HomePage_Banner
HomePage_Banner
HomePage_Banner
HomePage_Banner

ಕೌಕ್ರಾಡಿ: ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಪದಗ್ರಹಣ ಸಮಾರಂಭದ ನೇರ ಪ್ರಸಾರ, ಪ್ರತಿಜ್ಞಾ ವಿಧಿ

Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ಕೆಪಿಸಿಸಿ ಅಧ್ಯಕ್ಷರಾಗಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ರವರ ಬೆಂಗಳೂರಿನಲ್ಲಿ ನಡೆದ ಪದಗ್ರಹಣ ಸಮಾರಂಭದ ನೇರ ಪ್ರಸಾರ ಹಾಗೂ ‘ಪ್ರತಿಜ್ಞಾ’ ವಿಧಿ ಕಾರ್ಯಕ್ರಮ ಜು.2ರಂದು ನೆಲ್ಯಾಡಿ ರಾಯ್ಸ್ ಕಮ್ಯುನಿಟಿ ಹಾಲ್‌ನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಹಿರಿಯ ಕಾಂಗ್ರೆಸಿಗ ಜಾನಪ್ಪ ಪೂಜಾರಿ ಪಟ್ಟೆಗುಡ್ಡೆ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿದ್ದ ಜಿ.ಪಂ.ಸದಸ್ಯ ಸರ್ವೋತ್ತಮ ಗೌಡರವರು ಮಾತನಾಡಿ, ಡಿ.ಕೆ.ಶಿವಕುಮಾರ್‌ರವರು ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತರಾಗಿದ್ದಾರೆ. ಪಕ್ಷ ಯಾವುದೇ ಸಂಕಷ್ಟ ಎದುರಿಸುತ್ತಿದ್ದರೂ ತನ್ನ ಚಾಣಾಕ್ಷ ರಾಜಕಾರಣದ ಮೂಲಕ ಸಮಸ್ಯೆ ಬಗೆಹರಿಸುವ ತಾಕತ್ತು ಹೊಂದಿದ್ದಾರೆ. ಈಗ ಅವರಿಗೆ ಪಕ್ಷದ ಸಾರಥ್ಯ ದೊರೆತಿರುವುದು ಪಕ್ಷದ ಕಾರ್ಯಕರ್ತರಲ್ಲೂ ಹೊಸ ಹುರುಪು, ಚೈತನ್ಯ ತುಂಬಿದೆ. ಪ್ರತಿಯೊಂದು ಬೂತ್‌ಗಳಲ್ಲೂ ಡಿಕೆಶಿಯಂತಹ ಪಕ್ಷ ಸಂಘಟಕರು ಹುಟ್ಟಿಕೊಳ್ಳಬೇಕು. ಈ ಮೂಲಕ ದೇಶ,ರಾಜ್ಯದಲ್ಲಿ ಮತ್ತೆ ಪಕ್ಷ ಅಧಿಕಾರಕ್ಕೆ ಬರುವಲ್ಲಿ ಎಲ್ಲರೂ ಸಂಘಟಿತರಾಗಿ ಕೆಲಸ ಮಾಡಬೇಕಿದೆ ಎಂದರು. ರಬ್ಬರ್ ರಬ್ಬರ್‌ಬೆಳೆಗಾರರ ಸಹಕಾರ ಸಂಘದ ನಿರ್ದೇಶಕ ಜಾರ್ಜ್‌ಕುಟ್ಟಿ ಉಪದೇಶಿ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ.ಸದಸ್ಯೆ ಕೆ.ಟಿ.ವಲ್ಸಮ್ಮ, ಹಿರಿಯ ಕಾಂಗ್ರೆಸ್ ಮುಖಂಡ ಇಸುಬು ಹೊಸಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೌಕ್ರಾಡಿ ಗ್ರಾ.ಪಂ.ಸದಸ್ಯ ಹನೀಫ್ ಸ್ವಾಗತಿಸಿ, ಉಸ್ಮಾನ್ ವಂದಿಸಿದರು. ಫಾರೂಕ್ ಕಾರ್ಯಕ್ರಮ ನಿರೂಪಿಸಿದರು. ಕೌಕ್ರಾಡಿ ಗ್ರಾ.ಪಂ.ಸದಸ್ಯರಾದ ಸವಿತಾ ಸರ್ವೋತ್ತಮ, ಶೈಲಾ, ಮಾಧವ ಇಚ್ಲಂಪಾಡಿ, ಮಾಜಿ ಸದಸ್ಯ ವರ್ಗೀಸ್ ಅಬ್ರಹಾಂ, ಕಾಂತಪ್ಪ, ಕಾಂಗ್ರೆಸ್ ಮುಖಂಡರಾದ ರಿಜ್ಮಾ ಹೊಸಮಜಲು, ಜಯ ಪುತ್ಯೆ, ಲಿಗೋರಿ ಕಾಪಿನಬಾಗಿಲು, ರೋಯಿ ಕಲ್ಲರ್ಬ, ಹಮೀದ್ ಹೊಸಮಜಲು, ಜಬ್ಬಾರ್ ಹೊಸಮಜಲು, ಜಾನ್ಸನ್ ಸಿ.ಕೆ.ಇಚ್ಲಂಪಾಡಿ, ಸಿಜು ವಿ.ಕೆ.ನೆಲ್ಯಾಡಿ, ನವಾಝ್ ಹೊಸಮಜಲು, ನಾಸೀರ್ ಅಲಂಪಾಡಿ, ಬಿನೋಜ್ ನೆಲ್ಯಾಡಿ, ರಝಾಕ್ ಅಲಂಪಾಡಿ, ಉದೈತ್ ಶಾಂತಿಬೆಟ್ಟು, ಝೈನ್ ಬೈಲಂಗಡಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.