HomePage_Banner
HomePage_Banner
HomePage_Banner
HomePage_Banner

ಬೆಟ್ಟಂಪಾಡಿ: ವರ್ಗಾವಣೆ ಗೊಂಡ ಸಿಬ್ಬಂದಿಗೆ ಬೀಳ್ಕೊಡುಗೆ, ಹಲವರಿಗೆ ಗೌರವಾರ್ಪಣೆ

Puttur_Advt_NewsUnder_1
Puttur_Advt_NewsUnder_1
  • ಪಂಚಾಯತ್ ಸದಸ್ಯನಾಗಿ ಜನರ ವಿಶ್ವಾಸ ಗಳಿಸಲು ಅವಕಾಶ- ರಾಧಾಕೃಷ್ಣ ಬೋರ್ಕರ್
ನಿಡ್ಪಳ್ಳಿ; ರಾಜಕೀಯ ಬಿಟ್ಟು ಕೆಲಸ ಮಾಡಿದರೆ ಗ್ರಾಮದ ಅಭಿವೃದ್ಧಿ ಸಾಧ್ಯ. ಅಲ್ಲದೆ ಗ್ರಾಮದ ಜನರ ವಿಶ್ವಾಸ ಗಳಿಸಲು ಪಂಚಾಯತ್ ಸದಸ್ಯನಾಗಿ ಅವಕಾಶ ಸಿಕ್ಕಿದೆ ಎಂದು ತಾಲೂಕು ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಹೇಳಿದರು.
ಅವರು ಜೂ.29 ರಂದು ಬೆಟ್ಟಂಪಾಡಿ ಸಮುದಾಯ ಭವನದಲ್ಲಿ ನಡೆದ ಬೀಳ್ಕೊಡುಗೆ ಮತ್ತು ಗೌರವಾರ್ಪಣೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ ಪಂಚಾಯತ್ ಸದಸ್ಯನಾಗಿ ಮಾಡಿದ ಅಭಿವೃದ್ಧಿ ಕಾರ್ಯಗಳು ಮುಂದಿನ ಚುನಾವಣೆಯೆಂಬ ಪರೀಕ್ಷೆಯಲ್ಲಿ ಫಲಿತಾಂಶ ನೀಡುತ್ತದೆ. ಇಲ್ಲಿಯ ಎಲ್ಲಾ ಸದಸ್ಯರ ಸಹಕಾರದಿಂದ ಉತ್ತಮ ಕೆಲಸಗಳು ನಡೆದಿದ್ದು ತಾಲೂಕು ಪಂಚಾಯತ್ ಸದಸ್ಯನಾಗಿ ಈ ಗ್ರಾಮಕ್ಕೆ ನಾನು ಕೂಡ  ಅಳಿಲು ಸೇವೆ ನೀಡಿದ್ದು ಮುಂದೆ ಇನ್ನಷ್ಟು ಸಹಕಾರ ನೀಡುವುದಾಗಿ ತಿಳಿಸಿ ವರ್ಗಾವಣೆ ಗೊಂಡ ರಾಮಣ್ಣ ನಾಯ್ಕರಿಗೆ ಶುಭ ಹಾರೈಸಿದರು.

ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ತಾಲೂಕು ಪಂಚಾಯತ್ ಸದಸ್ಯೆ ಮೀನಾಕ್ಷಿ ಮಂಜುನಾಥ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಇಲೆಕ್ಟ್ರಿಕಲ್ ಗುತ್ತಿಗೆದಾರ ವೆಂಕಟ್ರಮಣ ಘಾಟೆ ಕಳೆದ ಐದು ವರ್ಷಗಳ ಅವದಿಯಲ್ಲಿ ಪಂಚಾಯತ್ ವತಿಯಿಂದ ನಡೆದ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತನಾಡಿ ಗ್ರಾಮಸ್ಥರ ಪರವಾಗಿ ಆಡಳಿತ ಮಂಡಳಿಗೆ ಅಭಿನಂದನೆ ಸಲ್ಲಿಸಿದರು.
ಗೌರವಾರ್ಪಣೆ;  ಕಳೆದ ಸುಮಾರು20 ವರ್ಷಗಳ ಕಾಲ ಬಿಲ್ ಕಲೆಕ್ಟರ್ ಆಗಿ ಕರ್ತವ್ಯ ಸಲ್ಲಿಸಿ ಇದೀಗ ಕಾರ್ಯದರ್ಶಿಯಾಗಿ ಭಡ್ತಿ ಗೊಂಡು ಕೇಪು ಪಂಚಾಯತಿಗೆ ವರ್ಗಾವಣೆ ಗೊಂಡ ರಾಮಣ್ಣ ನಾಯ್ಕ ಇವರನ್ನು ತಾಲೂಕು ಪಂಚಾಯತ್ ಅಧ್ಯಕ್ಷರು ಸನ್ಮಾನಿಸುವ ಮೂಲಕ ಬೀಳ್ಕೊಡಲಾಯಿತು.  ಕಳೆದ ಐದು ವರ್ಷಗಳಲ್ಲಿ ಪಂಚಾಯತ್ ವ್ಯಾಪ್ತಿಯಲ್ಲಿ ಗುತ್ತಿಗೆದಾರರಾಗಿ ಕಾಮಗಾರಿ ನಡೆಸಿದ ಪಿಡಬ್ಲ್ಯೂಡಿ ಗುತ್ತಿಗೆದಾರ ಅಪ್ಪಣ್ಣ ನಾಯ್ಕ  ಕಟೀಲ್ತಡ್ಕ, ಪಂಚಾಯತ್ ನ ಸೋಲಾರ್ ಸಿಸ್ಟಮ್ ನೆರವೇರಿಸಿ ಕೊಟ್ಟ ಶ್ಯಾಂ ಜಿತ್ ರೈ, ನೂತನ ಗುತ್ತಿಗೆದಾರ ನವೀನ ಕುಮಾರ್ ಕಕ್ಕೂರು, ತಿರುಪತಿ ಎಲೆಕ್ಟ್ರಿಕಲ್ ನ ವೆಂಕಟ್ರಮಣ ಘಾಟೆ ಇವರನ್ನು ಗೌರವಿಸಲಾಯಿತು. ತಾಲೂಕು ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಹಾಗೂ ತಾಲೂಕು ಪಂಚಾಯತ್ ಸದಸ್ಯೆ ಮೀನಾಕ್ಷಿ ಮಂಜುನಾಥ, ಕಾರ್ಯದರ್ಶಿ ಬಾಬು ನಾಯ್ಕ  ಇವರನ್ನೂ ಕೂಡ ಪಂಚಾಯತ್ ಆಡಳಿತ ಮಂಡಳಿಯ ವತಿಯಿಂದ ಗೌರವಿಸಲಾಯಿತು. ಪ್ರಸ್ತುತ ಆಡಳಿತ ಮಂಡಳಿಯ ಅದಿಕಾರವದಿ ಮುಗಿದ ಕಾರಣ    ಪಂಚಾಯತಿನ ಎಲ್ಲಾ ಸದಸ್ಯರನ್ನೂ ಕೂಡ ಈ ಸಂದರ್ಭದಲ್ಲಿ ಶಾಲು ಹೊದಿಸಿ ಗೌರವಿಸಲಾಯಿತು.ಆಡಳಿತ ಅವದಿಯಲ್ಲಿ ಕೊನೆಯ ಎರಡೂವರೆ ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅಧ್ಯಕ್ಷೆ ಬೇಬಿ ಜಯರಾಮರವರನ್ನು ಗುತ್ತಿಗೆದಾರ ಅಪ್ಪಣ್ಣ ನಾಯ್ಕರವರ ನೇತೃತ್ವದಲ್ಲಿ ಶಾಲು ಹೊದಿಸಿ  ಚಿನ್ನದ ಉಂಗುರ ತೊಡಿಸಿ ಸನ್ಮಾನಿಸಲಾಯಿತು.ಪಂಚಾಯತ್ ಉಪಾಧ್ಯಕ್ಷೆ ಭವಾನಿ. ಕೆ, ಸದಸ್ಯರಾದ ರಮೇಶ್ ಶೆಟ್ಟಿ, ಜಗನ್ನಾಥ ರೈ ಕೊಮ್ಮಂಡ, ಪ್ರಕಾಶ್ ರೈ ಬೈಲಾಡಿ, ವಿನೋದ್ ರೈ, ಐತ್ತಪ್ಪ. ಜಿ, ಮೊಯಿದುಕುಂಞ ಕೋನಡ್ಕ, ರಕ್ಷಣ್ ರೈ, ಉಮಾವತಿ, ಪಾರ್ವತಿ, ಶಾಲಿನಿ ಘಾಟೆ, ಪುಷ್ಪಲತಾ, ಭವಾನಿ. ಪಿ, ದಿನೇಶ್. ಜಿ ಉಪಸ್ಥಿತರಿದ್ದರು.
ಪಿಡಿಒ ಶಾಂತಾರಾಮ ಎನ್ ಸ್ವಾಗತಿಸಿ ಲಿಟ್ಲ್ ಫ್ಲವರ್ ಶಾಲಾ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು. ನಂತರ ಅಪ್ಪಣ್ಣ ನಾಯ್ಕರ ಪ್ರಾಯೋಜಕತ್ವದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.