ಮುಂಡೂರು: ಡಿ.ಕೆ.ಶಿ ಪದಗ್ರಹಣ ವೀಕ್ಷಣೆ, ಪ್ರತಿಜ್ಞಾ ವಿಧಿ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1

ಬಿಜೆಪಿ ದುರಾಡಳಿತ ದೇಶವನ್ನು ವಿನಾದತ್ತ ಕೊಂಡೊಯ್ಯುತ್ತಿದೆ-ಸೊರಕೆ

ಪುತ್ತೂರು: ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಡಿ.ಕೆ ಶಿವಕುಮಾರ್ ಅವರ `ಪದಗ್ರಹಣ ಪ್ರತಿಜ್ಞಾ ವಿಧಿ ಕಾರ್ಯಕ್ರಮ’ ನೇರ ಪ್ರಸಾರ ವೀಕ್ಷಣೆ ಹಾಗೂ ಸಭೆ ಮುಂಡೂರು ಸಿ.ಎ ಬ್ಯಾಂಕ್ ಸಭಾಭವನದಲ್ಲಿ ಜು.೨ರಂದು ನಡೆಯಿತು.

ಹಿರಿಯ ಕಾಂಗ್ರೆಸ್ ಮುಖಂಡ ಅಣ್ಣಿ ಪೂಜಾರಿ ಹಿಂದಾರು ದೀಪ ಬೆಳಗಿಸಿ ಚಾಲನೆ ನೀಡಿದರು. ಕಾಂಗ್ರೆಸ್ ಮುಖಂಡ, ಮುಂಡೂರು ಪ್ರಾ.ಕೃ.ಪ.ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ ಮಾತನಾಡಿ ಕಾಂಗ್ರೆಸ್ ಪಕ್ಷ ದೇಶದ ಅಧಿಕಾರ ಹಿಡಿಯುವ ಉದ್ದೇಶಕ್ಕೆ ಹುಟ್ಟಿಕೊಂಡ ಪಕ್ಷವಲ್ಲ, ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಉದ್ದೇಶಕ್ಕೆ ಹುಟ್ಟಿದ ಪಕ್ಷವಾಗಿದೆ ಎಂದು ಹೇಳಿದರು. ದೇಶದಲ್ಲಿ ಕೈಗಾರಿಕೆಗಳಿಂದ ಹಿಡಿದು ಎಲ್ಲ ವಿಭಾಗಗಳಲ್ಲಿ ದೇಶ ಅಭಿವೃದ್ಧಿಯಾಗಿದೆ ಎಂದರೆ ಅದಕ್ಕೆ ಕಾಂಗ್ರೆಸ್ ಕಾರಣ, ನೆಹರೂ ಅವರ ಕೊಡುಗೆಯನ್ನೂ ದೇಶದ ಜನ ಎಂದಿಗೂ ಮರೆಯಲು ಸಾಧ್ಯವಿಲ್ಲ. ಕಾಂಗ್ರೆಸ್ ಆಡಳಿತ ನಡೆಸಿ ದೇಶವನ್ನು ಈ ಮಟ್ಟಕ್ಕೆ ಅಭಿವೃದ್ಧಿ ಪಡಿಸದೇ ಇದ್ದಿದ್ದರೆ ಇಂದು ಬಿಜೆಪಿಯವರಿಗೆ ಇಂದು ಭಾಷಣ ಮಾಡಲು ಏನೂ ಇರುತ್ತಿರಲಿಲ್ಲ. ಬಿಜೆಪಿ ಇಂದಿನ ದುರಾಡಳಿತ ದೇಶವನ್ನು ನಾಶ ಮಾಡುತ್ತಿದೆ ಎಂದು ಅವರು ಹೇಳಿದರು. ಜೈ ಜವಾನ್ ಜೈ ಕಿಸಾನ್ ಘೋಷಣೆ ಮೂಲಕ ಲಾಲ್ ಬಹದ್ದೂರ್ ಶಾಸ್ತ್ರಿ ದೇಶಕ್ಕಾಗಿ ಹೋರಾಡಿದ್ದಾರೆ. ಉಳುವವನೇ ಭೂಮಿಯ ಒಡೆಯ ಕಾಯ್ದೆಯ ಮೂಲಕ ಇಂದಿರಾ ಗಾಂಧಿ ಬಡ ಜನತೆಗೆ ಬದುಕು ಕೊಟ್ಟಿದ್ದಾರೆ. ಬಡವರಿಗೆ ಬ್ಯಾಂಕ್ ಬಾಗಿಲು ತೋರಿಸಿದ್ದು ಕೂಡಾ ಕಾಂಗ್ರೆಸ್, ಬಿಜೆಪಿ ಈ ದೇಶಕ್ಕೆ ಏನು ಮಾಡಿದೆ ಎಂದು ಸ್ವಯಂ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.

