾಜಿ ಸದಸ್ಯೆಯರುಗಳಾದ ಅಮಿತಾ ಎಚ್.ರೈ, ಗೀತಾ, ಶಿವಶ್ರೀರಂಜನ್ ರೈ ದೇರ್ಲ, ಮೊಹಮ್ಮದ್ ಶರೀಫ್, ಗೋಪಾಲ್ ಪೂಜಾರಿ, ಕವಿತಾ ಕಟ್ಟತ್ತಾರು,ಮಹಾಲಿಂಗ ಪಾಟಾಳಿ, ಉದಯ ಪೂಜಾರಿ, ಮಾಯಿಕುಂಞ,ಸಂಜೀವ ಪೂಜಾರಿ, ರಾಕೇಶ್ ಸಣಂಗಳ, ಉಗ್ಗಪ್ಪ ರೈ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ವಿಶೇಷತೆ
ಪ್ರತಿಜ್ಞಾ ವಿಧಿ ಕಾರ್ಯಕ್ರಮವು ಸಂಪೂರ್ಣ ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದ ಮಾದರಿಯಲ್ಲೇ ನಡೆಯಿತು. ಮೊದಲಿಗೆ ಪ್ರಾಸ್ತಾವಿಕ, ಹುತಾತ್ಮ ಯೋಧರಿಗೆ ಒಂದು ನಿಮಿಷದ ಮೌನ ಪ್ರಾರ್ಥನೆ, ಸ್ವಾಗತ ಬಳಿಕ ವಂದೇ ಮಾತರಂ ಗೀತೆ,ದೀಪ ಪ್ರಜ್ವಲನೆ,ಪ್ರತಿಜ್ಞಾ ವಿಧಿ ಸ್ವೀಕಾರ ಇತ್ಯಾದಿ ನಡೆಯಿತು. ಎಲ್‌ಇಡಿ ಟಿ.ವಿ ಮೂಲಕ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆಯುತ್ತಿರುವಂತೆಯೇ ಕೆಯ್ಯೂರಿನಲ್ಲಿ ನಡೆಸಲಾಯಿತು. ಸಭಾ ವೇದಿಕೆಗೆ ಬರುವ ಮುಂಚೆ ಕಾರ್ಯಕರ್ತರು ಸ್ಯಾನಿಟೈಸರ್ ಹಾಕಿ ಮಾಸ್ಕ್ ಧರಿಸಿಯೇ ಆಸೀನರಾಗುವಂತಹ ವ್ಯವಸ್ಥೆ ಮಾಡಲಾಗಿತ್ತು. ಲಘು ಪಾನೀಯದ ವ್ಯವಸ್ಥೆ ಮಾಡಲಾಗಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.