Breaking News

ಪ್ರತಿಪಕ್ಷ ಕಾಂಗ್ರೆಸ್‌ಗೆ ಸಮರ್ಥ ನಾಯಕತ್ವ ಸಿಕ್ಕಿದೆ: ಡಿ.ಕೆ.ಶಿ ‘ಪ್ರತಿಜ್ಞಾ’ ನೇರ ವೀಕ್ಷಣೆಯಲ್ಲಿ ಸೂತ್ರಬೆಟ್ಟು ಜಗನ್ನಾಥ ರೈ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಾಂಗ್ರೆಸ್‌ನ ಪ್ರತಿಯೊಬ್ಬರಿಗೂ ಇವತ್ತು ಶುಭ ದಿನ. ಪ್ರತಿಪಕ್ಷವಾಗಿ ಕಾಂಗ್ರೆಸ್ ಮಾಡುವಂತಹ ಕೆಲಸ ಬಹಳಷ್ಟು ಇದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ಸಮರ್ಥ ನಾಯಕತ್ವೂ ಸಿಕ್ಕಿದೆ ಎಂದು ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ ಅವರು ಹೇಳಿದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರಿಂದ ಜು.2ರಂದು ಬೆಂಗಳೂರಿನಲ್ಲಿ ನಡೆದ ‘ಪ್ರತಿಜ್ಞಾ’ ವಿಧಿ ಸ್ವೀಕಾರದ ನೇರ ಪ್ರಸಾರವನ್ನು ಪುತ್ತೂರು ನಗರ ಮಹಿಳಾ ಕಾಂಗ್ರೆಸ್ ವಿಲ್ಮ ಗೋನ್ಸಾಲಿಸ್ ಅವರ ಪಡೀಲ್ ಮನೆಯಲ್ಲಿ ವೀಕ್ಷಣಾ ಕಾರ್ಯಕ್ರಮದಲ್ಲಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಸರಕಾರದ ಪ್ರಧಾನಿ ನರೇಂದ್ರ ಮೋದಿಯವರ ಕೆಲಸಗಳ ತಪ್ಪುಗಳನ್ನು ಎತ್ತಿ ತೋರಿಸುವ ಪ್ರಬಲ ಶಕ್ತಿ ಸಿಕ್ಕಿದೆ. ಕೊರೋನಾದ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದು ಕೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸದೇ ಲಕ್ಷಾಂತರ ಮಂದಿ ಪ್ರತಿ ಗ್ರಾಮಗ್ರಾಮಗಳಲ್ಲಿ ಈ ಪ್ರತಿಜ್ಞಾ ವಿಧಿ ಕಾರ್ಯಕ್ರಮ ವೀಕ್ಷಣೆ ಮತ್ತು ತಾವು ಕೂಡಾ ಪ್ರತಿಜ್ಞೆ ಸ್ವೀಕಾರ ಕಾರ್ಯಕ್ರಮ ನಡೆಸಲಿದ್ದು, ಇಂತಹ ವರ್ಚುವಲ್ ವಿಡಿಯೋ ಮೂಲಕ ಲಕ್ಷಾಂತರ ಮಂದಿಯನ್ನು ಡಿ.ಕೆ.ಶಿಕುಮಾರ್ ತಲುಪಿದ್ದಾರೆ. ಇಂತಹ ದೊಡ್ಡ ಮಟ್ಟಿನ ವ್ಯವಸ್ಥೆ ಪ್ರಥಮ ಬಾರಿಗೆ ನಡೆದಿದ್ದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಏಕಕಾಲದಲ್ಲಿ ಸಂಪರ್ಕಿಸುವ ಕೆಲಸ ಆಗಿದೆ ಎಂದರು. ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿಲ್ಮ ಗೋನ್ಸಾಲಿಸ್ ಸ್ವಾಗತಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಡಿ.ಕೆ.ಶಿವಕುಮಾರ್ ಅವರ ಪ್ರತಿಜ್ಞಾ ವಿಧಿ ವಿಧಾನದಂತೆ ವಂದೆ ಮಾತರಂ, ಬಳಿಕ ಡಾ. ಬಿ.ಆರ್ ಅಂಬೇಡ್ಕರ್ ಅವರ ಸಂವಿಧಾನ ಪೀಠಿಕೆ, ಕಾಂಗ್ರೆಸ್ ಸಾಮೂಹಿಕ ಪ್ರತಿಜ್ಞೆ ಮಾಡಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ರಾಷ್ಟ್ರಗೀತೆ ನಡೆಯಿತು. ಮಧ್ಯಾಹ್ನ ಸಹಬೋಜನದ ವ್ಯವಸ್ಥೆ ಮಾಡಲಾಗಿತ್ತು. ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರೋಶನ್ ರೈ ಬನ್ನೂರು, ನ್ಯಾಯವಾದಿ ಭಾಸ್ಕರ್ ಗೌಡ ಕೊಡಿಂಬಾಳ, ದಾವೋದ್ ಬನ್ನೂರು, ಮಹಮ್ಮದ್ ಅಜೀಜ್, ಆಶೀಫ್, ಆಶೀಕ್ ಬನ್ನೂರು, ಜಸಿಂತ ಗೋನ್ಸಾಲಿಸ್, ಹಿಮ, ಆನಂದ್, ಕಮಲಾ ಪಡೀಲ್, ಮೇರಿ ಮಸ್ಕರೇನ್ಹಸ್, ಶ್ರೀಧರ್, ಭಾಸ್ಕರ್ ರೈ ಸೇರಿದಂತೆ ಹಲವಾರು ಮಂದಿ ಸಾಮಾಜಿಕ ಅಂತರ ಕಾಯ್ದು ಕೊಂಡು ಕಾರ್ಯಕ್ರಮ ವೀಕ್ಷಣೆ ಮತ್ತು ಪ್ರತಿಜ್ಞಾ ವಿಧಿ ಮಾಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.