 

ನೋಟ್ ಬ್ಯಾನ್ ಮಾಡಿ ಜನರನ್ನು ಸಂಕಷ್ಟಕ್ಕೆ ದೂಡಿದ ಬಿಜೆಪಿ, ಜಾತಿ, ಧರ್ಮದ ಹೆಸರಿನಲ್ಲಿ ದೇಶವನ್ನು ಒಡೆಯುತ್ತಿದೆ. ಇದೀ ತೈಲ ಬೆಲೆ ಏರಿಕೆ ಮಾಡಿ ಜನಸಾಮಾನ್ಯರನ್ನು ಸಂಕಷ್ಟದ ಕೂಪಕ್ಕೆ ತಳ್ಳಿದೆ ಎಂದು ಸೊರಕೆ ಆರೋಪಿಸಿದರು.

ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿ ಅಧಿಕಾರ ವಹಿಸಿಕೊಂಡಿದ್ದು ಅವರ ಕೈ ಬಲಪಡಿಸುವ ಜವಾಬ್ದಾರಿ ನಮ್ಮದು. ಗ್ರಾಮ ಮಟ್ಟದಲ್ಲಿ ಕಾಂಗೆಸ್ ಪಕ್ಷವನ್ನು ಸಂಘಟಿಸಬೇಕು ಎಂದ ಅವರು ಜನರ ಮನಸ್ಸು ಈಗಲೂ ಕಾಂಗ್ರೆಸ್ ಪರ ಇದೆ. ದೇಶಕ್ಕೆ, ರಾಜ್ಯಕ್ಕೆ ಕಾಂಗ್ರೆಸ್ ಅನಿವಾರ್ಯ ಎಂಬುವುದೂ ಎಲ್ಲರಿಗೂ ತಿಳಿದಿದೆ. ಮುಂದಕ್ಕೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಅದಕ್ಕಾಗಿ ನಾವೆಲ್ಲಾ ಶ್ರಮ ವಹಿಸಿ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

ಬಿಜೆಪಿಯವರಿಂದ ಸೇಡಿನ ರಾಜಕೀಯ:
ಬಿಜೆಪಿ ಗ್ರಾಮ ಮಟ್ಟದಲ್ಲೂ ಸೇಡಿನ ರಾಜಕೀಯ ಮಾಡುತ್ತಿದೆ. ಮುಂಡೂರು ಗ್ರಾಮದಲ್ಲಿ ಕಾಂಗ್ರೆಸ್‌ನ್ನು ಶಕ್ತಿಯುತವಾಗಿ ಬೆಳೆಸುವ ಮೂಲಕ ಬಿಜೆಪಿ ಸೇಡಿನ ರಾಜಕೀಯಕ್ಕೆ ಮತ್ತು ದುರಾಡಳಿತಕ್ಕೆ ಇತಿಶ್ರೀ ಹಾಡಬೇಕಾಗಿದೆ. ಮುಂಡೂರು ಗ್ರಾ.ಪಂ ಹಾಗೂ ಸಿ.ಎ ಬ್ಯಾಂಕ್ ಜನಪರವಾಗಿ ಕೆಲಸ ಮಾಡುತ್ತಿದೆ ಎಂದು ಸುರೇಶ್ ಕುಮಾರ್ ಸೊರಕೆ ಹೇಳಿದರು.

ಡಿಕೆಶಿ ಅವರಿಗೆ ಶಕ್ತಿ ತುಂಬುವ ಕೆಲಸ ನಮ್ಮಿಂದಾಗಬೇಕು-ಇಬ್ರಾಹಿಂ ಮುಲಾರ್
ಮುಂಡೂರು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಇಬ್ರಾಹಿಂ ಮುಲಾರ್ ಮಾತನಾಡಿ ಡಿಕೆಶಿ ಅವರಿಗೆ ಶಕ್ತಿ ತುಂಬುವ ಕೆಲಸ ನಮ್ಮಿಂದಾಗಬೇಕು. ದೇಶಕ್ಕೆ ಕಾಂಗ್ರೆಸ್ ಅನಿವಾರ್ಯ ಅದಕ್ಕಾಗಿ ಎಲ್ಲರೂ ಪಕ್ಷಕ್ಕಾಗಿ ದುಡಿಯಬೇಕು ಎಂದು ಹೇಳಿದರು.

