HomePage_Banner
HomePage_Banner
HomePage_Banner
HomePage_Banner

ಉಪ್ಪಿನಂಗಡಿ ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಸಕ, ಜಿ.ಪಂ, ತಾ.ಪ. ಸದಸ್ಯರಿಂದ ರೂ. 8 ಕೋಟಿ ಅಭಿವೃದ್ಧಿ ಕಾಮಗಾರಿ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಶಾಸಕ ಸಂಜೀವ ಮಠಂದೂರು ಅವರ ೨ ವರ್ಷದ ಅವಧಿಯಲ್ಲಿ, ಜಿಲ್ಲಾ ಪಂಚಾಯಿತಿ ಸದಸ್ಯೆಯಾಗಿರುವ ಶಯನಾ ಜಯಾನಂದ ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯೆಯಾಗಿರುವ ಸುಜಾತಕೃಷ್ಣ ಆಚಾರ್ಯ ಇವರುಗಳ ನಾಲೂವರೆ ವರ್ಷಗಳ ಅವಧಿ ಸೇರಿದಂತೆ ಒಟ್ಟು ಒಟ್ಟು ೩ ಮಂದಿ ಜನಪ್ರತಿನಿಧಿಗಳಿಂದ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು ೮ ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿ ನಡೆದಿರುವುದಾಗಿ ಬಿ.ಜೆ.ಪಿ. ಉಪ್ಪಿನಂಗಡಿ ಮಂಡಲ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್‍ಯದರ್ಶಿ ಸುರೇಶ್ ಅತ್ರಮಜಲು ತಿಳಿಸಿದರು.

ಅವರು ಜೂ. ೩೦ರಂದು ಉಪ್ಪಿನಂಗಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕಾಮಗಾರಿಗಳ ವಿವರ ನೀಡಿದರು. ಶಾಸಕ ಸಂಜೀವ ಮಠಂದೂರು ಅವರು ಕಳೆದ ೨ ವರ್ಷದಲ್ಲಿ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉಪ್ಪಿನಂಗಡಿ ನಾಲಾಯಿಗುಂಡಿ ಎಂಬಲ್ಲಿ ೧.೪೫ ಕೋಟಿ ವೆಚ್ಚದಲ್ಲಿ ಕಿಂಡಿ ಅಣೆಕಟ್ಟು, ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಾಣಕ್ಕೆ ೧.೫೦ ಕೋಟಿ, ಉಪ್ಪಿನಂಗಡಿ ಗ್ರಾಮದ ೬ ವಾರ್ಡುಗಳ ರಸ್ತೆ ಅಭಿವೃದ್ಧಿಗೆ ೧.೫೧ ಕೋಟಿ, ಉಪ್ಪಿನಂಗಡಿ ಶ್ರೀ ಆಂಜನೇಯ ದೇವಸ್ಥಾನದ ಬಳಿ ನದಿಗೆ ತಡೆಗೋಡೆಗೆ ೫೦ ಲಕ್ಷ, ಉಪ್ಪಿನಂಗಡಿ ಹೋಬಳಿ ರೈತ ಸಂಪರ್ಕ ಕೇಂದ್ರಕ್ಕೆ ೫೦ ಲಕ್ಷ, ಉಪ್ಪಿನಂಗಡಿ-ನಿನ್ನಿಕಲ್ಲು ರಸ್ತೆ ಡಾಂಬರೀಕರಣಕ್ಕೆ ೫೦ ಲಕ್ಷ ಸೇರಿದಂತೆ ಇತರೇ ಹಲವು ಕಾಮಗಾರಿಗಳನ್ನು ಒಳಗೊಂಡಂತೆ ೬ ಕೋಟಿ ೭೭ ಲಕ್ಷ ರೂಪಾಯಿಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ:
ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀಮತಿ ಶಯನಾ ಜಯಾನಂದರವರ ಮೂಲಕ ಉಪ್ಪಿನಂಗಡಿ ಗ್ರಾಮದ ರಸ್ತೆ ಅಭಿವೃದ್ಧಿಗೆ ೧೫ ಲಕ್ಷದ ೮೦ ಸಾವಿರ ರೂಪಾಯಿ, ಉಪ್ಪಿನಂಗಡಿ ನೂಜಿ ಎಂಬಲ್ಲಿ ನೀರಿನ ಟ್ಯಾಂಕ್ ರಚನೆ ೫ ಲಕ್ಷ, ಪುಳಿತ್ತಡಿ ಬಳಿ ತೋಡಿಗೆ ಕಿಂಡಿ ಅಣೆಕಟ್ಟು ೨ ಲಕ್ಷದ ೭೨ ಸಾವಿರ, ಉಪ್ಪಿನಂಗಡಿ ದೇವಸ್ಥಾನದ ಬಳಿ ಹೈಮಾಸ್ಕ್ ೫ ಲಕ್ಷ, ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ದುರಸ್ಥಿಗಾಗಿ ೪ ಲಕ್ಷ, ಉಪ್ಪಿನಂಗಡಿ ಪಶು ಸಂಗೋಪನಾ ಕೇಂದ್ರಕ್ಕೆ ೩ ಲಕ್ಷ, ಉಪ್ಪಿನಂಗಡಿ ಗ್ರಾಮದ ಹೈಸ್ಕೂಲ್‌ನಲ್ಲಿ ಕುಡಿಯುವ ನೀರಿಗಾಗಿ ೨ ಲಕ್ಷ ಇತರೇ ಹಲವು ಕಾಮಗಾರಿಗಳು ಒಳಗೊಂಡಂತೆ ಒಟ್ಟು ೫೦ ಲಕ್ಷದ ೨೪ ಸಾವಿರ ರೂಪಾಯಿ ಅನುದಾನದಲ್ಲಿ ಕಾಮಗಾರಿಗಳು ನಡೆದಿರುವುದಾಗಿ ತಿಳಿಸಿದರು.

