ಪುತ್ತೂರು: 9 ತಿಂಗಳ ಹಿಂದೆ ಗಾರೆ ಕೆಲಸಕ್ಕೆಂದು ಹೋದ ಕೊಡಿಪ್ಪಾಡಿಯ ಯುವಕನೊಬ್ಬ ನಾಪತ್ತೆಯಾಗಿದ್ದಾರೆಂದು ಆತನ ಸಹೋದರೊಬ್ಬರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕೊಡಿಪ್ಪಾಡಿ ನಿವಾಸಿ ನಾರಾಯಣ ನಾಯ್ಕ ಎಂಬವರ ಪುತ್ರ ರಕ್ಷಿತ್ ಕುಮಾರ್ (27ವ)ರವರು ನಾಪತ್ತೆಯಾದವರು. 2019ರ ನವೆಂಬರ್ ತಿಂಗಳಲ್ಲಿ ಗಾರೆ ಕೆಲಸಕ್ಕೆಂದು ಕಾಸರಗೋಡಿಗೆ ಹೋಗಿದ್ದು, ಈ ನಡುವೆ ಕಾಸರಗೋಡಿನಿಂದ 2 ಬಾರಿ ಮನೆಗೆ ಫೋನ್ ಕರೆ ಮಾಡಿ ಮಾತನಾಡಿದ್ದರು. ಬಳಿಕ ಕರೆ ಮಾಡಿಲ್ಲ. ಈ ನಿಟ್ಟಿನಲ್ಲಿ ಆತಂಕಿತರಾದ ಮನೆ ಮಂದಿ ರಕ್ಷಿತ್ ಅವರ ಮೊಬೈಲ್ ನಂಬರ್ಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಎಂದು ಬರುತ್ತಿತ್ತು. ಹಾಗಾಗಿ ಇದೀಗ ರಕ್ಷಿತ್ ನಾಪತ್ತೆಯಾಗಿದ್ದಾರೆಂದು ಆತನ ಸಹೋದರ ಮನೋಜ್ ಕುಮಾರ್ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.