ಪುತ್ತೂರು: ಕೊಳಚೆ ನೀರು ಹರಿಯುವ ಚರಂಡಿಯಲ್ಲೇ ಹಾದು ಹೋಗಿರುವ ಕುಡಿಯುವ ನೀರು ಸರಬರಾಜು ಪೈಪ್ ಒಡೆದು ಕೊಳಚೆ ನೀರು ಕುಡಿಯುವ ನೀರಿನ ಪೈಪ್ಗೆ ಸಂಪರ್ಕವಾದ ಘಟನೆ ಬನ್ನೂರು ಕಟ್ಟೆಯ ಬಳಿಯ ಜನತಾ ಕಾಲೋನಿಯಲ್ಲಿ ಪರಿಸರದಲ್ಲಿ ನಡೆದ ಕುರಿತು ಮಾಹಿತಿ ಅರಿತ ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿಯವರು ತಕ್ಷಣ ಸ್ಪಂಧಿಸಿ ದುರಸ್ಥಿತಿ ಸೂಚಿಸಿದ್ದಾರೆ.
ಬನ್ನೂರು ಪ್ರಾದೇಶಿಕ ಸಾರಿಗೆ ಕಚೇರಿ ಬಳಿ ಜನತಾ ಕಾಲೋನಿಯಲ್ಲಿ ಬೇಸಿಗೆ ಕಾಲದಲ್ಲಿ ಕೊಳಚೆ ನೀರು, ಮಳೆಗಾಲದಲ್ಲಿ ಮಳೆ ಮತ್ತು ಕೊಳಚೆ ನೀರು ಜೊತೆಯಾಗಿ ಹರಿಯುವ ಚರಂಡಿಯಲ್ಲೇ ಕುಡಿಯುವ ನೀರು ಸರಬರಾಜಿನ ಪೈಪ್ ಹಾದು ಹೋಗಿದ್ದು, ಜು.೨ರಂದು ಮನೆ ಸಂಪರ್ಕದ ನೀರು ಸರಬರಾಜಿನ ಪೈಪ್ ಒಡೆದು ಹೋಗಿರುವುದು ಬೆಳಕಿಗೆ ಬಂದಿದೆ. ಪೈಪ್ ಒಡೆದರಿಂದಾಗಿ ಕೊಳಚೆ ನೀರು ಮತ್ತು ಕುಡಿಯುವ ನೀರು ಸಂಪರ್ಕದಿಂದ ಪರಿಸರದ ಜನತೆಯಲ್ಲಿ ಆತಂಕ ಹುಟ್ಟಿಸಿತ್ತು. ಕೊರೋನಾ ಮಹಾಮಾರಿ ಸೋಂಕಿನ ನಡುವೆ ಕುಡಿಯುವ ನೀರಿನ ಮೂಲಕ ಸಾಂಕ್ರಾಮಿಕ ರೋಗ ಹರಡುವ ಭೀತಿಯ ಕುರಿತು ಮಾಹಿತಿ ಅರಿತ ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿಯವರು ದುರಸ್ಥಿ ಕಾರ್ಯ ವಿಭಾಗಕ್ಕೆ ಸೂಚಿಸಿದರು. ಮಧ್ಯಾಹ್ನದ ಒಳಗೆ ಒಡೆದಿರುವ ನೀರಿನ ಪೈಪ್ ದುರಸ್ಥಿ ಕಾರ್ಯ ನಡೆದಿದೆ. ಅಧಿಕಾರಿಗಳ ಸ್ಪಂಧನೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.