ಜನಮನದ ಸಾರಥಿ ಡಿ.ಕೆ.ಶಿ ಪದಗ್ರಹಣ, ತಿಂಗಳಾಡಿಯಲ್ಲಿ ವೀಕ್ಷಣೆ, ಪ್ರತಿಜ್ಞಾ ವಿಧಿ ಸ್ವೀಕಾರ

Puttur_Advt_NewsUnder_1
Puttur_Advt_NewsUnder_1
  • ಬಡವರಿಗೆ,ದೀನ ದಲಿತರಿಗೆ, ಜಾತ್ಯಾತೀತ ಶಕ್ತಿಗಳಿಗೆ ಶಕ್ತಿ ಕೊಡುವ ದಿನ: ಬೋಳೋಡಿ

ಪುತ್ತೂರು: ಜನಮನದ ಸಾರಥಿ ಡಿ.ಕೆ ಶಿವಕುಮಾರ್‌ರವರು ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಹಾಗೂ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮದ ನೇರ ಪ್ರಸಾರವನ್ನು ತಿಂಗಳಾಡಿಯಲ್ಲಿ ವೀಕ್ಷಣೆ ಮಾಡಲಾಯಿತು. ತಿಂಗಳಾಡಿ ಕಣ್ಣೂರು ಕಾಂಪ್ಲೆಕ್ಸ್‌ನಲ್ಲಿ ಟಿ.ವಿ ಹಾಕಿ ಕಾರ್ಯಕ್ರಮದ ವೀಕ್ಷಣೆ ನಡೆಯಿತು. ಕೆದಂಬಾಡಿ ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಮನೋಹರ್ ರೈ ಎಂಡೆಸಾಗುರವರು ದೀಪ ಬೆಳಗಿಸಿದರು. ಬಳಿಕ ಮಾತನಾಡಿ ಡಿ.ಕೆ ಶಿವಕುಮಾರ್‌ರವರು ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡಿರುವುದು ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಬಲ ತಂದಿದೆ. ನಾವೆಲ್ಲರೂ ಒಗ್ಗಟ್ಟಾಗಿ ಪಕ್ಷವನ್ನು ಬಲ ಪಡಿಸಬೇಕು ಎಂದರು, ಹಿರಿಯ ಕಾಂಗ್ರೆಸ್ ಮುಂಖಡ, ಕೆದಂಬಾಡಿ ಗ್ರಾಪಂ ಮಾಜಿ ಸದಸ್ಯ ಬೋಳೋಡಿ ಚಂದ್ರಹಾಸ ರೈಯವರು ಸ್ವಾಗತಿಸಿ ಮಾತನಾಡಿ, ಇದೊಂದು ಐತಿಹಾಸಿಕ ದಿನ. ಪದಗ್ರಹಣ ಸಮಾರಂಭವನ್ನು ರಾಜ್ಯದ ಎಲ್ಲಾ ಕಡೆಗಳಲ್ಲಿ ಡಿಜಿಟಲ್ ವ್ಯವಸ್ಥೆ ಮೂಲಕ ವೀಕ್ಷಣೆ ಮಾಡುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮತ್ತಷ್ಟು ಬಲ ತುಂಬಿಸುವ ಕೆಲಸ ನಡೆದಿದೆ.

ಇದು ಹಿಂದೆಂದೂ ಕಂಡರಿಯದ ಕೇಳರಿಯದ ಕಾರ್ಯಕ್ರಮ. ಡಿಕೆಶಿಯವರ ಪ್ರತಿಜ್ಞಾ ಕಾರ್ಯಕ್ರಮವು ಕಾರ್ಯಕರ್ತರ ಪ್ರತಿಕ್ಞಾ ಕಾರ್ಯಕ್ರಮವಾಗಿದೆ. ಇಂದು ನಾವೆಲ್ಲರೂ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತೇನೆ ಎನ್ನುವ ಪ್ರತಿಜ್ಞೆಯನ್ನು ಮಾಡಬೇಕು ಎಂದರು. ಇಂದಿನ ದಿನ ರಾಜ್ಯದ ಬಡವರಿಗೆ ದೀನ ದಲಿತರಿಗೆ, ಜಾತ್ಯಾತೀತ ಶಕ್ತಿಗಳಿಗೆ ಶಕ್ತಿ ಕೊಡುವ ದಿನವಾಗಿದೆ. ಹೈಕಮಾಂಡ್ ಸೂಕ್ತ ಆಯ್ಕೆಯನ್ನು ಮಾಡಿದೆ. ಮುಂದಿನ ದಿನಗಳಲ್ಲಿ ಡಿ.ಕೆ.ಶಿಯವರು ರಾಜ್ಯದ ಮುಖ್ಯಮಂತ್ರಿಯಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ವಕ್ತಾರ ಪುರಂದರ ರೈ ಕೋರಿಕ್ಕಾರು, ಕಾರ್ಯಕರ್ತರುಗಳಾದ ಹಮೀದ್ ಟಿ.ಎಸ್, ವಸಂತ ತಿಂಗಳಾಡಿ, ಕುಯ್ಯಾರು ಗಂಗಾಧರ ರೈ, ಯೂಸುಫ್ ಹಾಜಿ ಕಣ್ಣೂರು, ಬಿ.ಸೀತಾರಾಮ ರೈ, ಖಾಸಿಂ ಕೆರೆಮೂಲೆ, ಮೊಹಮ್ಮದ್ ಆಸಿಕ್,ಅಬ್ದುಲ್ ರವೂಫ್,ಅಯೂಬ್ ಟಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು. ಅಬೀಬ್ ಕಣ್ಣೂರು ಕಾರ್ಯಕ್ರಮದ ವ್ಯವಸ್ಥೆಮಾಡಿದ್ದರು.

ಕಾರ್ಯಕ್ರಮಕ್ಕೆ ಆಗಮಿಸುವ ಕಾರ್ಯಕರ್ತರಿಗೆ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿತ್ತು. ಮಾಸ್ಕ್ ಧರಿಸಿ,ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಯಕರ್ತರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.