ನಿಡ್ಪಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ಪುತ್ತೂರು ತಾಲೂಕು ಇದರ ಮಾರ್ಗದರ್ಶನದಲ್ಲಿ ಶ್ರೀ ಪದ್ಧತಿ ಯಾಂತ್ರೀಕೃತ ಭತ್ತ ಬೇಸಾಯ ಯಂತ್ರ ಶ್ರೀ ಕಾರ್ಯಕ್ರಮ ದ ಪ್ರಾತ್ಯಕ್ಷಿಕೆ ನೆಲ್ಯಾಡಿ ವಲಯದ ಪಡುಬೆಟ್ಟು ಕಾರ್ಯಕ್ಷೇತ್ರದ ಹಾರ್ಪಳ ಜೋನ್ ಮೊಂತೇರೊರವರ ಗದ್ದೆಯಲ್ಲಿ ಜು.2 ರಂದು ನಡೆಯಿತು.

ಕಾರ್ಯಕ್ರಮ ವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕರಾವಳಿ ಪ್ರಾದೇಶಿಕ ನಿರ್ದೇಶಕರಾದ ವಸಂತ ಸಾಲ್ಯಾನ್ ಯಾಂತ್ರಿಕೃತ ಭತ್ತ ಬೇಸಾದ ಬಗ್ಗೆ ಮಾಹಿತಿ ನೀಡುತ್ತಾ ಮುಖ್ಯವಾಗಿ ಪಾಲು ಬಿದ್ದ ಜಮೀನಿನಲ್ಲಿ ಯಾಂತ್ರೀಕೃತ ವಾಗಿ ಬೇಸಾಯವನ್ನು ಮಾಡಿದರೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯಲು ಸಾಧ್ಯ ಎಂಬುದಾಗಿ ತಿಳಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ಗಂಗಾಧರ ಶೆಟ್ಟಿ ಸಂದರ್ಭೊಚಿತವಾಗಿ ಮಾತನಾಡಿದರು. ಸಿ.ಎಚ್.ಎಸ್.ಸಿ ಯೋಜನಾಧಿಕಾರಿ ಅಶೋಕ್ ರವರು ಯಾಂತ್ರಿಕೃತ ಬೇಸಾಯದ ಬಗ್ಗೆ ತರಬೇತಿ ನೀಡಿದರು. ತಾಲೂಕಿನ ಯೋಜನಾಧಿಕಾರಿ ಜನಾರ್ಧನ ಎಸ್ ಹಾಗೂ ಜನಜಾಗೃತಿ ವೇದಿಕೆ ವಲಯಾಧ್ಯಕ್ಷರಾದ ಜಯಾನಂದ ಬಂಟ್ರೀಯಾಲ್ , ಯೋಜನಾಧಿಕಾರಿ ವಿನೋದ್ ಉಪಸ್ಥಿತರಿದ್ದರು. ಮನೆಯ ಯಜಮಾನ ಜೋನ್ ಮೊಂತೇರೊ ಅಧ್ಯಕ್ಷತೆ ವಹಿಸಿದರು. ತಾಲೂಕಿನ ಕೃಷಿ ಮೇಲ್ವಿಚಾರಕಾರದ ಉಮೇಶ್ ಕಾರ್ಯಕ್ರಮ ನಿರೂಪಿಸಿ ನೆಲ್ಯಾಡಿ ವಲಯದ ಮೇಲ್ವಿಚಾರಕ ಸಂದೇಶ್ ಪಿ .ಬಿ ರವರು ಸ್ವಾಗತಿಸಿ ಸೇವಾಪ್ರತಿನಿಧಿ ಹೇಮಾವತಿ ವಂದಿಸಿದರು. ಯೋಜನೆಯ ಸದಸ್ಯರು, ಭತ್ತ ಕೃಷಿಕರು ಪಾಲ್ಗೊಂಡರು.
