ಪುತ್ತೂರು: ಆಯುಷ್ ಫೆಡರೇಶನ್ ಆಫ್ ಇಂಡಿಯಾ(ಎಎಫ್ಐ) ಇದರ ದ.ಕ. ಘಟಕದ ನೇತೃತ್ವದಲ್ಲಿ ಎಎಫ್ಐ ಪುತ್ತೂರು ಹಾಗೂ ಆಯುಷ್ ಇಲಾಖೆ ದ.ಕ. ಜಿಲ್ಲೆ ಇವರ ಸಹಯೋಗದಲ್ಲಿ ಕೇಂದ್ರ ಸರಕಾರದಿಂದ ಪ್ರಮಾಣೀಕರಿಸಲ್ಪಟ್ಟ ಆಯುಷ್ ರೋಗನಿರೋಧಕ ಮಾತ್ರೆಗಳ ಕಿಟ್ನ್ನು ಪುತ್ತೂರು ನಗರ ಪೋಲೀಸರಿಗೆ ನೀಡುವ ಮೂಲಕ ವೈದ್ಯರ ದಿನಾಚರಣೆಯನ್ನು ಪುತ್ತೂರಿನ ಆಯುಷ್ ವೈದ್ಯರು ವಿಶಿಷ್ಟವಾಗಿ ಆಚರಿಸಿದರು.
ಎಎಫ್ಐ ಪುತ್ತೂರು ಘಟಕದ ಅಧ್ಯಕ್ಷ ಡಾ.ರವಿಶಂಕರ ಪೆರುವಾಜೆರವರು ಇದರ ಉಪಯೋಗದ ಬಗ್ಗೆ, ನಮ್ಮಶರೀರದ ರೋಗನಿರೋಧಕ ಹೆಚ್ಚಿಸುವ ಅಗತ್ಯದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ದ.ಕ. ಜಿಲ್ಲಾಧ್ಯಕ್ಷ ಡಾ.ನಾರಾಯಣ ಅಸ್ರ, ಪುತ್ತೂರು ಘಟಕದ ಡಾ.ಹರಿಕೃಷ್ಣ ಪಾಣಾಜೆ, ಡಾ.ಸುರೇಶ್ ಕುಮಾರ್, ಡಾ.ಶಶಿಧರ್ ಕಜೆ, ಡಾ.ಸುಧೀರ್, ಪುತ್ತೂರು ಸಂಚಾರಿ ಠಾಣಾಧಿಕಾರಿ ಚೆಲುವಯ್ಯ ಮತ್ತಿತರರು ಉಪಸ್ಥಿತರಿದ್ದರು
ಪುತ್ತೂರು ನಗರದ ೯೭ ಜನ ಪೋಲೀರು ಮತ್ತು ೧೫ ಜನ ಹೋಂಗಾರ್ಡ್ಸ್ರವರಿಗೆ ಆಯಷ್ ಕಿಟ್ನ್ನು ಈ ಸಂದರ್ಭದಲ್ಲಿ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.