ಬಿಜೆಪಿ ದುರಾಡಳಿತದಿಂದ ಜನತೆ ಸಂಕಷ್ಟದಲ್ಲಿದ್ದಾರೆ-ಯಾಕೂಬ್ ಮುಲಾರ್
ಕಾಂಗ್ರೆಸ್ ಮುಖಂಡ, ಮುಂಡೂಡು ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಯಾಕೂಬ್ ಮುಲಾರ್ ಮಾತನಾಡಿ ಬಿಜೆಪಿ ಸುಳ್ಳಿನ ಮೇಲೆ ಸಾಮ್ರಾಜ್ಯ ಕಟ್ಟುತ್ತಿದೆ. ಕಾಂಗ್ರೆಸ್ ಮಾಡಿರುವ ಅಭಿವೃದ್ಧಿ ಸಾಧನೆಗಳನ್ನು ತನ್ನದೆಂದು ಹೇಳುತ್ತಾ ಬಿಜೆಪಿ ಜನರ ಮನಸ್ಸಿಗೆ ಸುಳ್ಳನ್ನು ತುಂಬಿಸುತ್ತಿದೆ ಎಂದು ಹೇಳಿದರು. ದೇಶಕ್ಕೆ ಕಾಂಗ್ರೆಸ್ ಕೊಟ್ಟ ಕೊಡುಗೆ ವರ್ಣಿಸಲು ಸಾಧ್ಯವಿಲ್ಲ, ಬಿಜೆಪಿ ಅಧಿಕಾರ ಪಡೆದ ಬಳಿಕ ಬೆಲೆಯೇರಿಕೆ ಮಾಡಿ ಜನರ ಬದುಕನ್ನು ಕಷ್ಟಕ್ಕೆ ದೂಡಿದೆ, ತೈಲ ಬೆಲೆ ಗಗನಕ್ಕೇರಿದೆ, ದಿನಬಳಕೆ ಸಾಮಾಗ್ರಿಗಳ ಬೆಲೆ ಕೈಗೆಟುಕುತ್ತಿಲ್ಲ, ಜನರು ಉದ್ಯೋಗ ಕಳೆದುಕೊಂಡು ಹೈರಾಣಾಗಿದ್ದಾರೆ ಇದಕ್ಕೆಲ್ಲಾ ಪರಿಹಾರ ಆಗಬೇಕಾದರೆ ಕಾಂಗ್ರೆಸ್ ಅಧಿಕಾರ ಪಡೆಯಬೇಕು. ಹಾಗಾಗಿ ಡಿಕೆಶಿ ನೇತೃತ್ವದಲ್ಲಿ ಹಳ್ಳಿ ಹಳ್ಳಿಯಲ್ಲೂ ಕಾಂಗ್ರೆಸ್ ಪಕ್ಷವನ್ನು ಸಧೃಢವಾಗಿ ನಾವು ಕಟ್ಟಬೇಕಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಮುಂಡೂರು ಗ್ರಾ.ಪಂ ಉಪಾಧ್ಯಕ್ಷೆ ಸೌಮ್ಯಾ ಆರ್ ಕಂಬಳಿ, ಸದಸ್ಯ ಬಾಬು ಕಲ್ಲಗುಡ್ಡೆ, ಹಿರಿಯ ಕಾಂಗ್ರೆಸ್ಸಿಗ ಅಬ್ದುಲ್ ರಹ್ಮಾನ್ ಹಾಜಿ ಮುಲಾರ್, ಮುಂಡೂರು ಸಿ.ಎ ಬ್ಯಾಂಕ್ ನಿರ್ದೇಶಕರಾದ ಮೋಹಿನಿ ಪಜಿಮಣ್ಣು, ಪದ್ಮಯ್ಯ ಬಂಡಿಕಾನ ಉಪಸ್ಥಿತರಿದ್ದರು. ಮುಂಡೂರು ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಯಾಕೂಬ್ ಮುಲಾರ್ ಸ್ವಾಗತಿಸಿದರು. ಗ್ರಾ.ಪಂ ಸದಸ್ಯ ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಹುತಾತ್ಮ ಯೋಧರಿಗೆ ಮೌನ ಪ್ರಾರ್ಥನೆ:
ಇತ್ತೀಚೆಗೆ ಬಾರತ-ಚೀನಾ ಗಡಿಯಲ್ಲಿ ಹುತಾತ್ಮರಾದ ಭಾರತೀಯ ವೀರ ಯೋಧರಿಗೆ ಒಂದು ನ ಇಮಿಷದ ಮೌನ ಪ್ರಾರ್ಥನೆ ನಡೆಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.