ತಾಲ್ಲೂಕು ಪಂಚಾಯಿತಿ:
ತಾಲ್ಲೂಕು ಪಂಚಾಯಿತಿ ಸದಸ್ಯೆ ಶ್ರೀಮತಿ ಸುಜಾತಕೃಷ್ಣ ಆಚಾರ್ಯರವರ ಮೂಲಕ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಉಪ್ಪಿನಂಗಡಿ ಗ್ರಾಮದ ನಿನ್ನಿಕಲ್, ಚರ್ಚ್, ರಾಮನಗರ, ಪೇಟೆ, ಪುಳಿತ್ತಡಿ, ಕೆರೆಮೂಲೆ, ಕೊಪ್ಪಳ, ಪೆರಿಯಡ್ಕ ಅಂಗನವಾಡಿ ಕೇಂದ್ರಗಳ ಅಭಿವೃದ್ಧಿಗೆ ಒಟ್ಟು ೬ ಲಕ್ಷದ ೩೮ ಸಾವಿರ ರೂಪಾಯಿ, ಪರಿಶಿಷ್ಠ ಜಾತಿ ಕಾಲನಿ ಅಭಿವೃದ್ಧಿಗೆ ೫ ಲಕ್ಷದ ೭೫ ಸಾವಿರ ರೂಪಾಯಿ, ರಸ್ತೆ ಅಭಿವೃದ್ಧಿಗೆ ೭ ಲಕ್ಷದ ೫೦ ಸಾವಿರ ರೂಪಾಯಿ, ಉಪ್ಪಿನಂಗಡಿ ಮತ್ತು ಪುಳಿತ್ತಡಿ ಮಠ ದ.ಕ.ಜಿ.ಪ. ಶಾಲಾ ಅಭಿವೃದ್ಧಿಗೆ ೪ ಲಕ್ಷದ ೫೦ ಸಾವಿರ, ಉಪ್ಪಿನಂಗಡಿ ನೆರೆ ಸಂತ್ರಸ್ತರ ಕಾಲನಿ ಅಭಿವೃದ್ಧಿಗೆ ೩ ಲಕ್ಷದ ೬೬ ಸಾವಿರ ರೂಪಾಯಿ ಸೇರಿದಂತೆ ಇತರೇ ಹಲವು ಕಾಮಗಾರಿಗಳು ಒಳಗೊಂಡಂತೆ ಒಟ್ಟು ೩೫ ಲಕ್ಷದ ೬೯ ಸಾವಿರ ರೂಪಾಯಿ ಅನುದಾನದಲ್ಲಿ ಕಾಮಗಾರಿಗಳು ನಡೆದಿರುವುದಾಗಿ ತಿಳಿಸಿದರು.

ಸರ್ಕಾರಕ್ಕೆ ಪ್ರಸ್ತಾವಣೆಗಳು:
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಎರಡು ಬದಿ ನದಿಗೆ ತಡೆಗೋಡೆ ರಚನೆ, ಉಪ್ಪಿನಂಗಡಿಗೆ ಸುಸಜ್ಜಿತ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ,
ಉಪ್ಪಿನಂಗಡಿ ಸರ್ಕಾರಿ ಜೂನಿಯರ್ ಕಾಲೇಜಿನ ಹೊಸ ಕಟ್ಟಡ ನಿರ್ಮಾಣಕ್ಕಾಗಿ, ಉಪ್ಪಿನಂಗಡಿ ಗ್ರಾಮಕ್ಕೆ ಸಮಗ್ರ ಒಳಚರಂಡಿ ವ್ಯವಸ್ಥೆ, ಉಪ್ಪಿನಂಗಡಿ ಗ್ರಾಮದಲ್ಲಿ ಐ.ಟಿ.ಐ. ಕಾಲೇಜು ಸ್ಥಾಪನೆ, ರಾಷ್ಟ್ರೀಯ ಹೆದ್ದಾರಿಯಿಂದ ಸಿ.ಎ. ಬೇಂಕ್ ತನಕ ಚತುಷ್ಪತ ರಸ್ತೆ, ಕೂಟೇಲು ಬಳಿ ನೇತ್ರಾವತಿ ನದಿಗೆ ಕಿಂಡಿ ಅಣೆಕಟ್ಟು ಮೊದಲಾದ ಕಾಮಗಾರಿಗಳಿಗೆ ಶಾಸಕರ ಮೂಲಕ ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸಲಾಗಿದೆ ಎಂದು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಿ.ಜೆ.ಪಿ. ಹಿಂದುಳಿದ ವರ್ಗ ಮೋರ್ಚಾ ಗ್ರಾಮಾಂತರ ಮಂಡಲ ಅಧ್ಯಕ್ಷ ಸುನಿಲ್ ಕುಮಾರ್ ದಡ್ಡು, ಪಕ್ಷದ ಪದಾಧಿಕಾರಿಗಳಾದ ಚಂದ್ರಶೇಖರ ಮಡಿವಾಳ, ಗೋಪಾಲ ಹೆಗ್ಡೆ, ರಮೇಶ್ ಬಂಡಾರಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.