ಪುತ್ತೂರು: ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯ ರೋಜ್ ಗಾರ್ ದಿನ ಮತ್ತು ಜಲಸಂರಕ್ಷಣಾ ಅಭಿಯಾನದ ಬಗ್ಗೆ ಜು.1ರಂದು ವಿಶೇಷ ಸಭೆ ನಡೆಸಲಾಯಿತು.
ಸದ್ರಿ ಸಭೆಯಲ್ಲಿ ಪಂಚಾಯತ್ ನ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಅಬ್ದುಲ್ ರಹಿಮಾನ್, ಅಭಿವೃದ್ದಿ ಅಧಿಕಾರಿ ಶ್ರೀ ವಿಲ್ಪ್ರೆಡ್ ಲಾರೆನ್ಸ್ ರೋಡ್ರಿಗಸ್, ಲೆಕ್ಕ ಸಹಾಯಕರಾದ ರವಿಚಂದ್ರ, ನರೇಗ ತಾಂತ್ರಿಕ ಸಹಾಯಕರಾದ ಕುಮಾರಿ ಶ್ರೀಲಕ್ಷ್ಮೀ, ಕುಮಾರಿ ಸವಿತಾ ಲೋಬೋ, ಪಂಚಾಯತ್ ಸಿಬ್ಬಂದಿಗಳು ಮತ್ತು ದಿವ್ಯ ಜ್ಯೋತಿ ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಈ ಸಭೆಯಲ್ಲಿ ನರೇಗ ಯೋಜನೆಯ ಸಮರ್ಪಕ ಅನುಷ್ಠಾನದ ಬಗ್ಗೆ ಮಾಹಿತಿ ನೀಡಲಾಯಿತು.ಪಂಚಾಯತ್ ಸಿಬ್ಬಂದಿ ಮಹಾಲಿಂಗ ಸ್ವಾಗತಿಸಿ, ಲೆಕ್ಕ ಸಹಾಯಕ ರವಿಚಂದ್ರ ಧನ್ಯವಾದ ಸಮರ್ಪಿಸಿದರು.